Advertisement

ಜೂನ್‌ ತಿಂಗಳ ಪಡಿತರ ವಿತರಣೆ ಪ್ರಗತಿಯಲ್ಲಿ

02:36 PM Jun 10, 2020 | mahesh |

ಬೆಳ್ತಂಗಡಿ/ಬಂಟ್ವಾಳ/ಪುತ್ತೂರು/ಸುಳ್ಯ: ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜೂನ್‌ ತಿಂಗಳ ಪಡಿತರ ವಿತರಣೆ ಆರಂಭಗೊಂಡಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 19,390 ಕ್ವಿಂಟಾಲ್‌, ಬಂಟ್ವಾಳ ತಾಲೂಕಿನಲ್ಲಿ 29,460 ಕ್ವಿಂಟಾಲ್‌, ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ 18,410 ಕ್ವಿಂಟಾಲ್‌, ಸುಳ್ಯ ತಾಲೂಕಿನಲ್ಲಿ 8,698 ಕ್ವಿಂಟಾಲ್‌ ಅಕ್ಕಿ ವಿತರಣೆಯಾಗಲಿದೆ.

Advertisement

ಜೂನ್‌ ಮೊದಲ ವಾರವೇ ಬೆಳ್ತಂಗಡಿಯ 66, ಬಂಟ್ವಾಳದ 99, ಪುತ್ತೂರು-ಕಡಬದ 79, ಸುಳ್ಯದ 62 ಪಡಿ ತರ ಅಂಗಡಿಗಳಲ್ಲಿ ವಿತರಣೆ ಪ್ರಾರಂಭಗೊಂಡಿದೆ. ಬೆಳ್ತಂಗಡಿ ತಾಲೂಕಿ ನಲ್ಲಿ 44,805-ಬಿಪಿಎಲ್‌, ಅಂತ್ಯೋದಯ-3,356, ಎಪಿಎಲ್‌-13,642 ಪಡಿತರ ಕುಟುಂಬಗಳಿವೆ. ಬಂಟ್ವಾಳ ತಾಲೂಕಿನಲ್ಲಿ ಎಲ್ಲ ರೀತಿಯ ಪಡಿತರ ಚೀಟಿಗಳು ಸೇರಿ 83,578 ಕಾರ್ಡ್‌ ಗಳಿದ್ದು, 6,043 ಅಂತ್ಯೋದಯ ಕಾರ್ಡ್‌ಗಳು, 55,907 ಬಿಪಿಎಲ್‌ ಕಾರ್ಡ್‌ ಗಳು, 21,628 ಎಪಿಎಲ್‌ ಕಾರ್ಡ್‌ ಗಳಿವೆ. ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಅಂತ್ಯೋದಯ-3,995, ಬಿಪಿಎಲ್‌-41,108, ಎಪಿಎಲ್‌-25,600 ಫಲಾನು ಭವಿಗಳಿದ್ದಾರೆ. ಸುಳ್ಯ ತಾಲೂಕಿ ನಲ್ಲಿ ಅಂತ್ಯೋದಯ-1,553, ಬಿಪಿಎಲ್‌-19,167, ಎಪಿಎಲ್‌-11,283 ಸಹಿತ ಒಟ್ಟು 32,003 ಪಡಿತರ ಚೀಟಿದಾರರು ಇದ್ದಾರೆ. ಇವುಗಳಲ್ಲಿ ವಲಸೆ ಕಾರ್ಮಿಕರಿಗೆ, ಪಡಿತರ ಚೀಟಿ ಪಡೆಯದೆ ಇರುವ ಪ್ರತಿ ಫಲಾನುಭವಿಗೂ ಪೂರೈಸಲಾಗುತ್ತಿದೆ.

ಲಾಕ್‌ಡೌನ್‌ ಆರಂಭಿಕ ಹಂತದಲ್ಲಿ ಪಡಿತರ ವಿತರಣೆಗೆ ಅಡ್ಡಿಯಾಗಿತ್ತು. ಎಪ್ರಿಲ್‌ ಮೊದಲ ವಾರದಿಂದ ಪಡಿ ತರ ವಿತರಣೆಗೆ ಸಡಿಲಿಕೆ ಮಾಡಿ ಬಯೋ ಮೆಟ್ರಿಕ್‌ ಬದಲಿಗೆ ಒಟಿಪಿ, ಟೋಕನ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೀಗಾಗಿ ಬೆಳ್ತಂಗಡಿ ಯಲ್ಲಿ ಎಪ್ರಿಲ್‌ನಲ್ಲಿ ಶೇ. 95, ಮೇ ತಿಂಗಳಲ್ಲಿ ಶೇ. 96, ಎಪ್ರಿಲ್‌- ಮೇ ತಿಂಗಳುಗಳಲ್ಲಿ ಬಂಟ್ವಾಳದಲ್ಲಿ ಶೇ.98, ಪುತ್ತೂರು -ಕಡಬದಲ್ಲಿ ಸುಮಾರು ಶೇ. 95, ಸುಳ್ಯದಲ್ಲಿ ಶೇ. 96ರಷ್ಟು ಪಡಿತರ ವಿತರಿಸಲಾಗಿತ್ತು.

ಜೂನ್‌ ತಿಂಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 19,390 ಕ್ವಿಂ. ಅಕ್ಕಿ, 963.32 ಕ್ವಿಂ. ತೊಗರಿ ಬೇಳೆ, 896.72 ಕ್ವಿಂ. ಗೋಧಿ, ಬಂಟ್ವಾಳ ತಾಲೂಕಿನಲ್ಲಿ 29,460 ಕ್ವಿಂ. ಅಕ್ಕಿ, 1,072 ಕ್ವಿಂ. ಗೋಧಿ, 919 ಕ್ವಿಂ. ಬೇಳೆ, ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ 18,410 ಕ್ವಿಂಟಾಲ್‌ ಅಕ್ಕಿ, 902 ಕ್ವಿಂಟಾಲ್‌ ಬೇಳೆ, 822 ಕ್ವಿಂಟಾಲ್‌ ಗೋಧಿ, ಸುಳ್ಯ ತಾ|ನಲ್ಲಿ 8,698 ಕಿಂಟ್ವಾಲ್‌ ಅಕ್ಕಿ, 383 ಕ್ವಿಂಟಾಲ್‌ ಗೋಧಿ, 414 ಕ್ವಿಂಟಾಲ್‌ ಬೇಳೆ ವಿತರಣೆಯಾಗಲಿವೆ.

ಎಷ್ಟೆಷ್ಟು ಅಕ್ಕಿ-ಧಾನ್ಯ ವಿತರಣೆ
ಜೂನ್‌ನಲ್ಲಿ ಅಂತ್ಯೋದಯ ಪಡಿತರ ಚೀಟಿಗೆ ಕುಟುಂಬಕ್ಕೆ 35 ಕೆಜಿ ಅಕ್ಕಿ (ಎನ್‌ಎಫ್‌ಎಸ್‌ಎ), ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ (ಪಿಎಂಜಿಕೆಎವೈ), ತೊಗರಿ ಬೇಳೆ 2 ಕೆಜಿ, ಬಿಪಿಎಲ್‌ ಚೀಟಿಗೆ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ, ಕುಟುಂಬಕ್ಕೆ 2 ಕೆಜಿ ಗೋಧಿ, 2 ಕೆಜಿ ತೊಗರಿ ಬೇಳೆ, ಎಪಿಎಲ್‌ಗೆ ಪ್ರತಿ ಕೆಜಿಗೆ 15 ರೂ.ಗಳಂತೆ ಏಕ ಸದಸ್ಯರಾಗಿದ್ದರೆ 5 ಕೆಜಿ ಅಕ್ಕಿ, 2ಕ್ಕಿಂತ ಹೆಚ್ಚಿನ ಸದಸ್ಯರಿದ್ದರೆ 10 ಕೆಜಿ ಅಕ್ಕಿ, ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೆ ಬಿಪಿಎಲ್‌ಗೆ 10 ಕೆಜಿ ಅಕ್ಕಿ, ಎಪಿಎಲ್‌ಗೆ ಕೆಜಿಗೆ 15 ರೂ.ಗಳಂತೆ 10 ಕೆಜಿ ಅಕ್ಕಿ, ವಲಸೆ ಕಾರ್ಮಿಕರು, ಪಡಿತರ ಚೀಟಿ ಪಡೆಯದೇ ಇದ್ದವರೂ ಅಕ್ಕಿ ಪಡೆಯಬಹುದಾಗಿದೆ.

Advertisement

ವಿತರಣೆ ಸುಸೂತ್ರ
ಲಾಕ್‌ಡೌನ್‌ ಸಂದರ್ಭ ಎಲ್ಲ ಫಲಾ ನುಭವಿಗಳಿಗೆ ಅಕ್ಕಿ, ಧಾನ್ಯ ವಿತರಿ ಸಲಾಗಿದೆ. ಜೂನ್‌ ಮಾಹೆಯಲ್ಲಿ ವಲಸಿ ಗರಿಗೆ, ಪಡಿತರ ಚೀಟಿ ಇಲ್ಲದ ಬಡ ಕುಟುಂಬಗಳಿಗೆ ಅವರವರು ನೆಲೆಸಿ ರುವ ಸ್ಥಳೀಯ ಪಡಿತರ ಕೇಂದ್ರ ಗಳಲ್ಲಿ ಆಹಾರಧಾನ್ಯ ಲಭ್ಯವಿರಲಿದೆ. ವಲಸಿ ಗರಿಗೆ, ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಆಧಾರ್‌ ಕಾರ್ಡ್‌ ಕಡ್ಡಾಯ.
– ವಿಶ್ವ ಕೆ., ಆಹಾರ ನಿರೀಕ್ಷಕರು, ಬೆಳ್ತಂಗಡಿ

ಈ ತಿಂಗಳ ವಿತರಣೆ ಪ್ರಾರಂಭ
ಜೂನ್‌ ತಿಂಗಳ ವಿತರಣೆ ಪ್ರಾರಂಭಗೊಂಡಿದೆ. ಈ ತಾಲೂಕಿನವರು ಹೊರ ಭಾಗದಲ್ಲಿ ಇದ್ದಾಗ ಶೇಕಡಾವಾರು ಕಡಿಮೆಯಾಗುತ್ತದೆ. ಈ ತಿಂಗಳು 29,460 ಕ್ವಿಂ. ಅಕ್ಕಿಯ ಜತೆಗೆ ಗೋಧಿ, ಬೇಳೆಯ ವಿತರಣೆಯಾಗಲಿದೆ.
– ಶ್ರೀನಿವಾಸ್‌, ಆಹಾರ ಶಿರಸ್ತೇದಾರರು, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next