Advertisement
ಅವರು ಪಟ್ಟಣದ ಕನ್ನಿಕಾ ದೇವಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಕೊರಟಗೆರೆ ಪಟ್ಟಣದಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ಪ್ರತಿಷ್ಟಾಪನೆ ಯಾಗಿ 50 ವರ್ಷಗಳು ತುಂಬಿದ ನೆನಪಿಗಾಗಿ ಶಿಥಿಲಾವಸ್ಥೆ ತಲುಪಿರುವ ವಾಸವಿ ಕಲ್ಯಾಣ ಮಂಟಪವನ್ನು ದಾನಿಗಳಾದ ಶ್ರೀ ಗುಂಡಯ್ಯ ಶ್ರೇಷ್ಠಿರವರ ಮಕ್ಕಳಾದ ಎಂ.ಜಿ.ಸುಧೀರ್ ಮತ್ತು ಎಂ.ಜಿ.ಬದ್ರಿಪ್ರಸಾದ್ ನೇತೃತ್ವದಲ್ಲಿ 1ಕೋಟಿ ವೆಚ್ಚದಲ್ಲಿ ನೂತನವಾಗಿ ನವೀಕರಣದೊಂದಿಗೆ,ವಾಸವಿ ದೇವಾಲಯಕ್ಕೆ ರಾಜ ಗೋಪುರಕ್ಕೆ,10 ಅಡಿ ವಾಸವಿ ದೇವಿಯ ವಿಗ್ರಹ ಪ್ರತಿಷ್ಟಾಪನೆ ಹಾಗೂ ಸುವರ್ಣ ಮಹೋತ್ಸವ ಭವನ,ಅತ್ಯಾಧುನಿಕ ಭೋಜನ ಶಾಲೆ, ಹಾಗೂ ನೂತನ ವಧು ವರರ ಕೊಠಡಿಗಳನ್ನು ನಿರ್ಮಿಸಿದ್ದು, ಜೂನ್1ರಿಂದ 3ರವರೆಗೂ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟಿಸಲಾಗುವುದು ಎಂದರು.
ನಿಗಮದ ಮಾಜಿ ಅದ್ಯಕ್ಷ ಡಿ.ಎಸ್.ಅರುಣ್,ಮಾಜಿ ಪಪಂ ಸದಸ್ಯ ಶ್ರೀನಿವಾಸ್ ,ಆರ್ಯ ವೈಶ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ತಾಲೂಕು ಅದ್ಯಕ್ಷ ಸಂಪಂಗಿ ಕೃಷ್ಣಯ್ಯಶೆಟ್ಟಿ,ಗುಪ್ತ ಜೂಯಲರ್ಸ್ ಮಾಲೀಕ ನವೀನ್,ಆರ್ಯ ವೈಶ್ಯ ಮಂಡಳಿಯ ಅದ್ಯಕ್ಷ ವೆಂಕಟಾಚಲಶ್ರೆಷ್ಟಿ, ಎಂ.ಜಿ. ಬದ್ರಿ ಪ್ರಸಾದ್,ಪದ್ಮ ರಮೇಶ್, ಅಶೋಕ್ ಕುಮಾರ್,ಎಂ.ಜಿ.ಸುಧೀರ್ ಭಾಗವಹಿಸುವವರು. ಕುಂಭಾಭಿಷೇಕ ಹಾಗೂ ರಾಜ ಗೋಪುರ ಕಲಶ ಪ್ರತಿಷ್ಠಾಪನೆ
ಜೂನ್2ರಂದು ಬ್ರಾಹ್ಮಿ ಮಹೂರ್ತದಲ್ಲಿ ವಾಸವಿ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಹಾಗೂ ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿರವರ ದಿವ್ಯ ಸಾನಿಧ್ಯದಲ್ಲಿ ನೇರವೇರಲಿದೆ.
Related Articles
ಲೋಕ ಕಲ್ಯಾಣಾರ್ಥಕವಾಗಿ ಜೂನ್3 ರಂದು 8.30 ಕ್ಕೆ ವಾಸವಿ ಮಹಲ್ ನಲ್ಲಿ ಸಮಾರೋಪ ಸಮಾರಂಭದಲ್ಲಿ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ ಉಪಸ್ಥಿತಿಯಲ್ಲಿ ವಿಯೆಟ್ನಂ ದೇಶದ ಕರ್ನಾಟಕದ ರಾಯಭಾರಿ ಎನ್.ಎಸ್ ಶ್ರೀನಿವಾಸಮೂರ್ತಿ, ಪಪಂ ಸದಸ್ಯ ಪ್ರದೀಪ್ ಕುಮಾರ್, ವಿ.ಸಿ. ರಮೇಶ್ ಬಾಬು, ನಂಜುಂಡಯ್ಯಶ್ರೆಷ್ಟಿ, ಕೃಷ್ಣ ಯ್ಯ ಶ್ರೆಷ್ಟಿ ರವರ ಉಪಸ್ಥಿತಿ ಯಲ್ಲಿ ನೇರ ವೇರಲಿದ್ದು, ನಂತರ ಸಂಜೆ ಕೇರಳದ ಚಂಡೆಮೇಳ ಹಾಗೂ ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ರಾಜ ಬೀದಿಗಳಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ಮೆರವಣಿಗೆ ಏರ್ಪಡಿಸಲಾಗಿದೆ.
Advertisement