Advertisement

ನ್ಯಾಯಾಧೀಶರನ್ನು ನ್ಯಾಯಾಧೀಶರೇ ನೇಮಿಸುತ್ತಾರೆನ್ನುವುದು ಸುಳ್ಳು! ನ್ಯಾಯಮೂರ್ತಿ ಎನ್‌.ವಿ.ರಮಣ

08:24 PM Dec 26, 2021 | Team Udayavani |

ನವದೆಹಲಿ: ನ್ಯಾಯಾಧೀಶರನ್ನು ನ್ಯಾಯಾಲಯದ ಕೊಲಿಜಿಯಂ ವ್ಯವಸ್ಥೆಯೇ ನೇಮಕ ಮಾಡುತ್ತದೆ…

Advertisement

ಹೀಗೊಂದು ಜನಪ್ರಿಯ ಅಭಿಪ್ರಾಯವಿದೆ. ಆದರೆ ಅದು ಸುಳ್ಳು ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಹೇಳಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಕಾನೂನು ಕಾಲೇಜೊಂದರಲ್ಲಿ ದತ್ತಿ ಉಪನ್ಯಾಸ ನೀಡಿದ ಅವರು ಮೇಲಿನಂತೆ ಮಾತನಾಡಿದರು.

ಇತ್ತೀಚೆಗೆ ನ್ಯಾಯಾಧೀಶರು ತಾವೇ ನ್ಯಾಯಧೀಶರನ್ನು ನೇಮಿಸುತ್ತಾರೆ ಎಂಬ ಮಾತು ಪದೇಪದೆ ಪುನರುಕ್ತಿಗೊಳ್ಳುತ್ತಿದೆ. ಆದರೆ ಈ ಆಯ್ಕೆಪ್ರಕ್ರಿಯೆಯಲ್ಲಿ ಹಲವು ಅಂಗಗಳು ಮುಖ್ಯ ಪಾತ್ರ ವಹಿಸುತ್ತವೆ. ಕೇಂದ್ರ ಕಾನೂನು ಸಚಿವಾಲಯ, ರಾಜ್ಯ ಸರ್ಕಾರಗಳು, ರಾಜ್ಯಪಾಲರು, ಉಚ್ಚ ನ್ಯಾಯಾಲಯಗಳ ಕೊಲಿಜಿಯಂ, ಗುಪ್ತಚರ ಸಂಸ್ಥೆ, ನ್ಯಾಯಾಲಯ, ಅಂತಿಮವಾಗಿ ಉನ್ನತ ಸಮಿತಿ ನ್ಯಾಯಾಧೀಶರ ಆಯ್ಕೆಯನ್ನು ನಿರ್ಧರಿಸುತ್ತದೆ ಎಂದು ವಿವರಿಸಿದ್ದಾರೆ. ಹಾಗೆಯೇ ನ್ಯಾಯಾಲಯಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ಕಡ್ಡಾಯವಾಗಿ ಸಮಯಮಿತಿ ಪಾಲನೆ ಮಾಡಲೇಬೇಕು. ಉಚ್ಚ ನ್ಯಾಯಾಲಯಗಳು ಮಾಡಿರುವ ಹಲವು ಶಿಫಾರಸುಗಳನ್ನು ಇನ್ನೂ ಕೇಂದ್ರ ಕಾನೂನು ಸಚಿವಾಲಯ ಸರ್ವೋಚ್ಚ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟೇ ಇಲ್ಲ ಎಂದು ಮುಖ್ಯ ನ್ಯಾ.ರಮಣ ಹೇಳಿದ್ದಾರೆ.

ಇದನ್ನೂ ಓದಿ : ಮಂಗಳೂರು : ಬಸ್ ಸಿಬ್ಬಂದಿಗಳ ಈ ಕಾರ್ಯಕ್ಕೆ ಪೊಲೀಸ್‌ ಆಯುಕ್ತರಿಂದ ಶ್ಲಾಘನೆ

Advertisement

Udayavani is now on Telegram. Click here to join our channel and stay updated with the latest news.

Next