Advertisement
ನಗರದ ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿರುವ ಸೀತಾರಾಮ ಮಂದಿರದಲ್ಲಿ ವಿಜಯ ದಶಮಿ ಪ್ರಯುಕ್ತ ಸಂಘ ಏರ್ಪಡಿಸಿದ್ದ ಹಿರಿಯರ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರದ ಸರ್ವಾಂಗೀಣ ಪ್ರಗತಿ ದೃಷ್ಟಿಯಿಂದ 1925ರ ವಿಜಯದಶಮಿ ದಿನದಂದು ಡಾ.ಕೇಶವ ಬಲರಾಂ ಹೆಡಗೆವಾರ್ ಅವರು, ತಮ್ಮ ಜೀವನವನ್ನು ಸಮಾಜಕ್ಕೆ ಅರ್ಪಣೆ ಮಾಡಿಕೊಳ್ಳುವ ಮೂಲಕ ರಾಷ್ಟ್ರದ ಹಿತಕ್ಕಾಗಿ ತರುಣರನ್ನು ಸಂಘಟಿಸಿ, ಅವರಲ್ಲಿ ದೇಶಭಕ್ತಿ, ಸಂಸ್ಕಾರ, ತರಬೇತಿ ನೀಡುವ ಮೂಲಕ ಸಂಘ ಪ್ರಾರಂಭಿಸಿದರು ಎಂದು ವಿವರಿಸಿದರು. ದೇಶದ ಸಮಗ್ರ ಅಭಿವೃದ್ಧಿಗೆ ಮಾರಕವಾಗಿರುವ ಮತಾಂತರ, ಲವ್ ಜಿಹಾದ್, ಗೋಹತ್ಯೆ ಪ್ರಕರಣ ನಡೆಯುತ್ತಲೇ ಇದ್ದು, ಈ ಪಿಡುಗನ್ನು ಬುಡ ಸಮೇತ ಕಿತ್ತು ಹಾಕಲು ಸಮಗ್ರ ಹಿಂದೂ ಸಮಾಜ ಸನ್ನಧವಾಗಿ ಹೋರಾಡಬೇಕಾಗಿದೆ ಎಂದು ಅವರು ತಿಳಿಸಿದರು. ನಮ್ಮ ಸಂಘವು ಯಾವ ಧರ್ಮ, ಜನಾಂಗವನ್ನು ದ್ವೇಷಿಸುವುದಿಲ್ಲ,ಸಹಿಷ್ಣುತೆ ಮೈಗೂಡಿಸಿಕೊಂಡು ಬೆಳೆಯುತ್ತಿದೆ.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಡಿ ಪ್ರಸಾದ್, ವೆಂಕಟೇಶ್, ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀಕಾಂತ್, ಗೋವಿಂದೇಗೌಡ ಉಪಸ್ಥಿತರಿದ್ದರು.