Advertisement

ಕೆಲಸ ಕಳೆದುಕೊಂಡು ತಲೆ ಮೇಲೆ ಕೈಯಿಟ್ಟುಕೊಂಡಿದ್ದವರು ʼವಡಾ ಪಾವ್‌ʼ ಮಾರಿ ಕೋಟ್ಯಧಿಪತಿಯಾದರು

05:36 PM Nov 26, 2022 | ಸುಹಾನ್ ಶೇಕ್ |

ಸುಜಯ್ ಸೋಹಾನಿ ಮತ್ತು ಸುಬೋಧ್ ಜೋಶ್ ಹೋಟೆಲ್‌ ಮ್ಯಾನೇಜ್ಮೆಂಟ್ ಕೋರ್ಸ್‌ ನಲ್ಲಿ ಮೊದಲ ಬಾರಿ ಭೇಟಿಯಾದ ಇಬ್ಬರು ಒಟ್ಟಾಗಿಯೇ ಲಂಡನ್‌ ನಲ್ಲಿ ಸ್ನಾತಕೋತ್ತರ ಪದವಿಗೆ ದಾಖಲಾಗುತ್ತಾರೆ. ಒಟ್ಟಾಗಿಯೇ ಲಂಡನ್‌ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

Advertisement

ಲಂಡನ್‌ ನ ಪ್ರತಿಷ್ಟಿತ ಹೋಟೆಲ್‌ ನಲ್ಲಿ ಕೆಲಸಕ್ಕೆ ಸೇರಿಕೊಂಡ ಸುಜಯ್‌ ಫೈವ್‌ ಸ್ಟಾರ್‌ ಹೋಟೆಲ್‌ ನಲ್ಲಿ ಮ್ಯಾನೇಜರ್‌ ಹುದ್ದೆಗೇರುತ್ತಾರೆ. ಕೈತುಂಬಾ ಸಂಬಳ, ನೆಮ್ಮದಿ ಎಲ್ಲವೂ ಇತ್ತು. ಇತ್ತ ಸುಬೋಧ್‌ ಕೂಡ ಹೊಟೇಲ್‌ ವೊಂದರಲ್ಲಿ ಕೆಲಸ ಮಾಡುತ್ತಿದ್ದರು.  ಎಲ್ಲವೂ ಸರಿಯಾಗಿಯೇ ಇತ್ತು.

ಆದರೆ 2010 ರಲ್ಲಿ ಲಂಡನ್‌ ನಲ್ಲಿ ಆರ್ಥಿಕ ಹಿಂಜರಿಕೆ ಉಂಟಾಗುತ್ತದೆ. ಹಲವು ಮಂದಿ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಈ ಹಲವು ಮಂದಿಯಲ್ಲಿ ಅಜಯ್‌ ಕೂಡ ಸೇರಿಕೊಳ್ಳುತ್ತಾರೆ. ಅದೊಂದು ದಿನ ತನ್ನ ಹೊಟೇಲ್‌ ನ ಮಾಲಕನಿಂದ ಸುಜಯ್‌ ಅವರ ಮೊಬೈಲ್‌ ಗೆ ನೀವು ನಿಮ್ಮ ಕೆಲಸವನ್ನು ಕಳೆದುಕೊಂಡಿದ್ದೀರಿ ಎನ್ನುವ ಮೆಸೇಜ್‌ ವೊಂದು ಬರುತ್ತದೆ. ಒಮ್ಮೆಗೆ ಸುಜಯ್‌ ಅವರಿಗೆ ಇದನ್ನು ಕೇಳಿ ನಿಂತ ನೆಲವೇ ಕುಸಿಯುವಂಥ ಅನುಭವವಾಗುತ್ತದೆ.

ಒಂದಷ್ಟು ದಿನದ ಬಳಿಕ ಅವರ ಬಳಿಯಿದ್ದ ಹಣವೂ ಖಾಲಿಯಾಗುತ್ತದೆ. ಒಂದು ಕಡೆ ಆರ್ಥಿಕ ಹೊಡೆತ ಇನ್ನೊಂದೆಡೆ ಕೆಲಸವಿಲ್ಲದ ದಿನಗಳು. ಮಾನಸಿಕವಾಗಿ ಕುಗ್ಗಿದ್ದ ಸುಜಯ್‌ ತನ್ನ ಸ್ನೇಹಿತ ಸುಬೋಧ್‌ ರನ್ನು ಭೇಟಿಯಾಗುತ್ತಾರೆ. ಸುಬೋಧ್‌ ಕೂಡ ಆರ್ಥಿಕ ಹಿಂಜರಿತದಿಂದ ಕೆಲಸವನ್ನು ಕಳೆದುಕೊಂಡಿದ್ದರು.

ಬೀದಿಯ ಎಲ್ಲಾ ಹೋಟೆಲ್‌ ಗಳು ಬಂದ್‌ ಆಗುತ್ತಿವೆ. ಜನ ಮನೆಯ ಹೊರಗೆ ಬರುವುದು ಕೂಡ ಕಷ್ಟವಾಗಿದೆ. ಆರ್ಥಿಕವಾಗಿ ಕುಗ್ಗಿಹೋದ ಇಬ್ಬರ ಜೀವನದಲ್ಲೂ ಈ ಘಳಿಗೆ ಅತ್ಯಂತ ಕಠಿಣವಾಗಿತ್ತು.

Advertisement

ಆತಂಕದ ನಡುವೆಯೇ ಆಶಯದಾಯಕವಾದ ಆ ಐಡಿಯಾ: ಏನು ಮಾಡುವುದೆನ್ನುವ ಯೋಚನೆಯಲ್ಲಿದ್ದಾಗಲೇ ಅದೊಂದು ದಿನ ವಡಾ ಪಾವ್‌ ಅಂಗಡಿ ತೆರೆದೆರೆ ಹೇಗೆ ಎನ್ನುವ ಯೋಜನೆ ಬಂದಾಗ ಇಬ್ಬರೂ ಇದರ ಬಗ್ಗೆ ಗಂಭೀರವಾಗಿ ಚರ್ಚಿಸಿ ಏನೇ ಆಗಲಿ ಮುಂದೆ ಸಾಗುವ ಎಂದು ಹೆಜ್ಜೆಯಿಡುತ್ತಾರೆ.

ಇಬ್ಬರೂ ಹೋಟೆಲ್‌ ಮ್ಯಾನೇಜ್ಮೆಂಟ್‌ ನಲ್ಲಿ ಕಲಿತಿರುವುದರಿಂದ ವಡಾ ಪಾವ್‌ ಮಾಡುವುದು ಸುಲಭವಾಗಿತ್ತು. ಆದರೆ ಇದಕ್ಕಾಗಿ ಜಾಗಬೇಕೆಂದು ಸ್ಥಳೀಯವಾಗಿ ಜಾಗ ಹುಡುಕುವಾಗ ಐಸ್ ಕ್ರೀಮ್‌ ಕೆಫೆಯೊಂದನ್ನು ಹುಡುಕುತ್ತಾರೆ. ಅಷ್ಟಾಗಿ ವ್ಯಾಪಾರವಿಲ್ಲದ ಕೆಫೆಯ ಮಾಲಿಕ ಬಾಡಿಗೆಯ ಆಧಾರದಲ್ಲಿ ವಡಾ ಪಾವ್‌ ಸ್ಟಾಲ್‌ ತೆರೆಯಲ್ಲಿ ಸುಜಯ್‌ ಹಾಗೂ ಸುಬೋಧ್‌ ಅವರಿಗೆ ಅನುಮತಿ  ಕೊಡುತ್ತಾರೆ.

ಮುಂಬಯಿ ವಡಾ ಪಾವ್‌ ಲಂಡನ್‌ ನಲ್ಲಿ ಇಂಡಿಯನ್‌ ಬರ್ಗರ್..!

ಆ.5 , 2010 ರಂದು  ಸುಜಯ್‌ – ಸುಬೋಧ್‌ ಲಂಡನ್‌ ನಲ್ಲಿ ಮುಂಬಯಿ ಜನರ ಮೆಚ್ಚಿನ ವಡಾ ಪಾವ್‌ ಸ್ಟಾಲ್‌ ಆರಂಭಿಸುತ್ತಾರೆ. ಆರಂಭದಲ್ಲಿ ಒಂದು ವಡಾ ಪಾವ್‌ ಗೆ £1 ( 80 ರೂ.) ನಂತೆ ಮಾರುತ್ತಾರೆ. ಆದರೆ ಆರಂಭದ ಮಾರಾಟ ಅಷ್ಟಾಗಿ ಲಾಭವಾಗದ ಕಾರಣ ಇನ್ನಷ್ಟು ಪ್ರಚಾರ ಮಾಡುವ ನಿಟ್ಟಿನಲ್ಲಿ ಇಬ್ಬರು ವಡಾ ಪಾವ ನ್ನು ಹಿಡಿದುಕೊಂಡು ಲಂಡನ್‌ ನ ಬೀದಿ ಸುತ್ತಲು ಆರಂಭಿಸುತ್ತಾರೆ.

ಲಂಡನ್‌ ಜನರಿಗೆ ಇದು ಇಂಡಿಯನ್‌ ಬರ್ಗರ್‌, ಚೀಪ್‌ & ಬೆಸ್ಟ್ ಬನ್ನಿ ತಕ್ಕೊಳ್ಳಿ ಎಂದು ಉಚಿತವಾಗಿ ವಡಾ ಪಾವ್‌ ನೀಡಲು ಆರಂಭಿಸುತ್ತಾರೆ. ಲಂಡನ್ ನ ಜನರಿಗೆ ವಡಾ ಪಾವ್‌ ರುಚಿ ನಾಲಗೆಗೆ ತಾಗಿದ ಬಳಿಕ ಅಂಗಡಿಯ ವಿಳಾಸವನ್ನು ಹುಡುಕಿಕೊಂಡು ವಡಾ ಪಾವ್‌ ಸವಿಯಲು ಬರುತ್ತಾರೆ.

ದಿನ ಕಳೆದಂತೆ ಸುಜಯ್‌ – ಸುಬೋಧ್‌ ವಡಾ ಪಾವ್‌ ಸ್ಟಾಲ್‌ ಗೆ ಜನ ಹೆಚ್ಚಾಗಿ ಬರುತ್ತಾರೆ. ಬೆಲೆಯೂ ಹೆಚ್ಚಾಗ ತೂಡಗುತ್ತದೆ. ವಡಾ ಪಾವ್‌ ರುಚಿಯೂ ಹೆಚ್ಚುತ್ತದೆ. ಈ ನಡುವೆಯೇ ಸುಜಯ್‌ – ಸುಬೋಧ್‌ ಸ್ಟಾಲ್‌ ಲಂಡನ್‌ ನಲ್ಲಿರುವ ಪಂಜಾಬಿ ಹೊಟೇಲ್‌ ವೊಂದು ನಮ್ಮೊಂದಿಗೆ ಕೈ ಜೋಡಿಸಿ ಎಂದು ಆಫರ್‌ ನೀಡಿದೆ. ಈ ಆಫರ್‌ ಗೆ ಸಮ್ಮತಿ ಕೊಟ್ಟು ಈಗ ಶ್ರೀ ಕೃಷ್ಣ ವಡಾ ಪಾವ್ ಆಗಿದೆ.

ಇಬ್ಬರೂ ಫುಲ್‌ ಟೈಮ್‌ ಆಗಿ ವಡಾ ಪಾವ್‌ ಸ್ಟಾಲ್‌ ನಲ್ಲೇ ಕೆಲಸ ಮಾಡುತ್ತಿದ್ದಾರೆ. ಕೋಟ್ಯಂತರ ವ್ಯವಹಾರದೊಂದಿಗೆ ಲಾಭವನ್ನೂ ಪಡೆದುಕೊಳ್ಳುತ್ತಿದೆ.

ಹಲವಾರು ಶಾಖೆಗಳನ್ನು ತೆರೆದಿದ್ದಾರೆ. ಸುಮಾರು 70 ಕ್ಕೂ ಹೆಚ್ಚಿನ ಮಹಾರಾಷ್ಟ್ರದ ಆಹಾರ ಇವರ ರೆಸ್ಟೋರೆಂಟ್‌ ನಲ್ಲಿ ಲಭ್ಯವಿದೆ.  ಅನೇಕಾ ಬಾಲಿವುಡ್‌ ಸ್ಟಾರ್‌ ಗಳು ಕೂಡ ಇವರ ವಡಾ ಪಾವ್‌ ಸ್ಟಾಲ್‌ ಗೆ ಭೇಟಿ ಕೊಟ್ಟು ರುಚಿ ಸವಿದಿದ್ದಾರೆ.

ಇಂದು ಸುಜಯ್‌ – ಸುಬೋಧ್‌ ವಡಾ ಪಾವ್‌ ಸ್ಟಾಲ್ ಕೋಟ್ಯಂತರ‌ ರೂ. ವ್ಯವಹಾರ ಹಾಗೂ ಲಾಭವನ್ನು ಗಳಿಸುತ್ತಿದೆ.

-ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next