Advertisement
ಗುಬ್ಬಿ ಪಟ್ಟಣದಿಂದ ಚನ್ನಶೇಟ್ಟಿಹಳ್ಳಿ, ಅಮ್ಮನಘಟ್ಟ, ತಿಪ್ಪೂರು ಗ್ರಾಮಗಳು ಸೇರಿದಂತೆ ಚೇಳೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-04ಕ್ಕೆ ಸಂಪರ್ಕಿಸುವ ಈ ರಸ್ತೆಯ ಎರಡುಬದಿಯಲ್ಲಿ ಜಂಗಲ್ ಗಿಡಗಳು ಬೆಳೆದಿದ್ದು, ವಾಹನ ಸವಾರರು ದಿನನಿತ್ಯ ಓಡಾಡುವಾಗ ತೊಂದರೆಅನುಭವಿಸುವಂತಾಗಿದೆ.
ಗ್ರಾಮಗಳ ಅಕ್ಕಪಕ್ಕದ ತೋಟಗಳಲ್ಲಿ ಚಿರತೆ, ಕರಡಿ ಸೇರಿದಂತೆ ಹಲವು ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತಿರುವುದು ಜನರನ್ನು ಭಯ ಭೀತರನ್ನಾಗಿಸಿದೆ. ರಸ್ತೆಯ ಇಕ್ಕೆಲ ಗಳಲ್ಲಿ ಗುಂಪು- ಗುಂಪಾಗಿ ಬೆಳೆದಿರುವ ಪೊದೆಗಳಲ್ಲಿ ಕಾಡು ಪ್ರಾಣಿಗಳು ಆಡಗಿ ಕುಳಿತು ಕೊಳ್ಳುವುದಕ್ಕೆ ಸಹಕಾರಿಯಾಗಿದೆ. ಸಂಬಂಧಪಟ್ಟ ಇಲಾಖೆ ಯವರು ಇದನ್ನು ಪರಿಹರಿಸ ಬೇಕಾಗಿದೆ. ಇದನ್ನೂ ಓದಿ:ಮತ್ತೋರ್ವ ಸಹಾಯಕ ಸಿಬ್ಬಂದಿಗೆ ಕೋವಿಡ್: ಅಭ್ಯಾಸ ಸ್ಥಗಿತಗೊಳಿಸಿದ ಟೀಂ ಇಂಡಿಯಾ
Related Articles
ಕೆಳಕ್ಕೆ ಇಳಿಸುವುದಕ್ಕೂ ಆಗುವುದಿಲ್ಲ. ಅಪಘಾತಗಳಿಗೆ ಎಡೆ ಮಾಡಿಕೊಟ್ಟಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕಿದೆ ಎಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿದ್ದಾರೆ.
Advertisement
ಚನ್ನಶೆಟ್ಟಿಹಳ್ಳಿ, ಅಮ್ಮನಘಟ್ಟ ಸೇರಿದಂತೆ ತಿಪ್ಪೂರು ಗ್ರಾಮಗಳಿಂದ ವಿವಿಧಕೆಲಸ ನಿಮಿತ್ತ ಪಟ್ಟಣಕ್ಕೆ ಈ ರಸ್ತೆಯಲ್ಲೆ ಬರಬೇಕು. ಸಂಜೆಇದೆ ರಸ್ತೆಯಲ್ಲೇ ಹೋಗಬೇಕು.ಕಾಡು ಪ್ರಾಣಿಗಳು ಸೇರಿದಂತೆಕಳ್ಳರ ಭಯದ ಜತೆಗೆ ದಿನಕಳೆಯುವಂತಾಗಿದೆ.
-ಯತೀಶ್, ಸ್ಥಳೀಯ ರಾಜ್ಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಬೆಳೆದಿರುವ ಜಂಗಲ್ ಗಿಡಹಾಗೂ ಪೊದೆಗಳನ್ನು ತೆಗೆಯಲು ಈಗಾಗಲೇ ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದ್ದು, ಆದಷ್ಟು ಬೇಗ ರಸ್ತೆ ಬದಿಯ ಗಿಡಗಳನ್ನು ಸ್ವಚ್ಛಗೊಳಿಸಲುಕ್ರಮ ವಹಿಸುತ್ತೇನೆ.
-ವಿಜಯ್‌ಕುಮಾರ್, ಪಿಡಬ್ಲೂಡಿ ಎಂಜಿನಿಯರ್, ಗುಬ್ಬಿ -ಕೆಂಪರಾಜು ಜಿ.ಆರ್