Advertisement

2 ತಿಂಗಳೊಳಗೆ ಕಲಬುರಗಿ ಪೀಠಕ್ಕೆ ನ್ಯಾಯಾಧೀಶರ ನೇಮಕ

06:00 AM Sep 09, 2018 | Team Udayavani |

ಕಲಬುರಗಿ: “ಇಲ್ಲಿನ ಕರ್ನಾಟಕ ಹೈಕೋರ್ಟ್‌ ಪೀಠಕ್ಕೆ ನ್ಯಾಯಾಧೀಶರ ನೇಮಕ ಬೇಡಿಕೆ ಈಡೇರಿಕೆ ಕಾಲ ಸನ್ನಿಹಿತವಾಗುತ್ತಿದ್ದು, 2 ತಿಂಗಳಲ್ಲಿ ಪೀಠಕ್ಕೆ ನಾಲ್ಕು ನ್ಯಾಯಾಧೀಶರನ್ನು ನೇಮಕ ಮಾಡಲಾಗುತ್ತದೆ’ ಎಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಪ್ರಕಟಿಸಿದರು.

Advertisement

ಶನಿವಾರ ಇಲ್ಲಿನ ಕರ್ನಾಟಕ ಹೈಕೋರ್ಟ್‌ ಪೀಠದ ದಶಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು
ಮಾತನಾಡಿದರು. ಈ ಹಿಂದೆ ಮೊದಲ ಬಾರಿ ಭೇಟಿ ನೀಡಿದಾಗ ಪ್ರಕರಣಗಳ ತ್ವರಿತ ವಿಲೇವಾರಿಗೆ ಹೆಚ್ಚಿನ ನ್ಯಾಯಾ ಧೀಶರನ್ನು ನೇಮಕ ಮಾಡುವ ಬೇಡಿಕೆ ಇಡಲಾಗಿತ್ತು. ಅದೀಗ ಕಾರ್ಯರೂಪಕ್ಕೆ ಬರಲಿದೆ.

ಕಲಬುರಗಿ ವಿಭಾಗದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯಾಗಿದ್ದರಿಂದ ಈ ಭಾಗದ ಜನ ನ್ಯಾಯಕ್ಕಾಗಿ ಬೆಂಗಳೂರಿಗೆ ಅಲೆಯುವುದು ತಪ್ಪಿದೆ ಎಂದರು.

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್‌.ಕೆ. ಹಿರೇಮಠ ಮಾತನಾಡಿ, 2008ರಲ್ಲಿ ಕಲಬುರಗಿ ಹೈಕೋರ್ಟ್‌ ಸಂಚಾರಿ ಪೀಠ ಪ್ರಾರಂಭವಾಯಿತು.

ನಂತರ 2013ರಲ್ಲಿ ಕಾಯಂ ಪೀಠವಾಗಿ ಪರಿವರ್ತನೆಗೊಂಡಿತು. ಪೀಠ ಸ್ಥಾಪನೆಯಾದಾಗ ಹೈಕೋರ್ಟ್‌ ಪೀಠದ ವ್ಯಾಪ್ತಿಯ 9810 ಪ್ರಕರಣಗಳು ಬಾಕಿ ಇದ್ದವು. 32397 ಪ್ರಕರಣಗಳು ಬಾಕಿ ಇವೆ. 10 ವರ್ಷಗಳಲ್ಲಿ 1.50 ಲಕ್ಷ
ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಹೊಸದಾಗಿ 1.37 ಲಕ್ಷ ಪ್ರಕರಣಗಳು ದಾಖಲಾಗಿವೆ ಎಂದರು.

Advertisement

ನ್ಯಾಯ ಸಮ್ಮತವಾಗಿ ನಡೆಯುವುದೇ ಮುಖ್ಯ
ಕಲಬುರಗಿ:
“ಸಮಾಜದಲ್ಲಿ ಎಲ್ಲದಕ್ಕೂ ನ್ಯಾಯಾಲಯದಿಂದ ನ್ಯಾಯ ಬಯಸುವುದಕ್ಕಿಂತ ನ್ಯಾಯ ಸಮ್ಮತವಾಗಿ ನಡೆಯುವುದೇ ಬಹು ಮುಖ್ಯವಾಗಿದೆ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಹೇಳಿದರು.

ಶನಿವಾರ ಹೈಕೋರ್ಟ್‌ ಕಲಬುರಗಿ ಪೀಠದ ದಶಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಲಬುರಗಿ ಹೈಕೋರ್ಟ್‌ ಪೀಠಕ್ಕೆ ಹಾಗೂ ಈ ಭಾಗಕ್ಕೆ ಒಳ್ಳೆಯ ಕಾಲ ಬಂದಿದೆ.

ನ್ಯಾಯ ಸಮ್ಮತವಾಗಿ ನಡೆದಿದ್ದರೆ ಸಹೋದರರಿಗೆ ಆಸ್ತಿಯಲ್ಲಿ ಪಾಲು ಕೊಡುವಂತಹ ಕಾಯ್ದೆ ಕಠಿಣವಾಗಿ ಜಾರಿ ತರುವುದು ಎದುರಾಗುತ್ತಿರಲಿಲ್ಲ. ಆದ್ದರಿಂದ ನಾವು ನ್ಯಾಯದ ಹಾದಿಯಲ್ಲಿ ನಡೆದರೆ ಸಮಾಜದಲ್ಲಿ ಅನ್ಯಾಯದ ಘಟನೆಗಳಿಗೆ ಅವಕಾಶ ಇಲ್ಲದಂತಾಗುತ್ತದೆ ಎಂದರು.

ಕರ್ನಾಟಕ ಹೈಕೋರ್ಟ್‌ ಪೀಠ ಕಲಬುರಗಿಯಲ್ಲಿ ಹೆಚ್ಚಿನ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿವೆ. ಮುಂದಿನ ಐದಾರು ತಿಂಗಳುಗಳಲ್ಲಿ ಹೆಚ್ಚಿನ ಸಂಖ್ಯೆಯ ನ್ಯಾಯಾಧೀಶರನ್ನು ನೇಮಿಸುವ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ
ಮಾಡಲು ಅನುಕೂಲ ಮಾಡಿಕೊಡಲಾಗುತ್ತಿದೆ. ಕಲಬುರಗಿ ಹೈಕೋರ್ಟ್‌ ಪೀಠವು ಹತ್ತು ವರ್ಷದ ಮಗುವಾಗಿದ್ದು, ಇದನ್ನು ಇನ್ನೂ ಬೆಳೆಸಬೇಕಾಗಿದೆ ಎಂದರು.

ನ್ಯಾಯಮೂರ್ತಿ ಗಳಾದ ಎನ್‌.ಕೆ. ಜೈನ್‌, ಸಿರಿಯಾಕ್‌ ಜೋಸೆಫ್‌ ಹಾಗೂ ಎನ್‌.ಕೆ.ಪಾಟೀಲ ಅವರು ಕಲಬುರಗಿ ಹೈಕೋರ್ಟ್‌ ಪೀಠ ಪ್ರಾರಂಭ ವಾಗಲು ಕಾರಣೀಕರ್ತರಾಗಿದ್ದರೆ, ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಅವರು ಈ ಪೀಠವನ್ನು ಗುರುತಿಸಿ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದರು.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ದಶಮಾನೋತ್ಸವಕ್ಕೆ ಚಾಲನೆ ನೀಡಿದರು.
ಸರ್ಕಾರದ ಅಡ್ವೋಕೇಟ್‌ ಜನರಲ್‌ ಉದಯ ಹೊಳ್ಳ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next