ಶಾಲೆಗಳ ನಡುವೆ ನಡೆದ ರಾಷ್ಟ್ರಮಟ್ಟದ “ಯಂಗ್ ಶೆಫ್ ಇಂಡಿಯಾ’ ಸ್ಪರ್ಧೆಯ ಸೆಮಿಫೈನಲ್ಸ್ ನಗರದಲ್ಲಿ ನಡೆಯಲಿದೆ. ಅಂತಾರಾಷ್ಟ್ರೀಯ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜಿನ(ಐ.ಐ.ಎಚ್.ಎಂ.) ಆಶ್ರಯದಲ್ಲಿ ಸ್ಪರ್ಧೆ ನಡೆಯುತ್ತಿದೆ. ದೇಶಾದ್ಯಂತ 2,500 ಶಾಲೆಗಳ 30,000 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ವಿಜೇತರಿಗೆ 5 ಲಕ್ಷ ರು. ಮತ್ತು ಐ.ಐ.ಎಚ್.ಎಂ.ನಿಂದ ವಿದ್ಯಾರ್ಥಿವೇತನ ದೊರೆಯುವುದು.
Advertisement
ಎಲ್ಲಿ?: ಐ.ಐ.ಎಚ್.ಎಂ. ಕ್ಯಾಂಪಸ್, ಎಚ್.ಎ.ಎಲ್ 2ನೇ ಹಂತ, ಇಂದಿರಾನಗರ
ಯಾವಾಗ?: ಏಪ್ರಿಲ್ 8, ಬೆಳಗ್ಗೆ 9.30- 11.30