Advertisement

ಭಾರತದ ಜೂನಿಯರ್‌ ಹಾಕಿ ತಂಡಕ್ಕೆ ಜೂಡ್‌ ಫೆಲಿಕ್ಸ್‌  ಕೋಚ್‌

07:55 AM Aug 23, 2017 | Harsha Rao |

ಹೊಸದಿಲ್ಲಿ: ಭಾರತೀಯ ಹಾಕಿ ತಂಡದ ಮಾಜಿ ನಾಯಕ, ಒಲಿಂಪಿಯನ್‌ ಜೂಡ್‌ ಫೆಲಿಕ್ಸ್‌ ಸೆಬಾಸ್ಟಿಯನ್‌ ಅವರನ್ನು ಜೂನಿಯರ್‌ ಹಾಕಿ ತಂಡದ ನೂತನ ಕೋಚ್‌ ಆಗಿ ನೇಮಿಸಲಾಗಿದೆ. “ಹಾಕಿ ಇಂಡಿಯಾ’ ಮಂಗಳವಾರ ಈ ಆಯ್ಕೆಯನ್ನು ಪ್ರಕಟಿಸಿತು. 

Advertisement

ಭಾರತದ ಪುರುಷರ ತಂಡ ಮುಂಬರುವ ಜೂನಿಯರ್‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದ್ದು, ಇಲ್ಲಿನ ಸಂಭಾವ್ಯ 33 ಮಂದಿ ಆಟಗಾರರಿಗೆ ಫೆಲಿಕ್ಸ್‌ ತರಬೇತಿ ನೀಡಲಿದ್ದಾರೆ. 

“ಅಪಾರ ಅನುಭವಿ ಜೂಡ್‌ ಫೆಲಿಕ್ಸ್‌ ಭಾರತದ ಕಿರಿಯ ಹಾಕಿ ಆಟಗಾರರನ್ನು ಪಳಗಿಸಲಿದ್ದಾರೆ. 2020 ಹಾಗೂ 2024ರ ಒಲಿಂಪಿಕ್ಸ್‌ ಪಂದ್ಯಾವಳಿಗಳನ್ನು ದೃಷ್ಟಿಯಲ್ಲಿ ರಿಸಿಕೊಂಡು ನಾವು ಕಿರಿಯ ಆಟ ಗಾರರ ಸಾಮರ್ಥ್ಯವನ್ನು ಅನಾ ವರಣಗೊಳಿಸಬೇಕಿದೆ. ಇಲ್ಲಿ ಮಿಂಚಿ ದವರಿಗೆ ಸೀನಿಯರ್‌ ತಂಡದ ಬಾಗಿಲು ತೆರೆಯಲಿದೆ…’ ಎಂದು ಹಾಕಿ ಇಂಡಿಯಾದ ಹೈ ಪರ್ಫಾರ್ಮೆನ್ಸ್‌ ಡೈರೆಕ್ಟರ್‌ ಡೇವಿಡ್‌ ಜಾನ್‌ ಹೇಳಿದ್ದಾರೆ.

ಭಾರತದ ನಾಯಕತ್ವ
ಜೂಡ್‌ ಫೆಲಿಕ್ಸ್‌ 1993-95ರ ಅವಧಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. 1993ರ ವಿಶ್ವಕಪ್‌ ಹಾಗೂ 1994ರ ಹಿರೋ ಶಿಮಾ ಏಶ್ಯಾಡ್‌ನ‌ಲ್ಲಿ ಭಾರತ ತಂಡ ಇವರದೇ ಸಾರಥ್ಯದಲ್ಲಿ ಕಣಕ್ಕಿಳಿದಿತ್ತು. ಫೆಲಿಕ್ಸ್‌ 250ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 1988ರ ಕೊರಿಯಾ ಹಾಗೂ 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ಗಳಲ್ಲಿ ಆಡಿದ್ದರು. 1990 ಮತ್ತು 1994ರ ವಿಶ್ವಕಪ್‌ ಪಂದ್ಯಾವಳಿ; 1990 ಮತ್ತು 1994ರ ಏಶ್ಯಾಡ್‌; 3 ಚಾಂಪಿ ಯನ್ಸ್‌ ಟ್ರೋಫಿ ಪಂದ್ಯಾವಳಿಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.

ಕೋಚ್‌ ಜವಾಬ್ದಾರಿ ಫೆಲಿಕ್ಸ್‌ಗೆ ಹೊಸತೇನಲ್ಲ. 2014ರಲ್ಲಿ ಪುರುಷರ ತಂಡದ ಪ್ರಧಾನ ಕೋಚ್‌ ಟೆರ್ರಿ ವಾಲ್ಶ್ ಅವರಿಗೆ ಫೆಲಿಕ್ಸ್‌ ಸಹಾಯಕ ರಾಗಿದ್ದರು. ಇದಕ್ಕೂ ಮುನ್ನ 1997ರಲ್ಲಿ ಡಚ್‌ ಅಂಡರ್‌-18 ರಾಷ್ಟ್ರೀಯ ತಂಡದ ಕೋಚ್‌ ಆಗಿಯೂ ಕರ್ತವ್ಯ ನಿಭಾಯಿಸಿದ್ದರು.

Advertisement

“ನೂತನ ಹುದ್ದೆಯನ್ನು ವಹಿಸಿಕೊಳ್ಳಲು ಕಾತರಗೊಂಡಿದ್ದೇನೆ. ಸುಲ್ತಾನ್‌ ಜೋಹರ್‌ ಕಪ್‌ ಪಂದ್ಯಾವಳಿ ನನ್ನ ಈ ಹುದ್ದೆಯ ಮೊದಲ ಮೆಟ್ಟಿಲಾಗಿರುತ್ತದೆ…’ ಎಂದು ಜೂಡ್‌ ಫೆಲಿಕ್ಸ್‌ ಆವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next