Advertisement

ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಕಿರಿಯ ರೆಡ್‌ಕ್ರಾಸ್‌ ಘಟಕ ಶುರು

04:39 PM Mar 26, 2021 | Team Udayavani |

ಕೋಲಾರ: ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢ ಶಾಲೆಗಳಲ್ಲಿ ಕಿರಿಯ ರೆಡ್‌ಕ್ರಾಸ್‌ ಘಟಕ ಸ್ಥಾಪಿಸುವಂತೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸಂಬಂಧಿಸಿದ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಸೂಚನೆನೀಡಲಾಗಿದೆ. ತಿಂಗಳ ಅಂತ್ಯದ ವೇಳೆಗೆ ಜಿಲ್ಲೆಯಾದ್ಯಂತ ಎಲ್ಲಾ ಪ್ರೌಢ ಶಾಲೆಗಳಲ್ಲಿ ಭಾರತೀಯಕಿರಿಯ ರೆಡ್‌ಕ್ರಾಸ್‌ ಘಟಕ ಆರಂಭಿಸಲಾಗುವುದು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.

Advertisement

ತಮ್ಮ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯಶಾಖೆಯ ಜ್ಯೂನಿಯರ್‌ ರೆಡ್‌ ಕ್ರಾಸ್‌ ಉಪ ಸಮಿತಿಯ ಸದಸ್ಯ ಜಿ.ಶ್ರೀನಿವಾಸ್‌ ನೇತೃತ್ವದಲ್ಲಿ ಭೇಟಿಮಾಡಿದ್ದ ನಿಯೋಗದೊಂದಿಗೆ ಅವರುಮಾತನಾಡಿದರು.

ಘಟಕದ ಸದಸ್ಯತ್ವದ ಪಡೆಯಿರಿ: ಸರ್ಕಾರದ ಆದೇಶದಂತೆ ಪ್ರತಿಯೊಂದು ಪ್ರೌಢ ಶಾಲೆಯುಪ್ರತಿವರ್ಷ 100 ರೂ. ಸದಸ್ಯತ್ವ ಶುಲ್ಕ ನೀಡಿಘಟಕದ ಸದಸ್ಯತ್ವದ ಪಡೆಯಬೇಕಾಗಿದೆ. ಇದೇರೀತಿ 08, 09 10ನೇ ತರಗತಿ ವಿದ್ಯಾರ್ಥಿಯಿಂದ10 ರೂ. ಸಂಗ್ರಹಿಸಿ, 4 ರೂ. ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಗೆ ಪಾವತಿಸಿ, ಉಳಿದ 6 ರೂ. ಗಳನ್ನುಶಾಲೆಯ ಕಿರಿಯ ರೆಡ್‌ಕ್ರಾಸ್‌ ಚಟುವಟಿಕೆಗಳಿಗೆಉಪಯೋಗಿಸಿಕೊಳ್ಳಲಾಗುವುದು. ಈ ಮೂಲಕವಿದ್ಯಾರ್ಥಿಗಳಲ್ಲಿ ಮಾನವೀಯತೆ, ಸಹಕಾರ,ಸಹೋದರತ್ವ, ರಾಷ್ಟ್ರಪ್ರೇಮ ಮೂಡಿಸಲು ಶಿಕ್ಷಕರು ನೆರವಾಗಬೇಕು ಎಂದರು.

ಸಾಮಾಜಿಕ ಅಭಿವೃದ್ಧಿ: ಕಿರಿಯ ರೆಡ್‌ಕ್ರಾಸ್‌ ಜಿಲ್ಲೆಯ ಎಲ್ಲಾ ಪ್ರೌಢ ಶಾಲೆಗಳಲ್ಲಿ ಸದೃಢಪಡಿಸುವದೃಷ್ಟಿಯಿಂದ ಯುದ್ಧ ಸಮಯದಲ್ಲಿ ಗಾಯಗೊಂಡಸೈನಿಕನಿಗೆ ಹಾರೈಕೆ, ನೈಸರ್ಗಿಕ ವಿಪತ್ತು,ವಿಕೋಪಗಳು ಸಂಭವಿಸಿದಾಗ ಪರಿಹಾರ ಕಾರ್ಯ,ಆರೋಗ್ಯದ ಬಗ್ಗೆ ಅರಿವು ಮತ್ತು ಶಿಕ್ಷಣ,ರಕ್ತನಿಧಿಗಳು, ಅಂಗವಿಕಲರಿಗೆ ಸಾಧನ ಸಲಕರಣೆಗಳವಿತರಣೆ, ಪ್ರಥಮ ಚಿಕಿತ್ಸೆ ಸೇರಿದಂತೆ ಹತ್ತು ಹಲವುಸಮಾಜಿಕ ಅಭಿವೃದ್ಧಿಗಾಗಿ ರೆಡ್‌ಕ್ರಾಸ್‌ ಶಾಲೆಗಳಲ್ಲಿಕಿರಿಯ ರೆಡ್‌ಕ್ರಾಸ್‌ ಚಟುವಟಿಕೆಗಳನ್ನು ಪ್ರಮುಖಯಶಸ್ವಿ ಕಾರ್ಯವನ್ನಾಗಿ ನಿರ್ವಹಿಸುತ್ತಾ ಬಂದಿದೆ. ಇದೇ ರೀತಿ ಜಿಲ್ಲೆಯ ಪ್ರತಿ ಪ್ರೌಢಶಾಲಾ ಘಟಕದ ಒಬ್ಬರಿಗೆ ಮುಂದಿನ ದಿನಗಳಲ್ಲಿ ಸಂಪನ್ಮೂಲ ತರಬೇತಿ ನೀಡಲಾಗುವುದು ಎಂದರು.

ನಿಯೋಗದಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಜಿಲ್ಲಾ ಡೆಪುÂಟಿ ಚೇರ್ಮನ್‌ ಆರ್‌. ಶ್ರೀನಿವಾಸನ್‌, ಜಿಲ್ಲಾ ಕಾರ್ಯಕ್ರಮ ಜಾರಿ ಅಧಿಕಾರಿ ಡಾ.ಶರಣು ಗ ‌ಬ್ಬೂರ್‌, ಜಿಲ್ಲಾ ದೈಹಿಕಶಿಕ್ಷಣ ಪರಿವೀಕ್ಷಕ ಮಂಜುನಾಥ್‌, ಕೆಜಿಎಫ್‌ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿನೋದ್‌ಬಾಬು ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next