Advertisement

ಜ್ಯೂಡೋ ತಾರೆ ಸುಶೀಲಾದೇವಿ ಒಲಿಂಪಿಕ್ಸ್‌ ಅರ್ಹತೆ ಅಧಿಕೃತ

12:42 PM Jun 26, 2021 | Team Udayavani |

ಹೊಸದಿಲ್ಲಿ: ಜ್ಯೂಡೋ ತಾರೆ ಸುಶೀಲಾದೇವಿ ಅವರ ಒಲಿಂಪಿಕ್ಸ್‌ ಅರ್ಹತೆ ಅಧಿಕೃತಗೊಂಡಿದೆ. ಅವರಿಗೆ “ಕಾಂಟಿನೆಂಟಲ್‌ ಕೋಟಾ’ದಡಿ ಈ ಅವಕಾಶ ಲಭಿಸಿದೆ ಎಂಬುದಾಗಿ ಅಂತಾರಾಷ್ಟ್ರೀಯ ಜ್ಯೂಡೋ ಫೆಡರೇಶನ್‌ ತಿಳಿಸಿದೆ.

Advertisement

ಸುಶೀಲಾದೇವಿ ಅವರಿಗೆ ಏಶ್ಯ ಖಂಡದ ಕೋಟಾದಲ್ಲಿ ಟೋಕಿಯೊ ಟಿಕೆಟ್‌ ಲಭಿಸಿತು. 989 ಅಂಕ ಹೊಂದಿರುವ ಅವರು ಏಶ್ಯ ಮಟ್ಟದಲ್ಲಿ 7ನೇ ಸ್ಥಾನಿಯಾಗಿದ್ದಾರೆ. ಏಶ್ಯದವರಿಗೆ ಒಟ್ಟು 10 ಸ್ಥಾನ ಮೀಸಲಾಗಿತ್ತು.

26 ವರ್ಷದ ಸುಶೀಲಾದೇವಿ ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಲಿರುವ ಭಾರತದ ಮೊದಲ ವನಿತಾ ಜ್ಯೂಡೋಪಟು. ಅವರು 48 ಕೆ.ಜಿ.  ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಇದಕ್ಕೂ ಮುನ್ನ 2016ರ ರಿಯೋ ಒಲಿಂಪಿಕ್ಸ್‌ ಪುರುಷರ ವಿಭಾಗದಲ್ಲಿ ಅವತಾರ್‌ ಸಿಂಗ್‌ (90 ಕೆ.ಜಿ.) ಭಾರತವನ್ನು ಪ್ರತಿನಿಧಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next