ನೀಡುವಂತೆ ಒತ್ತಾಯಿಸಿ ಶಾಸಕರಾದ ಕೆ. ರಘುಪತಿ ಭಟ್, ವಿ. ಸುನೀಲ್ ಕುಮಾರ್ ಮತ್ತು ಬಿ.ಎಂ. ಸುಕುಮಾರ್‌ಶೆಟ್ಟಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೋಮ ವಾರ ಮನವಿ ಸಲ್ಲಿಸಿದ್ದಾರೆ.
Advertisement
2019ರ ಫೆ. 14ರಂದು ಕೆಎಸ್‌ಸಿಝೆಡ್‌ಎಂಎ ಸಮಿತಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ನದಿಗಳ ಮರಳು ದಿಬ್ಬ ತೆರವುಗೊಳಿಸಲು ಅನುಮತಿ ನೀಡಿದೆ. ಆದೇಶದಲ್ಲಿ ಜೂನ್‌ನಿಂದ ಸೆಪ್ಟಂಬರ್ ವರೆಗೆ ಮೀನು ಸಂತಾನೋತ್ಪತ್ತಿ ಕಾಲವೆಂದು ಉಲ್ಲೇಖೀಸಿ ಮರಳು ತೆರವಿಗೆ ನಿಷೇಧ ವಿಧಿಸಲಾಗಿದೆ. ಆದರೆ ಮೀನುಗಾರಿಕೆ ನಿಷೇಧವಿರುವುದು ಕೇವಲ ಎರಡು ತಿಂಗಳು (ಜೂ. 1ರಿಂದ ಜು. 31) ಮಾತ್ರ. ಆದ್ದರಿಂದ ಆದೇಶವನ್ನು ಪುನಃ ಪರಿಶೀಲನೆ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಮನವಿ ಸ್ವೀಕರಿಸಿದ ಸಿಎಂ ಅವರು ಸಿಆರ್‌ಝಡ್ ರಾಜ್ಯ ಕಾರ್ಯದರ್ಶಿ ವಿಜಯ ಕುಮಾರ್ ಅವರಿಗೆ ಆದೇಶವನ್ನು ಮಾರ್ಪಾಡು ಮಾಡಿ ಕಳುಹಿಸುವಂತೆ ಸೂಚನೆ ನೀಡಿದ್ದಾರೆ ಎಂದು ಕೆ. ರಘುಪತಿ ಭಟ್ ತಿಳಿಸಿದರು.