ಘಾಜಿಯಾಬಾದ್: ಹಣ್ಣಿನ ಜ್ಯೂಸ್ ನಲ್ಲಿ ಮೂತ್ರವನ್ನು ಬೆರೆಸಿ ಗ್ರಾಹಕರಿಗೆ ನೀಡಲಾಗುತ್ತಿದ್ದ ಆರೋಪದಡಿಯಲ್ಲಿ ಜ್ಯೂಸ್ ವ್ಯಾಪಾರಿಯನ್ನು ಪೊಲೀಸರು ಶುಕ್ರವಾರ (ಸೆ.14) ಬಂಧಿಸಲಾಗಿದೆ. ಇದರೊಂದಿಗೆ 15 ವರ್ಷದ ಬಾಲಕನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ್ಯೂಸ್ ಮಾರಾಟಗಾರ ಗ್ರಾಹಕರಿಗೆ ಹಣ್ಣಿನ ರಸದಲ್ಲಿ ಮಾನವ ಮೂತ್ರವನ್ನು ಬೆರೆಸಿ ನೀಡುತ್ತಿದ್ದ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯನ್ನು ಆಮಿರ್ ಎಂದು ಗುರುತಿಸಲಾಗಿದೆ. ಮಾಹಿತಿಯ ಆಧಾರದಲ್ಲಿ ಸ್ಥಳಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಆತನ ಅಂಗಡಿಯಲ್ಲಿ ಕ್ಯಾನ್ ನಲ್ಲಿ ಸಂಗ್ರಹಿಸಿದ್ದ ಮಾನವ ಮೂತ್ರವನ್ನು ಪತ್ತೆ ಮಾಡಲಾಗಿದೆ ಎಂದು ಎಸಿಪಿ ಅಂಕುರ್ ವಿಹಾರ್ ಭಾಸ್ಕರ್ ವರ್ಮಾ ಹೇಳಿದರು.
ಮೂತ್ರ ತುಂಬಿದ ಕಂಟೇನರ್ ಬಗ್ಗೆ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಯಾವುದೇ ತೃಪ್ತಿಕರ ಉತ್ತರ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಓರ್ವ ಬಾಲಾಪರಾಧಿಯನ್ನು ಬಂಧಿಸಲಾಗಿದೆ. ಸೂಕ್ರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.