Advertisement

ಕೀರೆಹೊಳೆ-ಲಕ್ಷ್ಮಣತೀರ್ಥ ಪ್ರವಾಹಕ್ಕೆ ಸಿಲುಕಿದವರ ಜತೆ ಮಾತುಕತೆ

08:23 PM Aug 21, 2019 | Team Udayavani |

ಮಡಿಕೇರಿ: ದಕ್ಷಿಣ ಕೊಡಗಿನ ಕಿರುಗೂರು, ಬಾಳೆಲೆ ಮತ್ತು ಕಾರ್ಮಾಡು ಪರಿಹಾರ ಕೇಂದ್ರಗಳಿಗೆ ಇತ್ತೀಚೆಗೆ ವೀರಾಜಪೇಟೆಯ ಜೆಎಂಎಫ್ಸಿ ಮತ್ತು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಜಯಪ್ರಕಾಶ್‌ ಅವರು ಭೇಟಿ ನೀಡಿ ಸಮಸ್ಯೆ ಆಲಿಸಿದರು.

Advertisement

ಕಿರುಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಹಾರ ಕೇಂದ್ರದಲ್ಲಿ ಅಲ್ಲಿನ ಹೊನ್ನಿಕೊಪ್ಪದ ಕೀರೆಹೊಳೆಕೆರೆ ಪೈಸಾರಿಯ ಸುಮಾರು 16 ಕುಟುಂಬದ 38 ಮಂದಿ ಆಶ್ರಯ ಪಡೆದಿದ್ದಾರೆ.ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷೆ ಪಿ.ಭೋಜಿ, ಗೋಣಿಕೊಪ್ಪಲು ಪೊಲೀಸ್‌ ವೃತ್ತ ನಿರೀಕ್ಷಕ ದಿವಾಕರ್‌, ಗ್ರಾ.ಪಂ.ಉಪಾಧ್ಯಕ್ಷ ಎಚ್‌.ವಿ.ಪ್ರಕಾಶ್‌, ನೋಡೆಲ್‌ ಅಧಿಕಾರಿ ರಾಜಮ್ಮ, ಗ್ರಾ.ಪಂ.ಸದಸ್ಯರು, ಆಶಾ ಕಾರ್ಯಕರ್ತರು, ಪಿಡಿಓ, ಕಂದಾಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ನಿಟ್ಟೂರು ಕೇಂದ್ರದದಲ್ಲಿ ನಿಟ್ಟೂರು ಗ್ರಾ.ಪಂ.ಅಧ್ಯಕ್ಷೆ ಮತ್ತು ಸದಸ್ಯರು ಗ್ರಾ.ಪಂ.ಮೂಲಕ ಅಗತ್ಯ ನೆರವು ಕಲ್ಪಿಸಿದ್ದರು.
ಗ್ರಾ.ಪಂ.ಉಪಾಧ್ಯಕ್ಷ ಚಿಟ್ಟಿಯಪ್ಪ, ಕಾಟಿಮಾಡ ಶರೀನ್‌ ಮುತ್ತಣ್ಣ, ಪ್ರಕಾಶ್‌, ಚೆಕ್ಕೇರ ಸೂರ್ಯ ಅಯ್ಯಪ್ಪ, ಕೋಟ್ರಂಗಡ ಮಂಜುನಾಥ್‌, ತಿರುನೆಲ್ಲಿಮಾಡ ಪೂಣಚ್ಚ ಮುಂತಾದವರು ತಾವು ವೈಯಕ್ತಿಕವಾಗಿ ನಿರಾಶ್ರಿತರಿಗೆ ನೆರವು ಕಲ್ಪಿಸಿದ್ದರು.

ಬಾಳೆಲೆ ಪರಿಹಾರ ಕೇಂದ್ರ
ಬಾಳೆಲೆ ಪರಿಹಾರ ಕೇಂದ್ರವನ್ನು ಅಲ್ಲಿನ ದೋಣಿಕಡವು ರಸ್ತೆಯಲ್ಲಿ ಇರುವ ಸಾರ್ವಜನಿಕ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ತೆರೆಯಲಾಗಿದ್ದು, ದೇವನೂರು, ನಲ್ಲೂರು, ಪೊನ್ನಪ್ಪಸಂತೆ ವ್ಯಾಪ್ತಿಯ ಸುಮಾರು 41 ಮಂದಿ ನಿರಾಶ್ರೀತರು ಆಶ್ರಯ ಪಡೆದಿರುವದು ಕಂಡು ಬಂದಿತು. ಬಾಳೆಲೆ ಗ್ರಾ.ಪಂ.ಅಧ್ಯಕ್ಷೆ ಕಾಂಡೇರ ಕುಸುಮಾ ಶೇಖರ್‌, ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್‌, ಪರಿಹಾರ ಕೇಂದ್ರದಲ್ಲಿ ಸುಶೀಲಾ, ಚಿಕ್ಕದೇವು ನಿರಾಶ್ರಿತರಿಗೆ ಪೂರಕ ನೆರವು ಕಲ್ಪಿಸಿದರು. ನ್ಯಾಯಾಧೀಶ ಜಯಪ್ರಕಾಶ್‌ ಅವರು ಇದೇ ಸಂದರ್ಭ ನಿರಾಶ್ರಿತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.ನಿರಾಶ್ರಿತರ ಸಮಸ್ಯೆ ಆಲಿಸಿದ ನ್ಯಾಯಾಧೀಶರು ಅಲ್ಲಿನ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಕ್ಕಳ ಕಾನೂನು ಬಗ್ಗೆ ಅರಿವು ಮೂಡಿಸಿದರು ನಿಟ್ಟೂರು ಗ್ರಾಮದ ನಿರಾಶ್ರಿತ 32 ಕುಟುಂಬಗಳಿಗೆ ತಲಾ 10 ಸಾವಿರ ಮೊತ್ತದ ಚೆಕ್‌ ವಿತರಿಸಲಾಯಿತು

ನಿಟ್ಟೂರು ಪರಿಹಾರ ಕೇಂದ್ರ
ನಿಟ್ಟೂರು ಗ್ರಾ.ಪಂ.ಪರಿಹಾರ ಕೇಂದ್ರವನ್ನು ಕಾರ್ಮಾಡುವಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಗಿರಿಜನ ಆಶ್ರಮ ಶಾಲೆಯಲ್ಲಿ ತೆರೆಯಲಾಗಿದ್ದು, ಒಟ್ಟು 98 ನಿರಾಶ್ರಿತರು ನೋಂದಣಿ ಮಾಡಿಕೊಂಡಿದ್ದರೆ, ನ್ಯಾಯಾಧೀಶರ ಭೇಟಿ ಸಂದರ್ಭ 94 ಮಂದಿ ಆಶ್ರಯ ಪಡೆದಿರುವದು ಕಂಡು ಬಂದಿತು.

Advertisement

32 ಕುಟುಂಬದ 98 ಸದಸ್ಯರಲ್ಲಿ ಕುಂಬಾರಕಟ್ಟೆ ಗಿರಿಜನ ಕಾಲೋನಿಯ ಅಧಿಕ ಮಂದಿ, ಅವರ ಮನೆಗೆ ಬಂದಿದ್ದ ನೆಂಟರು(ವಲಸಿಗರು) ಹಾಗೂ ಕಾರ್ಮಾಡುವಿನ ಒಂದು ಕುಟುಂಬ ಲಕ್ಷ್ಮಣ ತೀರ್ಥ ಪ್ರವಾಹದಿಂದಾಗಿ ಸಂತ್ರಸ್ತರಾಗಿ ಆಶ್ರಯ ಪಡೆದಿದ್ದರು. ಬಾಳೆಲೆ ವಿಜಯಲಕ್ಷ್ಮೀ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಪಿ.ಪ್ರಭುಕುಮಾರ್‌ ನೋಡೆಲ್‌ ಅಧಿಕಾರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next