Advertisement

ಜೂ. 10 ರೊಳಗೆ ಕಬ್ಬಿನ ಬಿಲ್‌ ಪಾವತಿಗೆ ಕ್ರಮ

03:25 PM May 29, 2017 | |

ಆಳಂದ: ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರ ಕಬ್ಬಿನ ಹಣ ಜೂನ್‌ 10ರೊಳಗೆ ಪಾವತಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ಜೀತೇಂದ್ರ ಸಿಂಗ್‌ ಚಿಮ್ಮಾ ಹೇಳಿದರು. ಸುದ್ದಿಗಾರೊಂದಿಗೆ ಮಾತನಾಡಿದರು.

Advertisement

ಕಾರ್ಖಾನೆಗೆ ಕಬ್ಬು ಕೊಟ್ಟ ರೈತರಿಗೆ ಕಬ್ಬಿನ ಬಿಲ್‌ ಪಾವತಿಸುವಲ್ಲಿ ವಿಳಂಬವಾಗಿದೆ. ಇದಕ್ಕೆ ರೈತರು ಸಹಕರಿಸಿದ್ದಕ್ಕೆ ಅವರಿಗೆ ಕೃತಜÒತೆ ಸಲ್ಲಿಸುವೆ ಎಂದು ಹೇಳಿದರು. ಸುಮಾರು 7 ಕೋಟಿ ರೂ. ಕಬ್ಬಿನ ಬಾಕಿ ಬಿಲ್‌ನ್ನು ಮೇ 31ರೊಳಗೆ ರೈತರ ಖಾತೆಗಳಿಗೆ ಜಮೆ ಮಾಡುವ ಕಾರ್ಯ ಚಾಲ್ತಿಯಲ್ಲಿದೆ.

ಇದಕ್ಕೆ ರೈತರು ಸಹಕಾರ ನೀಡಿದ್ದಾರೆ. ಆದರೆ ಕಾರ್ಖಾನೆಗೆ ಯಾವುದೇ ಮಾಹಿತಿ ನೀಡದೆ, ಏಕಾಏಕಿ ಧರ್ಮರಾಜ ಸಾಹು ಹಾಗೂ 15 ಜನರು ಕಾರ್ಖಾನೆಯೊಳಗೆ ನುಗ್ಗಿ ಸಕ್ಕರೆ ಸಂಗ್ರಹವಿದ್ದ ಗೋದಾಮಿಗೆ ಬೀಗಹಾಕಿ ಪ್ರತಿಭಟನೆ ಮಾಡಿದ್ದಾರೆ ಎಂದು ಆರೋಪಿಸಿದರು. 

ಕಬ್ಬಿನ ಬಿಲ್‌ ಕೇಳಲು ಹೋದಾಗ ಪೊಲೀಸ್‌ ಪ್ರಕರಣ ದಾಖಲಿಸಲಾಗಿದೆ ಎಂದು ಧರ್ಮರಾಜ ಸಾಹು ಪತ್ರಿಕಾ ಹೇಳಿಕೆ ನೀಡಿರುವುದನ್ನು ಅಲ್ಲಗಳೆದ ಅವರು, ಕಾರ್ಖಾನೆಯಲ್ಲಿ ಗೂಂಡಾಗಿರಿ ಮಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಧರ್ಮರಾಜ ಸಾಹು ಸೇರಿದಂತೆ ಅವರ ಹಿಂಬಾಲಕರ ವಿರುದ್ಧ ನಿಂಬರಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ರೈತರು ಹಾಗೂ ಎನ್‌ಎಸ್‌ಎಲ್‌ ಶುಗರ್ ಕಂಪನಿಯ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಕ್ಕರೆ ತುಂಬಿದ ಲಾರಿಗಳು ಸಾಗಿಸಬೇಕಾದರೆ ಇವರು ತಂಡದೊಂದಿಗೆ ಧವಿಸಿ ಲಾರಿಯ ಟೈರ್‌ಗಳ ಗಾಳಿಬಿಟ್ಟಿದ್ದಾರೆ.

Advertisement

ಕಾರ್ಖಾನೆ ಅಧಿಕಾರಿಗಳು ವಾಸಮಾಡುವ ಮನೆಗಳಿಗೆ ಬಂದು ಬಾಗಿಲು ಬಡಿದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಎನ್‌ ಎಸ್‌ಎಲ್‌ ಕಂಪನಿಯವರನ್ನು ಇಲ್ಲಿಂದ ಓಡಿಸುತ್ತೇವೆ ಎಂದು ಕೂಗಾಡಿದಾಗ ಮನೆಯಲ್ಲಿದ್ದ ಮಕ್ಕಳು, ಮಹಿಳೆಯರು ಭಯಭೀತರಾಗಿದ್ದರು. ಅಲ್ಲದೆ ಕಾವಲು ಅಧಿಕಾರಿ ರಂಗನಾಥ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಸಾಹು ಅವರು ನಿಜವಾಗಿ ರೈತರ ಪರ ಕಾಳಜಿ ಹೊಂದಿದ್ದರೆ ಕಚೇರಿ ಸಮಯದಲ್ಲಿ ಬಂದು ವಿಚಾರಿಸಬೇಕಿತ್ತು. ಕೆಲ ಕುಡಕರ ಸಂಘಕಟ್ಟಿಕೊಂಡು ರಾತ್ರಿ ವೇಳೆ ಕಾರ್ಖಾನೆಗೆ ನುಗ್ಗಿ ಅಧಿಕಾರಿಗಳನ್ನು ಹೆದರಿಸಿ ಬ್ಲಾಕ್‌ವೆುಲ್‌ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. 

ಲಾರಿಯ ಟೈರ್‌ಗಳ ಗಾಳಿಬಿಟ್ಟಿದ್ದರಿಂದ ಸುಮಾರು 200ಟನ್‌ ಸಕ್ಕರೆ ಬಿಸಿಲಿನಿಂದ ಗುಣಮಟ್ಟತೆ ಕಳೆದುಕೊಂಡು ಮಾರುಕಟ್ಟೆಯಲ್ಲಿ ಶೇ. 50ರಷ್ಟು ಕಡಿಮೆ ಬೆಲೆಗೆ ಮಾರಾಟವಾಗಿ ಕಂಪನಿಗೆ ನಷ್ಟವಾಗಿದೆ. ಐದು ದಿನಗಳಿಂದ ಗೋದಾಮಿನ ಬೀಗದ ಕೈ ನೀಡದೆ ಸತಾಯಿಸಿದ್ದಾರೆ. 

ಇದರಿಂದ ಗೊದಾಮಿನಲ್ಲಿದ್ದ ಸಕ್ಕರೆ ಮಾರಾಟವಾಗಿಲ್ಲ. ಹೀಗಾಗಿ ಮೇ 31ರ ಬದಲು ಜೂನ್‌ 10ರವರೆಗೆ ರೈತರ ಉಳಿದ ಹಣ ಜಮೆ ಮಾಡಲಾಗುವುದು. ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾರ್ಖಾನೆಯ ಎಜಿಎಂ ನಿಂಗಣ್ಣಗೌಡ ಬೆಳ್ಳೆ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next