Advertisement

ಮಂದಿರ, ಗೋ, ಅಸ್ಪೃಶ್ಯತೆ ಇತ್ಯಾದಿ ನಿರ್ಣಯ

09:09 AM Nov 23, 2017 | Team Udayavani |

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ, ಅಸ್ಪೃಶ್ಯತೆ ನಿವಾರಣೆಗೆ ಇನ್ನಷ್ಟು ಒತ್ತು ಇತ್ಯಾದಿ ವಿಷಯಗಳ ಬಗೆಗೆ ಸಂತರು ಚರ್ಚಿಸಿ ನಿರ್ಣಯ ಕೈಗೊಳ್ಳುವರು ಎಂದು ಪರ್ಯಾಯ ಶ್ರೀ ಪೇಜಾವರ ಮಠಾಧೀಶರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಸುದ್ದಿಗಾರರ ವಿವಿಧ ಪ್ರಶ್ನೆಗಳಿಗೆ ಉತ್ತರಿ ಸಿದ ಅವರು, ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಇದಕ್ಕಾಗಿ ಸಂಧಾನ ನಡೆಸುತ್ತಿರುವ ರವಿಶಂಕರ್‌ ಗುರೂಜಿಯವರು ಧರ್ಮಸಂಸದ್‌ಗೂ ಬರಲಿದ್ದಾರೆ. ಉ.ಪ್ರ. ಮತ್ತು ಕೇಂದ್ರ ಸರಕಾರ ಮಂದಿರ ನಿರ್ಮಾಣಕ್ಕೆ ಪೂರಕವಾಗಿರುವುದರಿಂದ ಹೊಸ ವಿಧೇಯಕ ವನ್ನೂ ಮಂಡಿಸಬಹುದು. ಈ ಕುರಿತು ಸಂತರು ಯಾವ ರೀತಿ ನಿರ್ಣಯ ಮಂಡಿಸು ತ್ತಾರೆಂದು ನೋಡಬೇಕು ಎಂದರು.

ಗೋಹತ್ಯೆ ನಿಷೇಧದ ಕುರಿತು ಆಚಾರ್ಯ ವಿನೋಬಾ ಭಾವೆಯವರು ಉಪವಾಸ ವ್ರತ ಕೈಗೊಂಡಾಗ ಪ್ರಧಾನಿ ಮೊರಾರ್ಜಿ ದೇಸಾಯಿಯವರು ಗೋಹತ್ಯೆ ನಿಷೇಧಕ್ಕೆ ಪ್ರಯತ್ನಿಸಿದರು. ಆದರೆ ಕೇರಳದಲ್ಲಿದ್ದ ಕಮ್ಯು ನಿಸ್ಟ್‌ ಅಂಥ ರಾಜ್ಯ ಸರಕಾರಗಳ ಅಸಹ ಕಾರದಿಂದ ಕೈಗೂಡಲಿಲ್ಲ. ಈಗಲೂ ಅದೇ ಸ್ಥಿತಿ ಇದೆ ಎಂದು ಸ್ವಾಮೀಜಿ ತಿಳಿಸಿದರು.

ಅಸ್ಪೃಶ್ಯತೆ ವಿರುದ್ಧ ಹಿಂದೆಯೇ ನಿರ್ಣಯ ತಳೆದಿದ್ದರೂ ಇದನ್ನು ಮತ್ತಷ್ಟು ತೀವ್ರವಾಗಿ ಪರಿಗಣಿಸಬೇಕಾ ಗಿದೆ ಎಂದರು. ಪ್ರಶ್ನೆಗೆ ಉತ್ತರಿಸಿದ ಅವರು ರಾಜಕೀಯಕ್ಕೂ ಧರ್ಮ ಸಂಸದ್‌ಗೂ ಯಾವುದೇ ಸಂಬಂಧವಿಲ್ಲ ಎಂದರು.

ಪರ್ಯಾಯ ಸ್ವಾಮಿಗಳಿಗೆ ಗಡಿ
ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವಕ್ಕೆ ಹೋಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ ಅವರು, ಹಿಂದೆ ಪಿಪಿಸಿ ಬಳಿ ಕಡೆಕೊಪ್ಲದಲ್ಲಿ ಸಂಸ್ಕೃತ ಕಾಲೇಜು ಇತ್ತು. ಅಲ್ಲಿಗೆ ಪರ್ಯಾಯ ಸ್ವಾಮಿಗಳು ಹೋಗುತ್ತಿದ್ದರು. ಆಚಾರ್ಯ ಮಧ್ವರ ಸಹೋದರ ವಿಷ್ಣುತೀರ್ಥರ “ಸನ್ಯಾಸ ಪದ್ಧತಿ’ ಗ್ರಂಥದಲ್ಲಿ ಚಾತುರ್ಮಾಸ್ಯ ವ್ರತಕ್ಕೆ ಗಡಿ ಗುರುತು ಉಲ್ಲೇಖವಿದೆ. ಅದರ ಪ್ರಕಾರ ಒಂದು ಯೋಜನಾರ್ಧದ ಅರ್ಧದಷ್ಟು ದೂರ ಹೋಗಬಹುದು ಎಂದಿದೆ. ಅದು ಎರಡು ತಿಂಗಳಿನ ವ್ರತವಾದರೆ, ಪರ್ಯಾಯ ಎರಡು ವರ್ಷಗಳ ವ್ರತ. ಇದರ ಪ್ರಕಾರ 8 ಕಿ.ಮೀ.ನ ನಾಲ್ಕನೇ ಒಂದು ಭಾಗ= 2 ಕಿ.ಮೀ. ದೂರ ಹೋಗಬಹುದು. ಆದ್ದರಿಂದ ಎಂಜಿಎಂ ಕಾಲೇಜಿಗೆ ಹೋಗಬೇಕೋ ಬೇಡವೋ ಎಂಬ ಬಗ್ಗೆ ವಿಚಾರ ಮಾಡುತ್ತೇನೆ ಎಂದು ತಿಳಿಸಿದರು.

Advertisement

ಹಿಂದೂ ವ್ಯಾಖ್ಯೆ ದೊಡ್ಡದು
ವಿಶ್ವ ಹಿಂದೂ ಪರಿಷದ್‌ ಹಿಂದೂ ಶಬ್ದಕ್ಕೆ ಮಾಡಿದ ವ್ಯಾಖ್ಯೆ ಪ್ರಕಾರ ಭಾರತೀಯ ಪ್ರವಾದಿಗಳು ಪ್ರವರ್ತಿಸಿದ ಧರ್ಮಗಳೆಲ್ಲವೂ ಒಳಗೊಳ್ಳುತ್ತವೆ. ಜೈನರು, ಬೌದ್ಧರು, ಲಿಂಗಾಯತರು, ವೀರಶೈವರು ಹೀಗೆ ವೇದವನ್ನು ಒಪ್ಪುವವರು/ ಒಪ್ಪದವರು, ಜಾತಿ ಒಪ್ಪುವವರು/ಒಪ್ಪದವರು ಎಲ್ಲರೂ ಹಿಂದೂ ಧರ್ಮದ ವ್ಯಾಖ್ಯೆಯೊಳಗೆ ಬರು ತ್ತಾರೆ. ಹಿಂದೆ ನಡೆದ ಧರ್ಮ ಸಂಸದ್‌ ಅಧಿವೇಶನವನ್ನು ದಲಾೖ ಲಾಮಾ ಉದ್ಘಾಟಿಸಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next