Advertisement

ಹಿಮಾಚಲ ಪ್ರದೇಶ:ಸಿಎಂ ರೇಸ್‌ನಲ್ಲಿ ನಡ್ಡಾ, ಠಾಕೂರ್‌  

10:02 AM Dec 19, 2017 | |

ಶಿಮ್ಲಾ: ವಿಧಾನಸಭೆ ಚುನಾ ವಣೆಯಲ್ಲಿ  ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಸಫ‌ಲವಾದರೂ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್‌ಕುಮಾರ್‌  ಧುಮಾಲ್‌ ಅವರ ಅನಿರೀಕ್ಷಿತ ಸೋಲಿನಿಂದ ಹುದ್ದೆಗೆ ಬೇರೆ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ. 

Advertisement

ಇದೀಗ ಪ್ರಮುಖವಾಗಿ ಸಿಎಂ ಹುದ್ದೆಗೆ ಕೇಂದ್ರ ಸಚಿವ ಜಗತ್‌  ಪ್ರಕಾಶ್‌ ನಡ್ಡಾ ಮತ್ತು ಹಿರಿಯ ಶಾಸಕ ಮಾಜಿ ಸಚಿವ ಜೈರಾಮ್‌ ಠಾಕೂರ್‌ ಅವರ ಹೆಸರು ಕೇಳಿ ಬರುತ್ತಿದೆ. 

ವಿಶೇಷವೆಂದರೆ ಧುಮಾಲ್‌ ಅವರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಸತ್‌ಪಾಲ್‌ ಸಿಂಗ್‌ ಸತ್ತಿ ಅವರೂ ಉನಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. 

ಠಾಕೂರ್‌ ಮಂಡಿ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಹಿಂದೆ ಹಿಮಾಚಲ ಪ್ರದೇಶದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿ  ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 

ಗೋವಾ ಮಾದರಿ ಅನುಸರಿಸುವ ಸಾಧ್ಯತೆ

Advertisement

ಗೋವಾ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಲಕ್ಷ್ಮೀಕಾಂತ್‌  ಪರ್ಶೇಕರ್‌ ಅವರು ಸೋಲು ಅನುಭವಿಸಿದ್ದರು. ಈ ಸಂದರ್ಭ  ರಕ್ಷಣಾ ಸಚಿವ ಮನೋಹರ್‌ ಪರ್ರಿಕರ್‌ ಅವರ ರಾಜೀನಾಮೆ ಪಡೆದು ಮತ್ತೆ ಮುಖ್ಯಮಂತ್ರಿ ಹುದ್ದೆ ನೀಡಲಾಗಿತ್ತು. ಇದೇ ಮಾದರಿಯಲ್ಲಿ ಅನುಭವಿ  ನಡ್ಡಾ ಅವರಿಗೇ ಸಿಎಂ ಹುದ್ದೆ ಸಿಗುವ ಸಾಧ್ಯತೆಗಳು ದಟ್ಟವಾಗಿದೆ. ನಡ್ಡಾ ಅವರು ಮೋದಿ , ಅಮಿತ್‌ ಶಾ ಅವರ ಆಪ್ತ ವಲಯದವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next