Advertisement

ಕಣ್ಮನ ಸೆಳೆಯುವ ಜಂಪ್‌ ಸೂಟ್‌

12:29 AM Feb 07, 2020 | Sriram |

ಜಂಪ್‌ಸೂಟ್‌ ಇಂದಿನ ದಿರಿಸಿನ ಮಾದರಿ. ಅದರ ಸರಳತೆಯಿಂದಲೂ ಉಡುಪು ಪ್ರಿಯರ ಮನಸೆಳೆದಿದೆ. ಜತೆಗೆ ಸರಳತೆಯಲ್ಲೂ ನಿಮ್ಮ ಅಂದವನ್ನು ಹೆಚ್ಚಿಸುವ ಇದರ ಆಯ್ಕೆ ಸಂದರ್ಭದಲ್ಲಿ ಗಮನಿಸಬೇಕಾದದ್ದು ಬಹಳಷ್ಟಿದೆ ಎನ್ನುತ್ತಾರೆ ವಿಜಿತಾ ಅಮೀನ್‌.

Advertisement

ಜಂಪ್‌ ಸೂಟ್‌ ಎಲ್ಲರಿಗೂ ಒಪ್ಪುವಂತಹ ವಿನೂತನ ಶೈಲಿಯ ಉಡುಪು. ನೋಡಲಿಕ್ಕೂ ಸರಳ. ಪ್ಯಾಂಟ್‌, ಟಾಪ್‌ಗ್ಳಿಗಿಂತ ಉತ್ತಮ ನೋಟವನ್ನು ನೀಡುವುದರಿಂದ ಹೆಚ್ಚಾಗಿ ಕಣ್ಮಣಿಯರು ಇದರತ್ತ ಮಾರು ಹೋಗುತ್ತಿದ್ದಾರೆ.

ಆಯ್ಕೆ ಹೇಗೆ?
ಅನೇಕ ಶೈಲಿಯಲ್ಲಿ ಜಂಪ್‌ ಸೂಟ್‌ ಸಿಗುವುದರಿಂದ ಆಯ್ಕೆ ಮಾಡುವಾಗ ಕೊಂಚ ಎಚ್ಚರ ವಹಿಸಬೇಕು. ನಮಗೆ ಯಾವುದು ಸೂಕ್ತವೋ, ಒಪ್ಪುತ್ತದೋ ಅದನ್ನೇ ಖರೀದಿಸಬೇಕು. ಜಂಪ್‌ ಸೂಟ್‌ ಕೊಳ್ಳುವಾಗ ಹಗಲಿನಲ್ಲಿ ಧರಿಸಲು ಕ್ಯಾಶುವಲ್‌ ಸೂಟ್‌, ಸಂಜೆಯ ವೇಳೆಗೆ ಫಾರ್ಮಲ್‌ ಸೂಟ್‌, ಶೀತ ಹವಾಮಾನವನ್ನು ಎದುರಿಸಲು ಉದ್ದವಾದ ತೋಳುಗಳುಳ್ಳ ಸ್ಟ್ರಾಪ್ಲೆಸ್‌ ಶೈಲಿಯ ಜಂಪ್‌ ಸೂಟ್‌ ಆಯ್ಕೆ ಮಾಡಿಕೊಳ್ಳಬಹುದು.

ನೀವು ಎತ್ತರವಾಗಿದ್ದರೆ ಸ್ಲಿಮ್‌ ಕ್ರಾಪ್ಡ್ ಶೈಲಿಯ ಜಂಪ್‌ ಸೂಟ್‌ ಆಯ್ಕೆ ಮಾಡಿಕೊಳ್ಳಿ. ಇದರಿಂದ ನೀವು ಇನ್ನಷ್ಟು ಸೊಗಸಾಗಿ ಕಾಣಿಸಬಹುದು. ಬಟ್ಟೆಯಲ್ಲಿ ನೀವು ಜೌಗು ಕಾಣುವುದನ್ನು ತಪ್ಪಿಸಬಹುದು.

ಫಾರ್ಮಲ್‌ ಜಂಪ್‌ಸೂಟ್‌
ಮಹಿಳೆಯರು ಸಾಮಾನ್ಯವಾಗಿ ಯಾವುದೇ ಸಮಾರಂಭಗಳಲ್ಲಿ ಭಾಗವಹಿಸುವ ಮೊದಲು ತಮ್ಮ ದಿರಿಸಿನ ಆಯ್ಕೆಯಲ್ಲಿ ತೊಡಗುವುದು ಸಹಜ. ಜಂಪ್‌ ಸೂಟ್‌ಗಳು ಸಾಮಾನ್ಯ ಉಡುಪಿನಷ್ಟೆ ಸುಂದರವಾಗಿ ಮತ್ತು ಹೊಳಪು ನೀಡುತ್ತವೆ. ನಯವಾದ ಸರಳ ಮಾದರಿಯ ಜಂಪ್‌ ಸೂಟ್‌ ತೊಡುವುದರಿಂದ ಇದು ಫಾರ್ಮಲ್‌ ಪಾರ್ಟಿಗಳಿಗೆ ಇನ್ನಷ್ಟು ಮೆರುಗನ್ನು ನೀಡುತ್ತದೆ.

Advertisement

ಕ್ಯಾಶ್ಯುವಲ್‌ ಈವೆಂಟ್‌
ಹತ್ತಿ ಮತ್ತು ಡೆನಿಮ್‌ ಗಳಂತಹ ಅಂದರೆ ಡ್ರಾಸ್ಟ್ರಿಂಗ್‌ ಸೊಂಟವನ್ನು ಒಳಗೊಂಡಿರುವಂತಹ ಸಡಿಲವಾದ ಫಿಟ್‌ ಜಂಪ್‌ಸೂಟ್‌ಗಳನ್ನು ಧರಿಸುವುದು ಉತ್ತಮ. ಜಂಪ್‌ ಸೂಟ್‌ನೊಂದಿಗೆ ಫ್ಲಾಟ್‌ ಚಪ್ಪಲಿಗಳನ್ನು ಧರಿಸುವುದಾದರೆ, ಕತ್ತರಿಸಿದ ಶೈಲಿಯ ಬೂಟ್‌ ಅಥವಾ ಲೇಸ್‌ ಅಪ್‌ ಸ್ಯಾಂಡಲ್‌ ಅನ್ನು ಆರಿಸಿಕೊಳ್ಳಿ.

ಪರಿಕರಗಳ ಆಯ್ಕೆ: ಜಂಪ್‌ ಸೂಟ್‌ ಇತರ ಉಡುಪುಗಳಿಗಿಂತ ವಿಭಿನ್ನ. ಹಾಗಾಗಿ ಇದಕ್ಕೆ ಸರಿ ಹೊಂದುವಂತಹ ಪರಿಕರಗಳನ್ನು ಆಯ್ಕೆ ಮಾಡಬೇಕು.

ಬೆಲ್ಟ್ನೊಂದಿಗೆ ಜಂಪ್‌ ಸೂಟ್‌
ಜಂಪ್‌ಸೂಟ್‌ ಅನ್ನು ಎಳೆಯಲು ಬೆಲ್ಟ್ ಒಂದು ಪ್ರಮುಖ ಪರಿಕರ. ಇದು ನೀವು ತೆಳ್ಳಗೆ ಕಾಣುವಂತೆ ಮಾಡುತ್ತದೆ. ಬೆಲ್ಟ್ ಆಯ್ಕೆಯ ಬಣ್ಣ ಮತ್ತು ನೀವು ಧರಿಸುವ ಬೂಟಿನ ಬಣ್ಣ ಒಂದೇ ಆಗಿದ್ದರೆ ಇದು ನಿಮ್ಮ ನೋಟವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಜ್ಯುವೆಲ್ಲರಿ ಆಯ್ಕೆ
ಜಂಪ್‌ಸೂಟ್‌ಗಳು ನಿಮ್ಮ ಬಗ್ಗೆ ವ್ಯಾಖ್ಯಾನ ಮಾಡಿಬಿಡುವಂಥ ಖದರ್‌ ಹೊಂದಿರುವಂಥವು. ಅಂದರೆ, ನೀವು ಧರಿಸಿದ ಬಣ್ಣ, ಶೈಲಿಯನ್ನೇ ನೋಡಿ ನೀವೆಷ್ಟು ಆಸಕ್ತಿಕರ ವ್ಯಕ್ತಿ ಎಂಬುದನ್ನೂ ಹೇಳುತ್ತದೆ. ಹಾಗಾಗಿ ನೀವು ಧರಿಸುವ ಆಭರಣಗಳು ಈ ಅಭಿಪ್ರಾಯವನ್ನು ಗಟ್ಟಿಗೊಳಿಸುವಂಥವು. ಈ ಹಿನ್ನೆಲೆಯಲ್ಲಿ ಜಾಗರೂಕತೆ ಮುಖ್ಯ. ಆದ ಕಾರಣ, ಸ್ವಲ್ಪ ದಪ್ಪನಾದ ಹಾರ ಅಥವಾ ದೊಡ್ಡ ಪೆಂಡೆಂಟ್‌ ಕಿವಿಯೋಲೆಗಳಂಥ ಎದ್ದು ಕಾಣುವಂಥ ಆಭರಣಗಳನ್ನು ಆರಿಸಿಕೊಳ್ಳಿ. ಫಾರ್ಮಲ್‌ ಜಂಪ್‌ಸೂಟ್‌ ಶೈಲಿಯೊಂದಿಗೆ ಚಿನ್ನದ ಆಭರಣ ಕೊಡುವ ಮೆರುಗೇ ವಿಭಿನ್ನವಾದುದು.

ಹೈ ಹೀಲ್ಸ್‌ನೊಂದಿಗೆ ಜಂಪ್‌ಸೂಟ್‌
ನಿಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಲು ಹೈ ಹೀಲ್ಸ್‌ ಸಹಕಾರಿ.
ಕೇಶ ವಿನ್ಯಾಸ: ಕ್ಯಾಶ್ಯುವಲ್‌ ಜಂಪ್‌ಸೂಟ್‌ಗಳಿಗಾಗಿ ಪೋನಿ ಸ್ಟೈಲ್‌ ತುಂಬಾ ಚೆನ್ನಾಗಿ ಕಾಣಬಲ್ಲದು.

Advertisement

Udayavani is now on Telegram. Click here to join our channel and stay updated with the latest news.

Next