Advertisement

ಜು. 21: ಹಿರಿಯ ಸಮಾಜಶಾಸ್ತ್ರಜ್ಞ ಪ್ರೊ|ಶ್ರೀಪತಿ ತಂತ್ರಿ-80 ಅಭಿನಂದನೆ

01:29 AM Jul 18, 2019 | Sriram |

ಉಡುಪಿ: ಪ್ರಸಿದ್ಧ ಸಮಾಜಶಾಸ್ತ್ರಜ್ಞ ಪ್ರೊ| ಪಾದೂರು ಶ್ರೀಪತಿ ತಂತ್ರಿ ಅವರಿಗೆ 80 ತುಂಬುವಸದವಸರದಲ್ಲಿ ಜು. 21ರಂದು ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಅಭಿನಂದಿಸಲಾಗುವುದು.

Advertisement

ಬೆಳಗ್ಗೆ 9ರಿಂದ ಕಾರ್ಯಕ್ರಮ ನಡೆಯಲಿದೆ. ಕುಂದಾಪುರ ಭಂಡಾರ್‌ಕಾರ್ ಕಾಲೇಜು, ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ, ಶಿರ್ವದ ಎಂಎಸ್‌ಆರ್‌ಎಸ್‌ ಕಾಲೇಜು ಮತ್ತು ಮಣಿಪಾಲದ ಮಾಧವ ಪೈ ಕಾಲೇಜಿನಲ್ಲಿ ಪ್ರಾಂಶು ಪಾಲರಾಗಿ ಸೇವೆ ಸಲ್ಲಿಸಿದ್ದ ಪ್ರೊ| ತಂತ್ರಿಯವರು ಪ್ರಾರಂಭದಲ್ಲಿ ಮಣಿಪಾಲ ಕೆಎಂಸಿಯಲ್ಲಿಯೂ ಉಪನ್ಯಾಸಕರಾಗಿದ್ದರು. ಮಂಗಳೂರು, ಮೈಸೂರು ವಿ.ವಿ. ಸೆನೆಟ್ ಸದಸ್ಯರಾಗಿ, ಮಂಗಳೂರು ವಿ.ವಿ. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರಾಗಿ, ವಿ.ವಿ. ಅನುದಾನ ಆಯೋಗದ ಸ್ಥಾಯೀ ಸಮಿತಿ ಸದಸ್ಯರಾಗಿ ಅವರ ಶೈಕ್ಷಣಿಕ ಸಾಧನೆಯ ಹರವು ವಿಸ್ತಾರವಾದುದು. ರಥಬೀದಿ ಗೆಳೆಯರು ಸಂಘಟನೆಯನ್ನು ಅಧ್ಯಕ್ಷರಾಗಿ ಬಹುಕಾಲ ಮುನ್ನಡೆಸಿದ ಪ್ರೊ| ತಂತ್ರಿಯವರು ಹೋರಾಟಗಾರರಾಗಿಯೂ ತನ್ನ ಛಾಪನ್ನು ಮೂಡಿಸಿದ್ದಾರೆ. 1970ರ ದಶಕದಲ್ಲಿ ಮೈಸೂರು ವಿ.ವಿ. ವ್ಯಾಪ್ತಿಯಲ್ಲಿರುವಾಗ ಉಪನ್ಯಾಸಕರ ವೇತನ ಆಡಳಿತ ಮಂಡಳಿ ಮೂಲಕ ವಿತರಣೆಯಾಗುತ್ತಿದ್ದ ಸಮಯ, ವೇತನವನ್ನು ಬ್ಯಾಂಕ್‌ ಮೂಲಕ ಜಮೆಯಾಗುವಂತೆ ‘ಮುಕ್ತ’ ಸಂಘಟನೆ ಮೂಲಕ ಹೋರಾಟ ನಡೆಸಿ ಯಶಸ್ವಿಯಾದವರು ತಂತ್ರಿ. 1986ರ ರಾಷ್ಟ್ರೀಯ ಉನ್ನತ ಶಿಕ್ಷಣ ನೀತಿ ಸಮಿತಿ ಸದಸ್ಯರಾಗಿ ರಾಷ್ಟ್ರ ಮಟ್ಟದ ಪ್ರಾಂಶುಪಾಲರ ಒಕ್ಕೂಟದ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮಂಗಳೂರು ವಿ.ವಿ. ಸ್ಥಾಪನೆಯಲ್ಲೂ ಅವರ ಪಾತ್ರವನ್ನು ಗುರುತಿಸಿ ವಿ.ವಿ.ಯ ಒಂದು ಪ್ರವೇಶದ್ವಾರಕ್ಕೆ ಅವರ ಹೆಸರಿಡಲಾಗಿದೆ.

ಪ್ರೊ| ತಂತ್ರಿಯವರು ಪ್ರಸಿದ್ಧ ಸಮಾಜಶಾಸ್ತ್ರಜ್ಞೆ ದಿ| ಡಾ| ಇರಾವತಿ ಕರ್ವೆ ಅವರ ‘ಯುಗಾಂತ’ವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಮಾಜಶಾಸ್ತ್ರ, ಮಾನವ ಶಾಸ್ತ್ರ, ಭಾರತೀಯ ದರ್ಶನ ಪ್ರಕಾರಗಳು, ವಾಸ್ತು, ಆಗಮ, ವಿಗ್ರಹಶಾಸ್ತ್ರ, ಜಾಗತಿಕ ಧರ್ಮಗಳ ತುಲನಾತ್ಮಕ ವಿಮರ್ಶೆ, ಉನ್ನತ ಶಿಕ್ಷಣ ಹೀಗೆ ಅನೇಕ ವಿಷಯಗಳ ಬಗೆಗೆ ಸುಮಾರು 200 ಲೇಖನಗಳನ್ನು ಪ್ರಕಟಿಸಿದ್ದಾರೆ. ಅಮೆರಿಕದ

Advertisement

Udayavani is now on Telegram. Click here to join our channel and stay updated with the latest news.

Next