ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾನಿಲಯ ಹಾಗೂ ಶ್ರೀನಿವಾಸ ಸಮೂಹ ಸಂಸ್ಥೆಗಳ ವತಿಯಿಂದ ಜು. 27ರಂದು ಬೆಳಗ್ಗೆ 10 ಗಂಟೆಗೆ ಪಾಂಡೇಶ್ವರದಲ್ಲಿರುವ ಸಿಟಿ ಕ್ಯಾಂಪಸ್‌ನಲ್ಲಿ’ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಈ ಬಗ್ಗೆ ಶ್ರೀನಿವಾಸ ವಿಶ್ವವಿದ್ಯಾ ನಿಲಯದ ಉಪಕುಲಪತಿ ಡಾ| ಪಿ. ಎಸ್. ಐತಾಳ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಶಿಕ್ಷಣ ದೊಂದಿಗೆ ಸಾಮಾಜಿಕ ಸೇವೆಗಳಲ್ಲೂ ಶ್ರೀನಿವಾಸ ಸಂಸ್ಥೆ ಮಹತ್ತರ ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ನಿರುದ್ಯೋಗಿ ಯುವಕ, ಯುವತಿಯರಿಗೆ ಅರ್ಹಉದ್ಯೋಗವನ್ನು ನೀಡುವ ನಿಟ್ಟಿನಲ್ಲಿ
ಉದ್ಯೋಗ ಮೇಳವನ್ನು ಆಯೋಜಿಸಿದೆ ಎಂದರು.
ಉದ್ಯೋಗ ಮೇಳದಲ್ಲಿ ಭಾಗವಹಿಸಲು 85ಕ್ಕೂ ಅಧಿಕ ಕಂಪೆನಿಗಳು ಈಗಾಗಲೇ ಹೆಸರು ನೋಂದಾಯಿಸಿ ಕೊಂಡಿವೆ. 100ಕ್ಕೂ ಮಿಕ್ಕಿ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಪಾರ್ಟ್ ಟೆ„ಂ ಉದ್ಯೋಗ ಮಾಡುತ್ತಿರುವ ಉದ್ಯೋಗಿಗಳು, ಅಪ್ರಂಟಿಸ್ ಶಿಪ್, ಪ್ರಾಜೆಕ್ಟ್ ತರಬೇತಿ ಪಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳು, ಫ್ರೀ ಲಾನ್ಸ್ ಕಾರ್ಯಕರ್ತರು ಹಾಗೂ ಇತರ ಅಭ್ಯರ್ಥಿಗಳು ಉದ್ಯೋಗ ಮೇಳದ ಸದುಪಯೋಗ ಪಡೆಯಬಹುದು ಎಂದರು.
ಎಸ್ಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್ ಸಹಿತ ಇತರ ಯಾವುದೇ ಪದವಿ ಸ್ನಾತಕೋತ್ತರ ಪದವಿ ಪಡೆದ ಕಾಲೇಜು ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರು ಈ ಮೇಳದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಉದ್ಯೋಗಾಕಾಂಕ್ಷಿಗಳು ಉತ್ತಮ ಉಡುಗೆಯೊಂದಿಗೆ ತಮ್ಮ ಸ್ವ – ಪರಿಚಯ ಪತ್ರ, ಗುರುತುಪತ್ರ, ಭಾವ ಚಿತ್ರ ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದು. ಸ್ಥಳದಲ್ಲಿಯೇ ನೋಂದಣಿ ಸೌಲಭ್ಯ ವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉದ್ಯೋಗ ಮೇಳದ ಭಿತ್ತಿ ಪತ್ರವನ್ನು ಬಿಡುಗಡೆ ಗೊಳಿಸಲಾಯಿತು. ಶ್ರೀನಿವಾಸ ವಿ.ವಿ. ರಿಜಿಸ್ಟ್ರಾರ್ ಡಾ| ಅಜಯ್ ಕುಮಾರ್, ಪ್ರೊ| ಅಂಕಿತ್, ಎಸ್‌ಬಿಐ ಬ್ಯಾಂಕ್ ಮುಖ್ಯ ಪ್ರಬಂಧಕ ಪ್ರಶಾಂತ್ ಶೆಣೈ, ಅಣ್ಣಪ್ಪ ಶೆಟ್ಟಿ, ಪ್ರೊ| ವರುಣ್ ಉಪಸ್ಥಿತರಿದ್ದರು.