Advertisement

ಜೂ|ವಿಶ್ವಕಪ್‌ ಹಾಕಿ: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಸೋಲು

10:40 PM Apr 12, 2022 | Team Udayavani |

ಪೊಚೆಫ್ಸೂಮ್‌: ಮುಮ್ತಾಜ್‌ ಖಾನ್‌ ಅವರ ಅವಳಿ ಗೋಲುಗಳ ಹೊರತಾಗಿಯೂ ಭಾರತವು ಎಫ್ಐಎಚ್‌ ಜೂನಿಯರ್‌ ವಿಶ್ವಕಪ್‌ ಹಾಕಿ ಕೂಟದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಇಂಗ್ಲೆಂಡ್‌ ತಂಡದೆದುರು 0-3 ಗೋಲುಗಳಿಂದ ಶರಣಾಗಿ ಕಂಚಿನ ಪದಕ ಗೆಲ್ಲಲು ವಿಫ‌ಲವಾಯಿತು.

Advertisement

ನಿಗದಿತ ಅವಧಿಯ ಆಟದ ವೇಳೆ ಉಭಯ ತಂಡಗಳು 2-2 ಸಮಬಲ ಸಾಧಿಸಿದ್ದವು. ಆದರೆ ಶೂಟೌಟ್‌ನಲ್ಲಿ ಭಾರತೀಯ ವನಿತೆಯರು ಗೋಲು ದಾಖಲಿಸಲು ವಿಫ‌ಲರಾದರೆ ಇಂಗ್ಲೆಂಡ್‌ 3 ಗೋಲು ಹೊಡೆದು ಕಂಚು ಜಯಿಸಿತು.

ಭಾರತವು ಈ ಹಿಂದೆ ಜರ್ಮನಿಯಲ್ಲಿ ನಡೆದ 2013ರ ಜೂನಿಯರ್‌ ವಿಶ್ವಕಪ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿ ಚೊಚ್ಚಲ ಬಾರಿ ಕಂಚು ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next