Advertisement

ನ್ಯಾಯಾಂಗ ನಿಂದನೆ ಅನುರಾಗ್‌ ಬೇಷರತ್‌ ಕ್ಷಮೆಯಾಚನೆ

03:45 AM Jul 14, 2017 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಪದಚ್ಯುತ ಅಧ್ಯಕ್ಷ ಅನುರಾಗ್‌ ಠಾಕೂರ್‌ ಸರ್ವೋಚ್ಚ ನ್ಯಾಯಾಲಯಕ್ಕೆ ತಕರಾರುಗಳಿಗೆ ಆಸ್ಪದವಿಲ್ಲದ ಬೇಷರತ್‌ ಕ್ಷಮೆಯಾಚನೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಮಾ.6ರಂದೇ ಅನುರಾಗ್‌ ಪ್ರಮಾಣಪತ್ರ ಸಲ್ಲಿಸಿದ್ದರೂ ಅದನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿ ಮತ್ತೂಮ್ಮೆ ಸ್ಪಷ್ಟವಾದ ಕ್ಷಮೆ ಯಾಚನೆ ಮಾಡುವಂತೆ ತಿಳಿಸಿತ್ತು. ಈ ಪ್ರಮಾಣಪತ್ರವನ್ನು ನ್ಯಾಯಪೀಠ ಅಂಗೀಕರಿಸಿದರೆ ಅನುರಾಗ್‌ ಠಾಕೂರ್‌ ನ್ಯಾಯಾಂಗ ನಿಂದನೆ ಪ್ರಕರಣದಿಂದ ಪಾರಾಗಲಿದ್ದಾರೆ.

Advertisement

2016ರಲ್ಲಿ ಬಿಸಿಸಿಐಗೆ ಸಮಗ್ರ ಆಡಳಿತಾತ್ಮಕ ಸುಧಾ ರಣೆಗಳನ್ನು ಸರ್ವೋಚ್ಚ ನ್ಯಾಯಾಲಯ ಪ್ರಕಟಿಸಿತ್ತು. ಈ ಕುರಿತು ಲೋಧಾ ಸಮಿತಿ ಮಾಡಿದ ಶಿಫಾರಸನ್ನು ಅಂಗೀಕರಿಸಿತ್ತು. ಅದಾದ ಅನಂತರ ಅನುರಾಗ್‌ ಠಾಕೂರ್‌, ಐಸಿಸಿ ಮುಖ್ಯಸ್ಥ ಶಶಾಂಕ್‌ ಮನೋ ಹರ್‌ ಬಳಿ ಮಾತುಕತೆ ನಡೆಸಿದ್ದಾರೆ. ತೀರ್ಪನ್ನು ಅಳವಡಿಸಿಕೊಳ್ಳು ವುದರಿಂದ ಸರಕಾರದ ಹಸ್ತಕ್ಷೇಪಕ್ಕೆ ಕಾರಣವಾಗುತ್ತದೆ. ಆದ್ದರಿಂದ ಬಿಸಿಸಿಐಯನ್ನು ಅಮಾನತು ಗೊಳಿಸಬೇಕಾಗುತ್ತದೆ ಎಂಬ ಪತ್ರ ನೀಡಿ ಎಂದು ಐಸಿಸಿಗೆ ಕೇಳಿಕೊಂಡಿದ್ದಾರೆ. ಇದು ನ್ಯಾಯಪೀಠಕ್ಕೆ ಸಿಟ್ಟು ತರಿಸಿದೆ. ಆದೇಶವಾದ ಮೇಲೂ ಮೇಲಿನಂತೆ ಮನವಿ ಸಲ್ಲಿಸಿರುವುದು ನ್ಯಾಯಪೀಠದ ತೀರ್ಪನ್ನೇ ಅನೂರ್ಜಿತಗೊಳಿಸಲು ಮಾಡಿದ ಯತ್ನ, ಆದ್ದರಿಂದ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ಮಾಡುತ್ತೇವೆ ಎಂದು ಹೇಳಿತ್ತು.

ಅಷ್ಟು ಮಾತ್ರವಲ್ಲ ಬಿಸಿಸಿಐ ಅಧ್ಯಕ್ಷರಾಗಿದ್ದ ಅನುರಾಗ್‌ ಮತ್ತು ಕಾರ್ಯದರ್ಶಿಯಾಗಿದ್ದ ಅಜಯ್‌ ಶಿರ್ಕೆಯನ್ನು ತಮ್ಮ ಸ್ಥಾನಗಳಿಂದಲೂ ವಜಾ ಮಾಡಿತ್ತು. ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ನ್ಯಾಯಪೀಠ ಅನುರಾಗ್‌ ವಿರುದ್ಧ ವಿಚಾರಣೆ ಕೈಬಿಡುವ ಮಾತನಾಡಿ,  ಕ್ಷಮೆಯಾಚಿಸಲು ಸೂಚಿಸಿತ್ತು.

ಮೇಲಿನ ಬೆಳವಣಿಗೆಗಳ ಕುರಿತು ಅನುರಾಗ್‌ ವಕೀಲ ಪಿ.ಎಸ್‌.ಪಟ್ವಾಲಿಯಾ ಮಾತನಾಡಿ, ಅನುರಾಗ್‌ ನ್ಯಾಯಾ ಲಯದ ಬಳಿ ಬೇಷರತ್‌ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ ಈಗಲೂ ಅನುರಾಗ್‌ರದ್ದು ತಪ್ಪಿಲ್ಲ ಎಂದು ಸಾಬೀತು ಮಾಡಲು ಸಾಧ್ಯವಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next