Advertisement

ದೇವದುರ್ಗ ನ್ಯಾಯಾಲಯ ನಿವೇಶನ ವೀಕ್ಷಿಸಿದ ನ್ಯಾ|ಶಂಕರರಾಮ

11:13 AM Jan 25, 2019 | Team Udayavani |

ದೇವದುರ್ಗ: ಪಟ್ಟಣದ ಹೊರವಲಯದ ಅಂಚೆಸೂಗೂರು ರಸ್ತೆ ಮಧ್ಯದಲ್ಲಿ ದೇವದುರ್ಗ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಜಾಗೆಯನ್ನು ರಾಯಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರರಾಮ ವೀಕ್ಷಿಸಿದರು.

Advertisement

ಅಂಚೆಸೂಗೂರು ರಸ್ತೆಯಲ್ಲಿನ ಸರ್ವೇ ನಂ: 103ರ ಸುಮಾರು 7 ಎಕರೆ ಜಾಗೆಯಲ್ಲಿ ದೇವದುರ್ಗ ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಜಾಗೆ ಗುರುತಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಹಲವು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಜಾಗೆ ವೀಕ್ಷಿಸಿದ ನ್ಯಾ| ಬೈಲೂರು ಶಂಕರರಾಮ್‌, ನ್ಯಾಯಾಲಯ ಕಟ್ಟಡ ನಿರ್ಮಾಣದ ನೀಲನಕ್ಷೆ ವೀಕ್ಷಿಸಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ಬಿ.ಬಿ. ಪಾಟೀಲ ಅವರಿಗೆ ಸೂಚಿಸಿದರು.

ನ್ಯಾಯಾಲಯ ಕಟ್ಟಡದಲ್ಲಿ ಕಕ್ಷಿದಾರರಿಗೆ ಮತ್ತು ವಕೀಲರಿಗೆ ಅನುಕೂಲವಾಗುವ ರೀತಿಯಲ್ಲಿ ಕಟ್ಟಡ ನಿರ್ಮಿಸಬೇಕು. ಸಿಬ್ಬಂದಿಗಾಗಿ ಪ್ರತ್ಯೇಕ ವಸತಿಗೃಹ ನಿರ್ಮಾಣಕ್ಕೆ ನಿವೇಶನದಲ್ಲಿ ಜಾಗೆ ಗುರುತಿಸಿ ನಕಾಶೆ ತಯಾರಿಸುವಂತೆ ಸೂಚಿಸಿದರು. ನ್ಯಾಯಾಲಯ ಕಟ್ಟಡದ ನಿವೇಶನದ ಗಡಿ ಗುರುತಿಸಿ ದಾಖಲೆ ನೀಡುವಂತೆ ಗ್ರೇಡ್‌-2 ತಹಶೀಲ್ದಾರ್‌ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದರು.

ದೇವದುರ್ಗ ಹಿರಿಯ ಶ್ರೇಣಿ ಸಿವಿಲ್‌ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ಪ್ರಕಾಶ ಚನ್ನಪ್ಪ ಕುರುಬೆಟ್ಟ, ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ ಬಿ. ಕುಲಕರ್ಣಿ, ಉಪಾಧ್ಯಕ್ಷ ವೆಂಕಟೇಶ ಡಿ.ಚವ್ಹಾಣ, ಹನುಮಂತ ಭಂಡಾರಿ, ಪ್ರಧಾನ ಕಾರ್ಯದರ್ಶಿ ಅಮ್ಜದಖಾನ್‌ ಹವಾಲ್ದಾರ, ನಾಗರಾಜ ನಗರಗುಂಡ, ಖಜಾಂಚಿ ಹನುಮಂತರಾಯ ನಾಯಕ, ಹಿರಿಯ ನ್ಯಾಯವಾದಿ ವಿ.ಎಂ. ಮೇಟಿ, ಪ್ರಕಾಶ ಅಬಕಾರಿ, ಹನುಮಂತರಾಯ ಚಿಂತಲಕುಂಟಾ, ಅಮರೇಶ ಎಂ. ಪಾಟೀಲ, ಶರಣಬಸವ ಎಸ್‌.ಪಾಟೀಲ, ಬಸನಗೌಡ ದೇಸಾಯಿ, ರಾಘವೇಂದ್ರ ಕೋಲ್ಕಾರ, ಬಿ.ಆರ್‌.ಮನ್ನಾಪುರಿ, ವೇಣುಗೋಪಾಲಗೌಡ ಜಾಲಹಳ್ಳಿ, ಅಮರೇಗೌಡ ಬೇರಗಿ, ಪ್ರಕಾಶ ಪಾಟೀಲ ಅಮರಾಪುರು, ಸುಕುಮುನಿರೆಡ್ಡಿ ನಗರಗುಂಡ, ಮಲ್ಲಿಕಾರ್ಜುನ ಪಾಟೀಲ ನಾಗಡದಿನ್ನಿ, ರವಿಕುಮಾರ ಪಾಟೀಳ ಅಳ್ಳುಂಡಿ, ಚನ್ನಬಸವ ಗಲಗ ಇತರರು ಇದ್ದರು.

Advertisement

ವಕೀಲರ ಸಂಘದಲ್ಲಿ ಸತ್ಕಾರ: ನಿವೇಶನ ವೀಕ್ಷಿಸಲು ಆಗಮಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರರಾಮ್‌ ಅವರನ್ನು ದೇವದುರ್ಗ ವಕೀಲರ ಸಂಘದಿಂದ ಪದಾಧಿಕಾರಿಗಳು ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next