Advertisement

ಮಿತಿಮೀರಿದ ವಾಯು ಮಾಲಿನ್ಯ; ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿದ ದಿಲ್ಲಿ ಸರ್ಕಾರ

01:49 PM Nov 04, 2022 | Team Udayavani |

ಹೊಸದಿಲ್ಲಿ: ನಗರದಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ದೆಹಲಿಯ ಪ್ರಾಥಮಿಕ ಶಾಲೆಗಳಿಗೆ ನಾಳೆಯಿಂದ ರಜೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಘೋಷಿಸಿದ್ದಾರೆ.

Advertisement

ಅಲ್ಲದೆ ಶೇ.50 ರಷ್ಟು ದೆಹಲಿ ಸರ್ಕಾರಿ ಅಧಿಕಾರಿಗಳು ಮನೆಯಿಂದಲೇ ಕೆಲಸ ಮಾಡುತ್ತಾರೆ ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ಅಲ್ಲದೆ ಖಾಸಗಿ ಕಂಪನಿಗಳೂ ಇದೇ ಕ್ರಮ ಕೈಗೊಳ್ಳುವಂತೆ ರೈ ಸಲಹೆ ನೀಡಿದ್ದಾರೆ.

ದೆಹಲಿಯ ಹಾಟ್‌ಸ್ಪಾಟ್‌ ಗಳಲ್ಲಿ ವಾಯು ಮಾಲಿನ್ಯವನ್ನು ತಡೆಯಲು ವಿಶೇಷ ಕಾರ್ಯಪಡೆಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವ ರೈ ಘೋಷಿಸಿದರು.

ಪ್ರಾಥಮಿಕ ಶಾಲೆಗಳನ್ನು ನಾಳೆಯಿಂದ ಮುಚ್ಚಲಾಗುವುದು ಮತ್ತು ನಗರದಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ 5 ರಿಂದ 7 ನೇ ತರಗತಿಗಳ ಹೊರಾಂಗಣ ಚಟುವಟಿಕೆಗಳನ್ನು ನಿರ್ಬಂಧಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಘೋಷಿಸಿದ್ದಾರೆ.

ಇದನ್ನೂ ಓದಿ:ಕುಂದೂರಿನ ರೇಣುಕಾಚಾರ್ಯ ತೋಟದಲ್ಲಿ ಚಂದ್ರಶೇಖರ್ ಅಂತ್ಯಕ್ರಿಯೆಗೆ ಸಕಲ ಸಿದ್ದತೆ

Advertisement

“ನಮ್ಮ ಸರ್ಕಾರ ಪಂಜಾಬ್‌ ನಲ್ಲಿ ಇರುವುದರಿಂದ, ಅಲ್ಲಿನ ತ್ಯಾಜ್ಯ ಸುಡುವಿಕೆಗೆ ನಾವೇ ಹೊಣೆ. ಆದರೆ ನಾವು ಅಲ್ಲಿ ಸರ್ಕಾರವನ್ನು ರಚಿಸಿ ಕೇವಲ ಆರು ತಿಂಗಳಾಗಿದೆ. ಸಮಸ್ಯೆಗಳ ಬಗ್ಗೆ ಗಮನಹರಿಸಲಾಗುತ್ತಿದೆ. ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದೇವೆ. ಸಮಸ್ಯೆ ಪರಿಹರಿಸಲು ನಮಗೆ ಒಂದು ವರ್ಷದ ಸಮಯ ನೀಡಿ” ಎಂದು ಕೇಜ್ರಿವಾಲ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next