ಹೊಸದಿಲ್ಲಿ: “ಚೌಕಿದಾರ್ ಚೋರ್ ಹೈ’ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂಬುದಾಗಿ ಆರೋಪಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಈಗ ಗಂಭೀರ ಸಂಕಷ್ಟ ಎದುರಾಗಿದ್ದು, ನ್ಯಾಯಾಂಗ ನಿಂದನೆ ನೋಟಿಸ್ ಅನ್ನು ಸುಪ್ರೀಂಕೋರ್ಟ್ ಜಾರಿ ಮಾಡಿದೆ. ತಪ್ಪಾಗಿ ಸುಪ್ರೀಂ ಹೆಸರನ್ನು ಬಳಸಿಕೊಂಡೆ ಎಂದು ರಾಹುಲ್ ಗಾಂಧಿ ಸೋಮ ವಾರ ಸುಪ್ರೀಂಕೋರ್ಟ್‌ಗೆ ತಪ್ಪೊಪ್ಪಿಗೆ ನೀಡಿದ್ದರಾದರೂ, ಕ್ಷಮೆ ಕೇಳದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರಕರಣದ ವಿಚಾರಣೆ ಎ. 30 ಕ್ಕೆ ನಿಗದಿಪಡಿಸಲಾಗಿದ್ದು, ಅಂದು ರಾಹುಲ್ ಖುದ್ದು ಹಾಜರಾಗಬೇಕಿಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಂಗಳವಾರ ವಿಚಾರಣೆ ನಡೆಸಿದ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಪೀಠ, ರಾಹುಲ್ ಸಲ್ಲಿಸಿದ ಅಫಿಡವಿಟ್‌ನ ವಿವರಗಳನ್ನು ರಾಹುಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿಯವರಿಂದ ಆಲಿಸಿತು. ನಂತರ ಈ ಬಗ್ಗೆ ವಾದಿಸಿ ಬಿಜೆಪಿ ನಾಯಕಿ ಮೀನಾಕ್ಷಿ ಲೇಖೀ ಪರ ವಕೀಲ ಮುಕುಲ್ ರೋಹಟಗಿ, ರಾಹುಲ್ ಅಫಿಡವಿಟ್‌ನಲ್ಲಿ ಕ್ಷಮೆ ಕೇಳಿಲ್ಲ. ಅಲ್ಲದೆ ವಿಷಾದ ಎಂಬ ಪದವನ್ನು ಕಂಸದಲ್ಲಿ ಉಲ್ಲೇಖೀಸಲಾಗಿದೆ. ಹೀಗಾಗಿ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಹೊರಡಿಸಬೇಕು. ಅಲ್ಲದೆ, ಈಗಲೂ ರಾಹುಲ್ ಇದೇ ಅಭಿಪ್ರಾಯವನ್ನು ಚುನಾವಣಾ ಕ್ಯಾಂಪೇನ್‌ಗಳಲ್ಲಿ ಬಳಸುತ್ತಿದ್ದಾರೆ. ರಾಹುಲ್ ಇದಕ್ಕೆ ಸಂಪೂರ್ಣ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಖುದ್ದು ಹಾಜರಾಗಬೇಕಿಲ್ಲ!: ಸಾಮಾನ್ಯವಾಗಿ ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ಆರೋಪಿ ಖುದ್ದು ಹಾಜರಾಗಿ ವಿವರಣೆ ನೀಡಬೇಕಾಗುತ್ತದೆಯಾದರೂ, ಈ ಪ್ರಕರಣದಲ್ಲಿ ರಾಹುಲ್‌ಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಪ್ರಕರಣದ ವಿಚಾರಣೆ ಮುಗಿಯುತ್ತಿದ್ದಂತೆಯೇ ಕೋರ್ಟ್ ಆವರಣ ದಿಂದ ಹೊರಬಂದ ರಾಹುಲ್ ಪ್ರತಿವಾದಿ ವಕೀಲ ಮುಕುಲ್ ರೋಹಟಗಿ, ನ್ಯಾಯಾಂಗ ನಿಂದನೆ ನೋಟಿಸ್ ನೀಡಿರುವು ದರಿಂದ ರಾಹುಲ್ ಖುದ್ದು ಹಾಜರಾಗಬೇಕಾಗುತ್ತದೆ ಎಂದಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಸುಪ್ರೀಂಕೋರ್ಟ್ ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಆದೇಶದಲ್ಲಿ ರಾಹುಲ್ ಖುದ್ದು ಹಾಜರಾಗಬೇಕಿಲ್ಲ ಎಂದು ನಮೂದಿಸಲಾಗಿತ್ತು.
ಚೌಕಿದಾರ್ ಚೋರ್ ಹೈ ಮುಂದುವರಿಕೆ: ಚೌಕಿದಾರ್ ಚೋರ್ ಹೈ ಎಂಬ ಘೋಷಣೆಯನ್ನು ಕಾಂಗ್ರೆಸ್ ಇನ್ನು ಮುಂದೆಯೂ ಬಳಸಲಿದೆ. ಆದರೆ ಇದರಲ್ಲಿ ಸುಪ್ರೀಂಕೋಟೇì ಹೀಗೆ ಹೇಳಿದೆ ಎಂಬುದನ್ನು ಮಾತ್ರ ಬಳಸುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂ Ì, ಇಂತಹ ಘೋಷಣೆಯನ್ನು ಸುಪ್ರೀಂಕೋರ್ಟ್ ಆಗಲೀ ಅಥವಾ ಕೆಳ ಹಂತದ ಕೋಟೇì ಆಗಲಿ ಉಲ್ಲೇಖೀಸುವುದಿಲ್ಲ ಎಂಬುದು ಸಾಮಾನ್ಯರಿಗೂ ತಿಳಿಯುವ ಸಂಗತಿ ಎಂದು ಸಿಂ Ì ಹೇಳಿದ್ದಾರೆ.
ರಾಹುಲ್ ಪ್ರಕರಣ ಸಂಸದರ ಕೋರ್ಟ್‌ನಲ್ಲಿ ವಿಚಾರಣೆ
2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಿದ್ದ ದೂರಿನ ವಿಚಾರಣೆ ಯನ್ನು ದಿಲ್ಲಿ ನ್ಯಾಯಾಲಯವು ವಿಶೇಷ ಸಂಸದರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದೆ. ಏ.26 ರಂದು ವಿಚಾರಣೆ ನಡೆಯಲಿದೆ. 2016ರಲ್ಲಿ ಉತ್ತರ ಪ್ರದೇಶದಲ್ಲಿ ಕಿಸಾನ್ ಯಾತ್ರೆಯಲ್ಲಿ ಮೋದಿ ವಿರುದ್ಧ ವಾಗ್ಧಾಳಿ ನಡೆಸುತ್ತಾ ರಾಹುಲ್, ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಯೋಧರ ರಕ್ತದಲ್ಲಿ ಹಾಗೂ ಭಾರತಕ್ಕಾಗಿ ಸರ್ಜಿಕಲ್ ದಾಳಿ ನಡೆಸಿದವರ ಹಿಂದೆ ಮೋದಿ ಅಡಗಿ ಕೂತಿದ್ದಾರೆ. ಯೋಧರ ತ್ಯಾಗವನ್ನು ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದರು.