Advertisement
ಲಂಡನ್ ನ ಪ್ರತಿಷ್ಟಿತ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡ ಸುಜಯ್ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಮ್ಯಾನೇಜರ್ ಹುದ್ದೆಗೇರುತ್ತಾರೆ. ಕೈತುಂಬಾ ಸಂಬಳ, ನೆಮ್ಮದಿ ಎಲ್ಲವೂ ಇತ್ತು. ಇತ್ತ ಸುಬೋಧ್ ಕೂಡ ಹೊಟೇಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲವೂ ಸರಿಯಾಗಿಯೇ ಇತ್ತು.
Related Articles
Advertisement
ಆತಂಕದ ನಡುವೆಯೇ ಆಶಯದಾಯಕವಾದ ಆ ಐಡಿಯಾ: ಏನು ಮಾಡುವುದೆನ್ನುವ ಯೋಚನೆಯಲ್ಲಿದ್ದಾಗಲೇ ಅದೊಂದು ದಿನ ವಡಾ ಪಾವ್ ಅಂಗಡಿ ತೆರೆದೆರೆ ಹೇಗೆ ಎನ್ನುವ ಯೋಜನೆ ಬಂದಾಗ ಇಬ್ಬರೂ ಇದರ ಬಗ್ಗೆ ಗಂಭೀರವಾಗಿ ಚರ್ಚಿಸಿ ಏನೇ ಆಗಲಿ ಮುಂದೆ ಸಾಗುವ ಎಂದು ಹೆಜ್ಜೆಯಿಡುತ್ತಾರೆ.
ಇಬ್ಬರೂ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಕಲಿತಿರುವುದರಿಂದ ವಡಾ ಪಾವ್ ಮಾಡುವುದು ಸುಲಭವಾಗಿತ್ತು. ಆದರೆ ಇದಕ್ಕಾಗಿ ಜಾಗಬೇಕೆಂದು ಸ್ಥಳೀಯವಾಗಿ ಜಾಗ ಹುಡುಕುವಾಗ ಐಸ್ ಕ್ರೀಮ್ ಕೆಫೆಯೊಂದನ್ನು ಹುಡುಕುತ್ತಾರೆ. ಅಷ್ಟಾಗಿ ವ್ಯಾಪಾರವಿಲ್ಲದ ಕೆಫೆಯ ಮಾಲಿಕ ಬಾಡಿಗೆಯ ಆಧಾರದಲ್ಲಿ ವಡಾ ಪಾವ್ ಸ್ಟಾಲ್ ತೆರೆಯಲ್ಲಿ ಸುಜಯ್ ಹಾಗೂ ಸುಬೋಧ್ ಅವರಿಗೆ ಅನುಮತಿ ಕೊಡುತ್ತಾರೆ.
ಮುಂಬಯಿ ವಡಾ ಪಾವ್ ಲಂಡನ್ ನಲ್ಲಿ ಇಂಡಿಯನ್ ಬರ್ಗರ್..!
ಆ.5 , 2010 ರಂದು ಸುಜಯ್ – ಸುಬೋಧ್ ಲಂಡನ್ ನಲ್ಲಿ ಮುಂಬಯಿ ಜನರ ಮೆಚ್ಚಿನ ವಡಾ ಪಾವ್ ಸ್ಟಾಲ್ ಆರಂಭಿಸುತ್ತಾರೆ. ಆರಂಭದಲ್ಲಿ ಒಂದು ವಡಾ ಪಾವ್ ಗೆ £1 ( 80 ರೂ.) ನಂತೆ ಮಾರುತ್ತಾರೆ. ಆದರೆ ಆರಂಭದ ಮಾರಾಟ ಅಷ್ಟಾಗಿ ಲಾಭವಾಗದ ಕಾರಣ ಇನ್ನಷ್ಟು ಪ್ರಚಾರ ಮಾಡುವ ನಿಟ್ಟಿನಲ್ಲಿ ಇಬ್ಬರು ವಡಾ ಪಾವ ನ್ನು ಹಿಡಿದುಕೊಂಡು ಲಂಡನ್ ನ ಬೀದಿ ಸುತ್ತಲು ಆರಂಭಿಸುತ್ತಾರೆ.
ಲಂಡನ್ ಜನರಿಗೆ ಇದು ಇಂಡಿಯನ್ ಬರ್ಗರ್, ಚೀಪ್ & ಬೆಸ್ಟ್ ಬನ್ನಿ ತಕ್ಕೊಳ್ಳಿ ಎಂದು ಉಚಿತವಾಗಿ ವಡಾ ಪಾವ್ ನೀಡಲು ಆರಂಭಿಸುತ್ತಾರೆ. ಲಂಡನ್ ನ ಜನರಿಗೆ ವಡಾ ಪಾವ್ ರುಚಿ ನಾಲಗೆಗೆ ತಾಗಿದ ಬಳಿಕ ಅಂಗಡಿಯ ವಿಳಾಸವನ್ನು ಹುಡುಕಿಕೊಂಡು ವಡಾ ಪಾವ್ ಸವಿಯಲು ಬರುತ್ತಾರೆ.
ದಿನ ಕಳೆದಂತೆ ಸುಜಯ್ – ಸುಬೋಧ್ ವಡಾ ಪಾವ್ ಸ್ಟಾಲ್ ಗೆ ಜನ ಹೆಚ್ಚಾಗಿ ಬರುತ್ತಾರೆ. ಬೆಲೆಯೂ ಹೆಚ್ಚಾಗ ತೂಡಗುತ್ತದೆ. ವಡಾ ಪಾವ್ ರುಚಿಯೂ ಹೆಚ್ಚುತ್ತದೆ. ಈ ನಡುವೆಯೇ ಸುಜಯ್ – ಸುಬೋಧ್ ಸ್ಟಾಲ್ ಲಂಡನ್ ನಲ್ಲಿರುವ ಪಂಜಾಬಿ ಹೊಟೇಲ್ ವೊಂದು ನಮ್ಮೊಂದಿಗೆ ಕೈ ಜೋಡಿಸಿ ಎಂದು ಆಫರ್ ನೀಡಿದೆ. ಈ ಆಫರ್ ಗೆ ಸಮ್ಮತಿ ಕೊಟ್ಟು ಈಗ ಶ್ರೀ ಕೃಷ್ಣ ವಡಾ ಪಾವ್ ಆಗಿದೆ.