Advertisement

ನ್ಯಾಯಾಂಗ ನಿಂದನೆ: ನನ್ನತಪ್ಪಿಲ್ಲ ಎಂದ ಅನುರಾಗ್‌

03:40 AM Jul 09, 2017 | Team Udayavani |

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಬಿಸಿಸಿಐ ಪದಚ್ಯುತ ಅಧ್ಯಕ್ಷ ಅನುರಾಗ್‌ ಠಾಕೂರ್‌ ಇದರಲ್ಲಿ ತಮ್ಮ ತಪ್ಪಿಲ್ಲ ಎಂದು ಸಾಬೀತು ಪಡಿಸಲು ಹೆಣಗಿದ್ದಾರೆ. 2016ರಲ್ಲಿ ಸರ್ವೋಚ್ಚ ನ್ಯಾಯಾಲಯ ಬಿಸಿಸಿಐಗೆ ಆಡಳಿತಾತ್ಮಕ ಸುಧಾರಣೆ ಘೋಷಿಸಿತ್ತು. 

Advertisement

ಅನಂತರ ಅನುರಾಗ್‌ ಠಾಕೂರ್‌, ಐಸಿಸಿ ಮುಖ್ಯಸ್ಥ ಶಶಾಂಕ್‌ ಮನೋಹರ್‌ ತೆರಳಿ ನ್ಯಾಯಪೀಠದ ಆದೇಶ ಪಾಲನೆ ಮಾಡಿದರೆ ಬಿಸಿಸಿಐ ಅಮಾನ್ಯ ಮಾಡಬೇಕಾಗುತ್ತದೆ ಎಂಬ ಪತ್ರ ಕೊಡುವಂತೆ ಕೇಳಿದ್ದರು. ಇದರಿಂದ ನ್ಯಾಯಪೀಠ ಕೆಂಡಾಮಂಡಲವಾಗಿತ್ತು.

ಈ ಬಗ್ಗೆ ನ್ಯಾಯಪೀಠಕ್ಕೆ ಮಾಹಿತಿ ನೀಡಿರುವ ಅನುರಾಗ್‌, 2016ರಲ್ಲಿ ಸ್ವತಃ ಶಶಾಂಕ್‌ ಮನೋಹರ್‌ ಅವರೇ ಈ ಬಗ್ಗೆ
ನನಗೆ ಟಿಪ್ಪಣಿ ನೀಡಿದ್ದರು. ಹೀಗೆ ಕೇಳುವುದರಲ್ಲಿ ತಪ್ಪಿಲ್ಲವೆಂದೂ ಹೇಳಿದ್ದರು. ಈ ಬಗ್ಗೆ ಕೆಲ ಇ-ಮೇಲ್‌ ವಿವರವನ್ನೂ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next