Advertisement

Judge B.H.Loya ಸಾ*ವು ಪ್ರಸ್ತಾವಿಸಿದ ಮಹುವಾ: ಲೋಕಸಭೆಯಲ್ಲಿ ಗದ್ದಲ

11:37 PM Dec 13, 2024 | Team Udayavani |

ಹೊಸದಿಲ್ಲಿ: ಲೋಕಸಭೆಯಲ್ಲಿ ಚರ್ಚೆ ವೇಳೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಜಡ್ಜ್ ಬಿ.ಎಚ್‌.ಲೋಯಾ ಸಂಶಯಾಸ್ಪದ ಸಾ*ವಿನ ಪ್ರಕರಣ ಪ್ರಸ್ತಾವಿ ಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನ್ಯಾಯಾಂಗ ಮತ್ತು ಸಾಂಸ್ಥಿಕ ಸಂಸ್ಥೆಗಳನ್ನು ಗುರಿಯಾ­ಗಿ­ಸುತ್ತಿದೆ ಎಂದು ಹೇಳುವ ವೇಳೆ ಈ ಪ್ರಕರಣವನ್ನು ಅವರು ಉಲ್ಲೇಖಿಸಿದ್ದರು. ಹೀಗಾಗಿ ಲೋಕಸಭೆಯಲ್ಲಿ ಕೋಲಾಹಲ ಉಂಟಾಗಿ 2 ಬಾರಿ ಕಲಾಪ ಮುಂದೂ­ಡಲಾಯಿತು.

Advertisement

ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರು ಮೊಯಿತ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಗದ್ದಲ ಜೋರಾಯಿತು. ಇದೇ ವೇಳೆ, ಮಹುವಾ ವಿರುದ್ಧ ಕಿರಣ್‌ ರಿಜಿಜು ಕಠಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಸೊಹ್ರಾ­ಬುದ್ದೀನ್‌ ಎನ್‌ಕೌಂಟರ್‌ ಕೇಸಿನ ವಿಚಾರಣೆ ನಡೆಸುತ್ತಿದ್ದ ಜಡ್ಜ್ ಬಿ.ಎಚ್‌.ಲೋಯಾ 2014ರಲ್ಲಿ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next