Advertisement

ಜೂ. 30ರ ವರೆಗಿಗ ಎಲ್ಲ ಕೂಟ ರದ್ದು: ಐಟಿಟಿಎಫ್

12:38 AM Mar 31, 2020 | Sriram |

ಹೊಸದಿಲ್ಲಿ: ಕೋವಿಡ್‌ 19 ವೈರಸ್‌ ವಿಶ್ವದಾದ್ಯಂತ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂಟರ್‌ನ್ಯಾಶನಲ್‌ ಟೇಬಲ್‌ ಟೆನಿಸ್‌ ಫೆಡ‌ರೇಶನ್‌ ಮುಂದಿನ ಜೂನ್‌ 30ರ ವರೆಗಿನ ತನ್ಮೆಲ್ಲ ಯೋಜಿತ ಕೂಟಗಳನ್ನು ರದ್ದುಗೊಳಿಸಿದೆ ಮಾತ್ರವಲ್ಲದೇ ಆಟಗಾರರ ವಿಶ್ವ ರ್‍ಯಾಂಕಿಂಗ್‌ ಅನ್ನು ಸದ್ಯದ ಮಟ್ಟಿಗೆ ತಡೆಹಿಡಿಯಲು ನಿರ್ಧರಿಸಿದೆ.

Advertisement

ಕೋವಿಡ್‌ 19 ಉಂಟುಮಾಡುತ್ತಿರುವ ಅನಾಹುತದಿಂದ ಟೇಬಲ್‌ ಟೆನಿಸ್‌ ಕೂಟಗಳ ವೇಳಾಪಟ್ಟಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಐಟಿಟಿಎಫ್ ಕಾರ್ಯಕಾರಿ ಸಮಿತಿ ಸಭೆ ಸೇರಿ ಚರ್ಚೆ ನಡೆಸಿತು. ಕೋವಿಡ್‌ 19 ಹರಡುವಿಕೆ ತೀವ್ರಗತಿಯಲ್ಲಿ ಏರುತ್ತಿರುವುದರಿಂದ ಟೋಕಿಯೊ ಒಲಿಂಪಿಕ್ಸ್‌ ಕೂಟ ಈಗಾಗಲೇ ಮುಂದೂಡಲ್ಪಟ್ಟಿದೆ. ಹಾಗಾಗಿ ಜೂನ್‌ 30ರ ವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿರುವ ಎಲ್ಲ ರೀತಿಯ ಐಟಟಿಎಫ್ ಕೂಟಗಳನ್ನು ರದ್ದುಗೊಳಿಸಲು ಸಭೆ ತೀರ್ಮಾನಿಸಿದೆ ಎಂದು ಐಟಿಟಿಎಫ್ ಪ್ರಕಟನೆಯಲ್ಲಿ ತಿಳಿಸಿದೆ.

ಹಾನಾ ಬ್ಯಾಂಕ್‌ ಕೂಟಕ್ಕೆ ಹೊಸ ದಿನಾಂಕ
ಎಲ್ಲ ಕೂಟ ರದ್ದು ಮಾತ್ರವಲ್ಲದೇ ಆಟಗಾರರ ರ್‍ಯಾಂಕಿಂಗ್‌ ಪಟ್ಟಿಯನ್ನು ಮಾರ್ಚ್‌ ತಿಂಗಳಿಗೆ ಅನ್ವಯವಾಗುವಂತೆ ತಡೆಹಿಡಿಯಲು ಕೂಡ ನಿರ್ಧರಿಸಲಾಗಿದೆ. ಮಾತ್ರವಲ್ಲದೇ ಹಾನಾ ಬ್ಯಾಂಕ್‌ 2020 ವಿಶ್ವ ಟೀಮ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನ ಹೊಸ ದಿನಾಂಕವನ್ನು ಮುಂದಿನ ವಾರಗಳಲ್ಲಿ ಪ್ರಕಟಿಸಲಾಗುವುದು ಎಂದು ಐಟಿಟಿಎಫ್ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next