Advertisement

ಅಭಿವೃದ್ಧಿಗೆ ನ್ಯಾಯಾಂಗ ಕಾಣಿಕೆ : ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಶ್ಲಾಘನೆ

10:19 AM Feb 24, 2020 | Team Udayavani |

ಹೊಸದಿಲ್ಲಿ: “ಭಾರತೀಯ ನ್ಯಾಯಾಂಗ ವ್ಯವಸ್ಥೆಯು ದೇಶದ ಜನ ಜೀವನವನ್ನು ರಕ್ಷಿಸುವಲ್ಲಿ ಹಾಗೂ ದೇಶದ ಅಭಿವೃದ್ಧಿಗೆ ಸುಗಮ ಹಾದಿ ಕಲ್ಪಿಸುವಲ್ಲಿ ಮಹತ್ತರ ಕಾಣಿಕೆ ಸಲ್ಲಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾ ಸಿದ್ದಾರೆ.

Advertisement

ಸುಪ್ರೀಂ ಕೋರ್ಟ್‌ನಲ್ಲಿ ಆಯೋಜಿ ಸಲಾಗಿರುವ “ನ್ಯಾಯಾಂಗ ವ್ಯವಸ್ಥೆ ಹಾಗೂ ಬದಲಾಗುತ್ತಿರುವ ವಿಶ್ವ’ ಎಂಬ ವಿಷಯ ಕುರಿತ ಅಂತಾರಾಷ್ಟ್ರೀಯ ಕಾನೂನು ಸಮ್ಮೇಳನ -2020ರಲ್ಲಿ ಮಾತನಾಡಿದ ಅವರು, “ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಕೆಲವು ಗಂಭೀರ ಪ್ರಕರಣಗಳಲ್ಲಿ ತೀರ್ಪು ನೀಡುವ ಮುನ್ನ ಇಡೀ ವಿಶ್ವವೇ ಆ ತೀರ್ಪಿನಿಂದಾಗುವ ಪರಿಣಾಮಗಳ ಬಗ್ಗೆ ಆತಂಕಗೊಂಡಿದ್ದವು. ಆದರೆ ತೀರ್ಪು ಹೊರಬಿದ್ದಾಗ ಕೆಟ್ಟದ್ದೇನೂ ಆಗಲಿಲ್ಲ. ದೇಶದ 130 ಕೋಟಿ ಜನತೆ ಆ ತೀರ್ಪುಗಳನ್ನು ಹೃತೂ³ರ್ವಕವಾಗಿ ಸ್ವಾಗತಿಸಿತು. ಇದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಪ್ರಬುದ್ಧತೆಗೆ ಸಾಕ್ಷಿ’ ಎಂದಿದ್ದಾರೆ.

ತಮ್ಮ ಮಾತುಗಳಿಗೆ ಸಮರ್ಥನೆಯಾಗಿ ಅವರು, ರಾಮಜನ್ಮಭೂಮಿ, ತ್ರಿವಳಿ ತಲಾಖ್‌, ತೃತೀಯ ಲಿಂಗಿಗಳ ಹಕ್ಕುಗಳು ಹಾಗೂ ದಿವ್ಯಾಂಗರ ಹಕ್ಕುಗಳ ಬಗ್ಗೆ ಹೊರಬಿದ್ದ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪುಗಳನ್ನು ಉದಾಹರಣೆಯಾಗಿ ಹೆಸರಿಸಿದರು.

ಅಲ್ಲದೆ ಲಿಂಗ ಸಮಾನತೆಗೆ ನ್ಯಾಯ ಒದಗಿಸದಿದ್ದರೆ ಯಾವುದೇ ದೇಶ ಸಮಗ್ರ ಅಭಿವೃದ್ಧಿ ಸಾಧಿಸಲಾರದು ಎಂದರು. ಇಂದಿನ ಕಾಲಘಟ್ಟದಲ್ಲಿ ದತ್ತಾಂಶ ಸಂರಕ್ಷಣೆ, ಸೈಬರ್‌ ಕ್ರೈಮ್‌ನಂಥ ಕೆಲವು ವಿಚಾರಗಳು ನ್ಯಾಯಾಂಗ ಕ್ಷೇತ್ರಕ್ಕೂ ಸವಾಲೊಡ್ಡಿವೆ ಎಂದು ಅಭಿಪ್ರಾಯಪಟ್ಟರು.

ಖಾಸಗಿತನ ಹಕ್ಕು ಇವರಿಗಿಲ್ಲ: ಇದೇ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, “ಖಾಸಗಿತನದ ಹಕ್ಕುಗಳು ಎಲ್ಲ ನಾಗರಿಕರಿಗೆ ಇವೆ. ಆದರೆ ಭಯೋತ್ಪಾದಕರು ಹಾಗೂ ಭ್ರಷ್ಟರು ತಮ್ಮ ಕುಕೃತ್ಯಗಳನ್ನು ಸಮರ್ಥಿಸಲು ಖಾಸಗಿತನದ ಹಕ್ಕನ್ನು ಪ್ರತಿಪಾದಿಸುವಂತಿಲ್ಲ’ ಎಂದು ಹೇಳಿದರು.

Advertisement

“ನ್ಯಾಯಾಲಯಗಳಿಂದ ತೀರ್ಪುಗಳು ಹೊರಬೀಳುವ ಮುನ್ನವೇ ತೀರ್ಪುಗಳು ಹೀಗೇ ಬರಬೇಕು ಎನ್ನುವ ರೀತಿಯಲ್ಲಿ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆಯುತ್ತವೆ. ಆದರೆ ಕಾನೂನು ಎಂಬುದು ಯಾರ ಮರ್ಜಿಗೂ ಒಳಪಡುವಂಥದ್ದಲ್ಲ. ಹಾಗಾಗಿ, ಕೆಟ್ಟ ಅಭಿ ಯಾನಗಳು ಕಾನೂನಿನ ಮೂಲತತ್ತÌಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸ ಬಾರದು’ ಎಂದರು.

ಆಡಳಿತ ಹೇಗಿರಬೇಕು ಎಂಬುದನ್ನು ಜನಪ್ರತಿನಿಧಿಗಳಿಗೆ ಬಿಡಬೇಕು ಹಾಗೂ ತೀರ್ಪು ನೀಡುವ ಕಾಯಕವನ್ನು ನ್ಯಾಯಾಂಗ ವ್ಯವಸ್ಥೆಗೆ ಬಿಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸಂವಿಧಾನಕ್ಕೆ ಕಾನೂನೇ ಅಡಿಪಾಯ
ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌. ಎ. ಬೋಬೆx ಅವರು ಮಾತನಾಡಿ, “ಭಾರತದ ನೆಲ ಎಲ್ಲ ಸಂಸ್ಕೃತಿಯ ಅಂತಿಮ ನಿಲ್ದಾಣದಂತೆ. ಜಗತ್ತಿನ ಎಲ್ಲ ಸಂಸ್ಕೃತಿಗಳೂ ಇಲ್ಲಿಗೆ ಬಂದು ನೆಲೆಸಿವೆ. ಇಂಥ ವೈವಿಧ್ಯ ಸಂಸ್ಕೃತಿಗಳನ್ನು ಸಂರಕ್ಷಿಸಲು ಬೇಕಾದ ಮೂಲ ವ್ಯವಸ್ಥೆಯನ್ನು ಭಾರತದ ಸಂವಿಧಾನ ರೂಪಿಸಿಕೊಟ್ಟಿದೆ. ಇಂಥ ಯಾವುದೇ ಸಂವಿಧಾನಕ್ಕೆ ಕಾರಣ, ಕಾನೂನಿನ ಮೂಲ ತತ್ತÌಗಳೇ ಆಗಿವೆ’ ಎಂದು ಹೇಳಿದರು.

ಪ್ರಧಾನಿ ಬಹುಮುಖೀ ಮೇಧಾವಿ: ನ್ಯಾ| ಮಿಶ್ರಾ
ಪ್ರಧಾನಿ ನರೇಂದ್ರ ಮೋದಿಯವರು ಬಹುಮುಖೀ ಮೇಧಾವಿ. ಅವರು ಯಾವಾಗಲೂ ವಿಶಾಲ ದೃಷ್ಟಿಕೋನದಲ್ಲಿ ಯೋಚಿಸುವಂಥವರು. ಅಲ್ಲದೆ, ತಮ್ಮ ಆಲೋಚನೆಗಳನ್ನು ದೇಶಕ್ಕಾಗಿಯೇ ಧಾರೆ ಎರೆಯುವಂಥವರು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಹೇಳಿದ್ದಾರೆ. ಸಮ್ಮೇಳನದಲ್ಲಿ ಪ್ರಧಾನಿ ಮಾಡಿದ ಭಾಷಣವನ್ನು ಶ್ಲಾ ಸಿದ ಅವರು, ತಮ್ಮ ಸ್ಫೂರ್ತಿಯುತ ಮಾತುಗಳಿಂದ ಪ್ರಧಾನಿಯವರು ಸಮ್ಮೇಳನದ ಆಶಯಗಳು ಎಲ್ಲರಿಗೂ ಮನವರಿಕೆಯಾಗುವಂತೆ ಮಾಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next