Advertisement

ಜುಲೈ 30, 31ರಂದು ನಡೆಯಲಿದೆ ಸಿಇಟಿ ಪರೀಕ್ಷೆ : ವಿದ್ಯಾರ್ಥಿಗಳಿಗೆ Onlineನಲ್ಲೇ ಕೋಚಿಂಗ್

08:55 AM May 14, 2020 | sudhir |

ಬೆಂಗಳೂರು : ಎಂಜಿನಿಯರಿಂಗ್ ಮೊದಲಾದ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಜುಲೈ 30, 31ರಂದು ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಸ್ಕ್, ಸ್ಯಾನಿಟೈಜರ್ ಸಹಿತವಾಗಿ ಅಗತ್ಯ ಮುಂಜಾಗೃತ ಕ್ರಮದೊಂದಿಗೆ ಸಿಇಟಿ ಪರೀಕ್ಷೆ ನಡೆಯಲಿದೆ. ಸಿಇಟಿ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಗೆಟ್ ಸೆಟ್ ಗೋ ಮೂಲಕ Online ಕೋಚಿಂಗ್ ನೀಡಲಾಗುತ್ತಿದೆ. ಅಲ್ಲದೆ, online ಹಾಗೂ ಯೂಟ್ಯೂಬ್ ಮೂಲಕ ಕಲಿಕೆ ವಿಡಿಯೋ ಡೌನ್ಲೋಡ್ ಗೂ ಅವಕಾಶ ನೀಡಿದ್ದೇವೆ. ಎಲ್ಲ ರೀತಿಯ ಭದ್ರತೆ ಹಾಗೂ ಸುರಕ್ಷತಾ ಕ್ರಮದೊಂದಿಗೆ ಸಿಇಟಿ ನಡೆಸಲಿದ್ದೇವೆ ಎಂದರು.

ಹಾಗೆಯೇ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next