ಬೆಂಗಳೂರು: ಆಸ್ತಿ ಭದ್ರತೆ ಆಧಾರದಲ್ಲಿ ಶೈಕ್ಷಣಿಕ ಸಾಲ ಪಡೆದ ವೈದ್ಯರೊಬ್ಬರಿಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೊಡಮಾಡುವ ಸಾಲ ಸಬ್ಸಿಡಿ ಸೌಲಭ್ಯ ನೀಡಲು ನಿರಾಕರಿಸಿದ ಬ್ಯಾಂಕ್ 35 ಸಾವಿರ ರೂ. ಪರಿಹಾರ ನೀಡಬೇಕು ಎಂದು ಬೆಂಗಳೂರು ನಗರ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯವು ಈ ಆದೇಶವನ್ನು ನೀಡಿದೆ.
ಎಚ್‌ಎಂಟಿ ಲೇಔಟ್ ನಿವಾಸಿ ಯಾದ ದೂರುದಾರ ವೈದ್ಯ ಹಾಗೂ ಆತನ ತಂದೆ 2014ರಲ್ಲಿ 15 ಲಕ್ಷ ರೂ. ವೈದ್ಯಕೀಯ ಶಿಕ್ಷಣ ಸಾಲಕ್ಕಾಗಿ 95 ಲಕ್ಷ ರೂ. ಮೌಲ್ಯದ ಮನೆಯನ್ನು ಭದ್ರತೆಯಾಗಿ ಇರಿಸಿದ್ದರು. ವಿದ್ಯಾರ್ಥಿಯ ತಂದೆಯ ವಾರ್ಷಿಕ ಆದಾಯ 95,000 ರೂ. ಎಂದು ತಹಶೀಲ್ದಾರ್ ಪ್ರಮಾಣ ಪತ್ರ ನೀಡಿದ್ದು, ಬ್ಯಾಂಕ್ ಅಧಿಕಾರಿಗಳು ಕೂಡ ಸಾಲಾಪೇಕ್ಷಿ ಕುಟುಂಬವು ಆರ್ಥಿಕವಾಗಿ ಹಿಂದು ಳಿದಿರುವುದಾಗಿ ಒಪ್ಪಿ ಕೊಂಡಿತ್ತು.
ವೈದ್ಯರು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದು, 2020ರಲ್ಲಿ ಸಾಲದ ಮೊತ್ತ, ಬಡ್ಡಿ ಹಾಗೂ ಇತರ ಶುಲ್ಕಗಳನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಿದ್ದಾರೆ. ಈ ನಡುವೆ ದೂರುದಾರರು ಶೈಕ್ಷಣಿಕ ಸಾಲಕ್ಕೆ ಸಬ್ಸಿಡಿ ನೀಡುವಂತೆ ಬ್ಯಾಂಕ್‌ಗೆ ಮನವಿ ಮಾಡಿದೆ. ಆದರೆ ಬ್ಯಾಂಕ್ ನಿರಾಕರಿಸಿ, ಸಾಲ ಪಡೆಯುವ ಸಂದರ್ಭದಲ್ಲಿ ಕುಟುಂಬದವರು 15 ಲಕ್ಷ ರೂ. ಸಾಲಕ್ಕೆ 95 ಲಕ್ಷ ರೂ. ಮೌಲ್ಯ ಮನೆಯ ಭದ್ರತೆಯನ್ನು ನೀಡಿ ರುವುದನ್ನೇ ಮುಂದಿಟ್ಟು ಅವರು ಸಬ್ಸಿಡಿಗೆ ಅರ್ಹರಲ್ಲ ಎಂದಿತ್ತು.
ವಿಚಾರಣೆ ವೇಳೆ ಬ್ಯಾಂಕ್ ಪರ ನ್ಯಾಯವಾದಿ ವಾದ ಮಂಡಿಸಿ, ವೈದ್ಯರಿಗೆ ಈಗ ಸಾಲ ಮರು ಪಾವತಿಸುವ ಆರ್ಥಿಕ ಶಕ್ತಿ ಬಂದಿದೆ. ಅವರು ಈಗ ಆರ್ಥಿಕವಾಗಿ ಹಿಂದುಳಿದ ವಿಭಾಗಕ್ಕೆ ಸೇರುವುದಿಲ್ಲ ಎಂದು ಹೇಳಿದರು.
7.5ರಿಂದ 20 ಲಕ್ಷ ರೂ. ವರೆಗಿನ ಸಾಲಕ್ಕೆ ಆಸ್ತಿ ಭದ್ರತೆಯ ಅಗತ್ಯವಿದೆ. ದೂರುದಾರರು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರಾಗಿದ್ದರೆ. ಕುಟುಂಬದ ವಾರ್ಷಿಕ 4.5 ಲಕ್ಷ ರೂ. ಕಡಿಮೆ ಇದೆ. ಹೀಗಾಗಿ .ಪರಿಹಾರ ನೀಡಲು ಸೂಚಿಸಿದೆ.