Advertisement

Junior hockey ತಂಡದ ಕೋಚ್‌ ಪಿ.ಆರ್‌. ಶ್ರೀಜೇಶ್‌

01:32 AM Aug 10, 2024 | Team Udayavani |

ಹೊಸದಿಲ್ಲಿ : ಹಾಕಿಗೆ ವಿದಾಯ ಹೇಳಿದ ಪಿ.ಆರ್‌. ಶ್ರೀಜೇಶ್‌ ಅವರಿಗೆ ನೂತನ ಹುದ್ದೆಯೊಂದು ಹುಡುಕಿಕೊಂಡು ಬಂದಿದೆ. ಅವರಿನ್ನು ಭಾರತದ ಜೂನಿಯರ್‌ ಹಾಕಿ ತಂಡದ ಪ್ರಧಾನ ಕೋಚ್‌ ಆಗಿರುತ್ತಾರೆ. “ಹಾಕಿ ಇಂಡಿಯಾ’ ಇದನ್ನು ಪ್ರಕಟಿಸಿದೆ.

Advertisement

ಭಾರತೀಯ ಹಾಕಿ ತಂಡದ ತಡೆಗೋಡೆ ಎಂದೇ ಖ್ಯಾತರಾಗಿರುವ ಶ್ರೀಜೇಶ್‌, 2004ರಲ್ಲಿ ಜೂನಿಯರ್‌ ತಂಡದೊಂದಿಗೆ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದರು. 2006ರಲ್ಲಿ ಸೀನಿಯರ್‌ ತಂಡ ಸೇರಿಕೊಂಡರು. ಒಟ್ಟು 4 ಒಲಿಂಪಿಕ್ಸ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಎರಡು ಕಂಚಿನ ಪದಕ ಗೆದ್ದ ತಂಡದ ಭಾಗವಾಗಿದ್ದರು. 2014 ಮತ್ತು 2018ರ ಏಷ್ಯಾಡ್‌ನ‌ಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕ ಜಯಿಸಿದ ತಂಡದಲ್ಲಿದ್ದರು. 2022ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಬೆಳ್ಳಿ ಗೆದ್ದಾಗಲೂ ತಂಡದಲ್ಲಿದ್ದರು. 2021 ಮತ್ತು 2022ರಲ್ಲಿ ಎಫ್ಐಎಚ್‌ ವರ್ಷದ ಗೋಲ್‌ಕೀಪರ್‌ ಪ್ರಶಸ್ತಿ, 2021ರಲ್ಲಿ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಗೌರವಕ್ಕೆ ಭಾಜನರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next