Advertisement

ಜ್ಯೂ. NTR ಅಭಿನಯದ ʻNTR 30ʼ ಗೆ ಮುಹೂರ್ತ ಫಿಕ್ಸ್‌…ಅಭಿಮಾನಿಗಳಲ್ಲಿ ಮೂಡಿದ ನಿರೀಕ್ಷೆ

06:20 PM Mar 23, 2023 | Team Udayavani |

ಹೈದರಾಬಾದ್‌: RRR ಚಿತ್ರದ ʻನಾಟು ನಾಟುʼ ಹಾಡಿಗೆ ಪ್ರತಿಷ್ಟಿತ ಆಸ್ಕರ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಬಳಿಕ ಸ್ಟಾರ್‌ ನಟ ಜ್ಯೂ.NTR ನಟನೆಯ ಬಹು ನಿರೀಕ್ಷಿತ ಹೊಸ ಚಿತ್ರಕ್ಕೆ ಪೂಜೆ ನೆರವೇರಿದೆ. ಕೊರತಲ ಶಿವ ನಿರ್ದೇಶನದ ಈ ಚಿತ್ರಕ್ಕೆ ಅಧಿಕೃತ ಹಸರನ್ನು ಚಿತ್ರತಂಡ ಇನ್ನೂ ಘೋಷಿಸಿಲ್ಲವಾದರೂ ಸದ್ಯಕ್ಕೆ ಚಿತ್ರಕ್ಕೆ ʻNTR 30ʼ ಎಂದು ನಾಮಕರಣ ಮಾಡಲಾಗಿದೆ. ಸಿನಿ ರಸಿಕರಲ್ಲಿ ಈಗಲೇ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ ನಟ ಜ್ಯೂ. NTR ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಜಾಹ್ನವಿ ಕಪೂರ್‌ ನಾಯಕ ನಟಿಯಾಗಿ ಬಣ್ಣ ಹಚ್ಚಲಿದ್ದಾರೆ.

Advertisement

ಆಸ್ಕರ್‌ ಪ್ರಶಸ್ತಿ ಬಳಿಕ ಜ್ಯೂ. NTR ಅಭಿನಯದ ಚಿತ್ರಗಳ ಮೇಲೆ ಸಾಮಾನ್ಯವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಹಾಗಾಗಿ ಈ ಚಿತ್ರವೂ ಸಿನಿ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ. ಗುರುವಾರ ಹೈದರಾಬಾದ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ RRR ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಚಿತ್ರಕ್ಕೆ ಫಸ್ಟ್‌ ಕ್ಲ್ಯಾಪ್‌ ಮಾಡುವ ಮೂಲಕ ಶುಭಕೋರಿದ್ದಾರೆ. ಈ ಅದ್ದೂರಿ ಸಮಾರಂಭದಲ್ಲಿ KGF ನಿರ್ದೇಶಕ ಪ್ರಶಾಂತ್‌ ನೀಲ್‌, ನಟ ಪ್ರಕಾಶ್‌ ರಾಜ್‌ ಕೂಡಾ ಭಾಗಿಯಾಗಿದ್ದಾರೆ.

NTR ಆರ್ಟ್ಸ್‌ ತಂಡ ಈ ಚಿತ್ರದ ಪೂಜೆಯ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು ಭಾರೀ ಸದ್ದು ಮಾಡಿದೆ.

ಅಲ್ಲದೇ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಜಾಹ್ನವಿ ಕಪೂರ್‌ ಕೂಡಾ ತಮ್ಮ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ʻಸಂತೋಷದ ದಿನ. NTR 30 ತಂಡದ ಜೊತೆಗಿನ ವಿಶೇಷ ಪ್ರಯಾಣವನ್ನು ಆರಂಭಿಸಲು ಸಂತೋಷವಾಗುತ್ತಿದೆʼ ಎಂದು ಬರೆದುಕೊಂಡಿದ್ದಾರೆ.

Advertisement

 

ವಿಶೇಷವೇನೆಂದರೆ, ಕಳೆದ ತಿಂಗಳು ಜಾಹ್ನವಿ ಹುಟ್ಟುಹಬ್ಬದಂದು ಈ ಪ್ರಾಜೆಕ್ಟ್‌ ಬಗೆಗಿನ ಮಾಹಿತಿ ಹೊರಬಿದ್ದಿತ್ತು. ಅಂದು ಈ ಕುರಿತು ಫೋಟೋವೊಂದನ್ನು ಹಂಚಿಕೊಂಡಿದ್ದ ಅವರು, ʻಕೊನೆಗೂ ಪ್ರಾರಂಭವಾಗಿದೆ. ನನ್ನ ನೆಚ್ಚಿನ ಜ್ಯೂ. NTR ಜೊತೆಗೆ ನನ್ನ ಪ್ರಯಾಣವನ್ನು  ಆರಂಭಿಸಲು ಕಾಯಲಾಗುತ್ತಿಲ್ಲ. #NTR30 ಎಂದು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜ್ಯೂ. NTR ʻತಂಡಕ್ಕೆ ಸ್ವಾಗತ ಜಾನ್ಹವಿ ಕಪೂರ್‌ʼ ಎಂದು ಬರೆದುಕೊಂಡಿದ್ದದ್ದು ಸಿನಿ ಪ್ರಿಯರಲ್ಲಿ ಭಾರೀ ಕುತೂಹಲ ಕೆರಳಿಸಿತ್ತು.

 

ʻಜನತಾ ಗ್ಯಾರೆಜ್‌ʼ ಬಳಿಕ ಜ್ಯೂ. NTR ,ಕೊರತಲ ಶಿವ ಜೊತೆಗೆ ಸಿನೆಮಾ ಮಾಡುತ್ತಿದ್ದಾರೆ. ಆಸ್ಕರ್‌ ಬಳಿಕ ಸ್ಟಾರ್‌ ನಟನ ಅಭಿನಯದ ಚಿತ್ರದ ಮೇಲೆ ಭಾರೀ ಭರವಸೆ ಮೂಡಿದ್ದು ಸಿನಿ ರಸಿಕರು ಕಾತುರರಾಗಿದ್ದಾರೆ.

ಇದನ್ನೂ ಓದಿನಟಿ Daksha Nagarkar ಹಾಟ್‌ ಫೋಟೋ ಗ್ಯಾಲರಿ

Advertisement

Udayavani is now on Telegram. Click here to join our channel and stay updated with the latest news.

Next