Advertisement

ಜುಲೈ ಜಿಎಸ್‌ಟಿ ಸಂಗ್ರಹ 1.16 ಲಕ್ಷ ಕೋಟಿ : ಕಳೆದ ವರ್ಷಕ್ಕಿಂತ ಶೇ.33ರಷ್ಟು ಹೆಚ್ಚು

05:11 PM Aug 01, 2021 | Team Udayavani |

ನವದೆಹಲಿ: ಜುಲೈನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ 1.16 ಲಕ್ಷ ಕೋಟಿ ರೂ. ಆಗಿದೆ. 2020ರ ಜುಲೈಗೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷದ ಸಂಗ್ರಹ ಪ್ರಮಾಣ ಶೇ.33 ಹೆಚ್ಚಾಗಿದೆ ಎಂದು ಭಾನುವಾರ ಕೇಂದ್ರ ವಿತ್ತ ಸಚಿವಾಲಯ ಮಾಹಿತಿ ನೀಡಿದೆ.

Advertisement

ಕಳೆದ ಜುಲೈನಲ್ಲಿ 87,422 ರೂ.ಮೊತ್ತ ಜಿಎಸ್‌ಟಿ ಸಂಗ್ರಹವಾಗಿತ್ತು. 1.16 ಲಕ್ಷ ಕೋಟಿ ರೂ. ಸಂಗ್ರಹ ವಿತ್ತೀಯ ಕೊರತೆಯನ್ನು ನೀಗಿಸುವಲ್ಲಿ ಕೊಂಚ ನೆರವು ನೀಡಲಿದೆ. ಹಿಂದಿನ ಎಂಟು ತಿಂಗಳ ಅವಧಿಯನ್ನು ಹೋಲಿಕೆ ಮಾಡಿದರೆ ಸತತವಾಗಿ 1 ಲಕ್ಷ ಕೋಟಿ ರೂ. ದಾಟಿದೆ. ಜೂನ್‌ನಲ್ಲಿ ಮಾತ್ರ 92,849 ಕೋಟಿ ರೂ. ಸಂಗ್ರಹವಾಗಿತ್ತು.

ಸಂಗ್ರಹವಾಗಿರುವ 1,16,393 ಕೋಟಿ ರೂ.ಗಳ ಪೈಕಿ ಕೇಂದ್ರದ ಜಿಎಸ್‌ಟಿ ಮೊತ್ತ 22,197 ಕೋಟಿ ರೂ., ರಾಜ್ಯಗಳ ಜಿಎಸ್‌ಟಿ ಮೊತ್ತ 28,541 ಕೋಟಿ ರೂ., ಏಕೀಕೃತ ಜಿಎಸ್‌ಟಿ (ಐಜಿಎಸ್‌ಟಿ) 57,864 ಕೋಟಿ ರೂ. ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ :ಸಚಿವ ಸಂಪುಟ ರಚನೆ ಕಸರತ್ತು: ದೆಹಲಿಗೆ ಹೊರಟ ಸಿಎಂ ಬಸವರಾಜ ಬೊಮ್ಮಾಯಿ

ಸೋಂಕು ತಡೆ ನಿಯಮಗಳಲ್ಲಿ ರಿಯಾಯಿತಿ ತೋರಿಸಿದ್ದರಿಂದ ದೇಶದ ಅರ್ಥ ವ್ಯವಸ್ಥೆಯ ವಿವಿಧ ಚಟುವಟಿಕೆಗಳು ಚೇತರಿಕೆ ಕಂಡಿವೆ. ಈ ಅಂಶ ತೆರಿಗೆ ಸಂಗ್ರಹದಲ್ಲಿ ಕೂಡ ಏರಿಕೆಯಾಗಲು ಕಾರಣವಾಯಿತು ಎಂದು ಕೇಂದ್ರ ಸರ್ಕಾರ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next