Advertisement

400 ವರ್ಷಗಳ ಹಿಂದೆ ಸಂಭವಿಸಿತ್ತು ಸಂಗಮ!ಬಾಹ್ಯಾಕಾಶದಲ್ಲಿ ಡಿ.21ರ ರಾತ್ರಿ ಸಹಸ್ರಮಾನದ ಅಚ್ಚರಿ

06:32 PM Dec 21, 2020 | Nagendra Trasi |

ಮಣಿಪಾಲ: ಬಾಹ್ಯಾಕಾಶ (ನಭೋಮಂಡಲ)ದಲ್ಲಿ ಶತಮಾನ/ಸಹಸ್ರಮಾನಗಳಿಗೊಮ್ಮೆ ನಡೆಯುವ ಕೌತುಕಕ್ಕೆ ಸೋಮವಾರ(ಡಿಸೆಂಬರ್ 21, 2020) ಮತ್ತೊಮ್ಮೆ ಸಾಕ್ಷಿಯಾಗಲಿದ್ದು, ಇಂದು ರಾತ್ರಿ ಗುರು ಮತ್ತು ಶನಿ ಗ್ರಹದ ಸಂಗಮ ನಡೆಯಲಿದೆ. ಇಂತಹ ಅತ್ಯಪರೂಪದ ಘಟನೆ ಬರೋಬ್ಬರಿ 400 ವರ್ಷಗಳ(1623) ಹಿಂದೆ ಸಂಭವಿಸಿತ್ತು. ಇನ್ನು 2080ರಲ್ಲಿ ಮುಂದಿನ ಸಂಗಮ ಸಂಭವಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

Advertisement

ವಿಜ್ಞಾನಿಗಳ ಪ್ರಕಾರ, ಸೋಮವಾರ ರಾತ್ರಿ 6.30ರಿಂದ 7-30ರವರೆಗೆ ಗುರು ಮತ್ತು ಶನಿ ಗ್ರಹದ ಸಂಗಮ ನಡೆಯಲಿದ್ದು, ಇದರ ವೀಕ್ಷಣೆಗಾಗಿ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಾರಾಲಯದ ಅಧಿಕಾರಿಗಳು ಐಎಎನ್ ಎಸ್ ಗೆ ತಿಳಿಸಿದ್ದಾರೆ.

ಸೂರ್ಯನಿಂದ 150 ಕಿಲೋ ಮೀಟರ್ ದೂರದಲ್ಲಿರುವ ಶನಿಗ್ರಹ ಮತ್ತು ಸೂರ್ಯನಿಂದ 76 ಕೋಟಿ ಕಿಲೋ ಮೀಟರ್ ದೂರದಲ್ಲಿರುವ ಗುರು ಗ್ರಹ ಡಿಸೆಂಬರ್ 21ರ ರಾತ್ರಿ ಒಂದೇ ಜಾಗದಲ್ಲಿ ಸಂಧಿಸುವ ಅಪರೂಪದ ಘಟನೆ ನಡೆಯಲಿದೆ.

ಸೌರಮಂಡಲದಲ್ಲಿ ನಡೆಯಲಿರುವ ಈ ಸಹಸ್ರಮಾನದ ಕೌತುಕ ವೀಕ್ಷಿಸಲು ಇಡೀ ಜಗತ್ತಿನಾದ್ಯಂತ ವಿಜ್ಞಾನಿಗಳು ಸೇರಿದಂತೆ ಆಸಕ್ತರು ಕಾದು ಕುಳಿತಿದಿದ್ದಾರೆ. ಎಲ್ಲಾ ಗ್ರಹಗಳಿಗಿಂತ ಗುರು ಅತ್ಯಂತ ದೊಡ್ಡ ಗ್ರಹ. ಇಂದು ಎರಡೂ ಗ್ರಹಗಳು ಸಮೀಪ ಬಂದಾಗ ಉಭಯ ಗ್ರಹಗಳ ನಡುವೆ 45 ಕೋಟಿ ಕಿಲೋ ಮೀಟರ್ ಅಂತರವಿರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next