Advertisement

ಧರ್ಮದ ಉದ್ದೇಶ ಸತ್ಯವನ್ನು ಬಯಲು ಮಾಡುವುದು: ಜೆ.ಆರ್.ಲೋಬೋ

04:34 PM Dec 07, 2018 | Sharanya Alva |

ಧರ್ಮಸ್ಥಳ: ಗಾಂಧಿ ಚಿಂತನೆಗಳನ್ನು ಸಾಮಾಜಿಕ ಒಳಿತಿಗಾಗಿ ಮತ್ತೊಮ್ಮೆ ನೆನಪಿಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ಶಾಸಕ ಜೆ.ಆರ್ ಲೋಬೋ ಹೇಳಿದರು.

Advertisement

ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ನಡೆದ 86ನೇ ಐತಿಹಾಸಿಕ ಸರ್ವಧರ್ಮ ಸಮ್ಮೇಳನದಲ್ಲಿ ಅತಿಥಿಯಾಗಿ ಭಾಗವಹಿಸಿ, ‘ಧರ್ಮಗಳಲ್ಲಿ ಸಮನ್ವಯತೆ ಗಾಂಧೀಜಿಯ ಸಂದೇಶಗಳು’ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.

ಶಾಂತಿಯನ್ನು ಅನುಸರಿಸಲು ಗಾಂಧೀಜಿಯವರು ಕಂಡುಕೊಂಡ ಮಾರ್ಗ ಧರ್ಮ. ಗಾಂಧೀಜಿಯ ಚಿಂತನೆಗಳು ಅವರ ಕಾಲಾವಧಿಯಂತೆ ಇಂದಿನ ನಮ್ಮ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ನಾವು ಕಾಣಬಹುದು. ಅವರ ಪ್ರಕಾರ ಹಿಂದುತ್ವ ಎಂದರೆ ಎಲ್ಲರನ್ನು ಒಳಗೊಂಡಿದ್ದು. ಅದು ಮುಸ್ಲಿಂ ವಿರೋಧಿ ಅಲ್ಲ. ಕ್ರೈಸ್ತ ವಿರೋಧಿ ಅಲ್ಲ ಎಂದರು.

ಯಾವುದೇ ಧರ್ಮದ ಉದ್ದೇಶ ಸತ್ಯವನ್ನು ಬಯಲು ಮಾಡುವುದಾಗಿದೆ. ಗಾಂಧೀಜಿಯವರು ಧರ್ಮಗಳಲ್ಲಿ ಅಡಗಿರುವ ಸತ್ಯಗಳ ಬಗ್ಗೆ ಅರಿತವರು.

 ಒಬ್ಬ ಹಿಂದೂ ಉತ್ತಮ ಹಿಂದುವಾದರೆ, ಒಬ್ಬ ಮುಸಲ್ಮಾನ ಉತ್ತಮ ಮುಸಲ್ಮಾನನಾದರೆ, ಒಬ್ಬ ಕ್ರೈಸ್ತ ಉತ್ತಮ ಕ್ರೈಸ್ತನಾದರೆ ಅವರು ಇನ್ನೊಂದು ಧರ್ಮವನ್ನು ವಿರೋಧಿಸಲು ಸಾಧ್ಯವಿಲ್ಲ. ಪ್ರತೀ ಧರ್ಮವೂ ಅನೇಕತೆಯ ಸಿದ್ದಾಂತದ ಮೇಲೆ ನಿಂತಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮಕ್ಕೆ ನೀಡುವಷ್ಟೇ ಪ್ರಾಮುಖ್ಯತೆ ಇತರ ಧರ್ಮಗಳಿಗೂ ನೀಡಬೇಕು. ದೇಶದ ಒಗ್ಗಟ್ಟಿಗೆ ಮತ್ತು ಪುನರ್ ನಿರ್ಮಾಣಕ್ಕೆ ಎಲ್ಲಾ ಧರ್ಮದವರು ಇತರ ಧರ್ಮದವರನ್ನು ಗೌರವಿಸುವುದು ಅನಿವಾರ್ಯ ಎಂದರು.

Advertisement

ಗಾಂಧೀಜಿಯವರ ಮುಖ್ಯ ತತ್ವ ಅಹಿಂಸೆ. ಅವರ ಈ ತತ್ವ ಖಿಲಾಫತ್ ಚಳವಳಿಯಲ್ಲಿ ಮುಸ್ಲಿಂ ನಾಯಕರಿಗೆ ಶಾಂತಿಯನ್ನು ಪಾಲಿಸಲು ಪ್ರೇರಣೆಯಾಯಿತು. ಹಲವು ಧರ್ಮಗಳ ನೆಲೆಯಾದ ಭಾರತದಲ್ಲಿ ಜಾತ್ಯತೀತತೆ ದೇಶದ ಅಸ್ಮಿತೆ. ಧರ್ಮವು ಪ್ರತಿಯೊಬ್ಬನ ವೈಯಕ್ತಿಕ ವಿಚಾರ. ಗಾಂಧೀಜಿಯವರು ಎಲ್ಲಾ ಸಭೆಗಳಲ್ಲಿ ಪ್ರತಿಪಾದಿಸುತಿದ್ದ ಹಾಗೆ ನಾವು ಮೊದಲು ಭಾರತೀಯರು. ಆನಂತರ ಹಿಂದೂ, ಮುಸ್ಲಿಂ, ಕ್ರೈಸ್ತ. ಜೈನ, ಪಾರ್ಸಿ ಎಂದರು ಹೇಳುವ ಮೂಲಕ ಮಹಾತ್ಮನ ಸಂದೇಶವನ್ನು ಸಾರಿದರು.

ಧರ್ಮದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವುದು ಬೇಡ. ಧರ್ಮದ ಮೂಲಕ ಪ್ರೀತಿಯನ್ನು ಸಾರೋಣ. ನಾವೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಾರಿಸ್ ಸೋಕಿಲ

ಎಸ್.ಡಿ.ಎಂ ಕಾಲೇಜು ಉಜಿರೆ.

Advertisement

Udayavani is now on Telegram. Click here to join our channel and stay updated with the latest news.

Next