Advertisement
ಎಲ್ಲವೂ ಸಿದ್ಧವಾಗಿತ್ತು, ಬೆಂಗಳೂರಿಗೆ ಅದೇ ದಿನ ನನ್ನ ಸ್ನೇಹಿತ ಕೂಡ ಪಯಣಿಸುತ್ತಿದ್ದರಿಂದ ಜತೆಗೊಬ್ಬರು ಇರುವಂತಾಯಿತು. ಮಂಗಳೂರಿಗೆ ಬೈಕ್ ಸವಾರಿ ಮಾಡಿ ತಲುಪಿ, ಅಲ್ಲಿಂದ ನಾನು ಮತ್ತು ಗೆಳೆಯ ರೈಲ್ವೇ ಸ್ಟೇಶನ್ ಕಡೆ ಹೊರಟೆವು. ಟ್ರೆನ್ ಹೊರಡಲು ಇನ್ನೂ ಸಮಯ ಇದ್ದುದರಿಂದ ನಾವಿಬ್ಬರು ಜತೆಗೆ ನಮಗಿಷ್ಟವಾದ ಬಿರಿಯಾನಿ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡು ರೈಲು ಹತ್ತಿ ಕುಳಿತೆವು.
Related Articles
Advertisement
ಸಂಜೆ ತನಕ ಅದೇ ಮೂಡ್‌ನಲ್ಲಿ ಇದ್ದ ನನಗೆ ಕೊನೆಯದಾಗಿ ಮೀಟಿಂಗ್ ಮುಗಿಯುವಷ್ಟರಲ್ಲಿ ಕತ್ತಲಾಗುತ್ತ ಬಂದಿತ್ತು. ಹೇಗೋ ಮುಗಿಸಿ ಮತ್ತೇ ಗೆಳೆಯನೊಂದಿಗೆ ಆತನ ರೂಮಿಗೆ ಬಂದಿದ್ದೆ. ಸ್ಪೆಷಲ್ ಡಿನ್ನರ್ ಕೂಡ ಇತ್ತು. ರಾತ್ರಿ 10.30ಗೆ ಮಂಗಳೂರಿಗೆ ಬಸ್ ಇದ್ದುದರಿಂದ ಬಸ್ ಸ್ಟಾಪ್ ವರೆಗೂ ಗೆಳೆಯನೇ ಡ್ರಾಪ್ ಮಾಡಿ ಕಳುಹಿಸಿಕೊಟ್ಟ ಅಷ್ಟೇ…
ಬಸ್ ಹತ್ತಿದ್ದು ನೆನಪಿದೆ ಆಮೇಲೆ ಏನಾಯ್ತು ಗೊತ್ತಿಲ್ಲ, ಬಸ್ ಬಣ್ಣ ಗೊತ್ತಿಲ್ಲ, ಪಕ್ಕದಲ್ಲಿ ಯಾರಿದ್ದರೆಂದೂ ತಿಳಿದಿಲ್ಲ, ಒಂದು ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇನ್ನೊಂದು ನಿದ್ದೆ ನನ್ನ ಆವರಿತ್ತು, ನಿನ್ನೆ ರಾತ್ರಿ ಪಯಣಸಿದ್ದಕ್ಕೋ, ಇಡೀ ದಿನ ಓಡಾಡಿದಕ್ಕೋ ಗೊತ್ತಿಲ್ಲ. ಕಣ್ಣು ಬಿಡಲಾಗದಷ್ಟು ನಿದ್ದೆ, ಬಸ್ ಕಿಟಕಿ ತೆರೆದೇ ಇದ್ದರಿಂದ ಮಧ್ಯ ತಣ್ಣನೆ ಗಾಳಿ ಬೀಸುತ್ತಿತ್ತು. ತಟ್ಟನೆ ಎಚ್ಚರಗೊಂಡು 1ಗಂಟೆ ಅಥವಾ 2 ಗಂಟೆ ಆಗಿರಬಹುದೆಂದು ಮನಸ್ಸಿನಲ್ಲಿಯೇ ಅಂದುಕೊಂಡೆ, ಅಷ್ಟರಲ್ಲಿ ಬಸ್ ಸಹಾಯಕ ಮಂಗಳೂರು ಯಾರಾದರು ಇಳಿಯುವವರಿದ್ದೀರ ಎಂದಾಗ ಅಚ್ಚರಿಯೇ ಆಗಿತ್ತು. ಅರೇ ಇಷ್ಟು ಬೇಗ ಅಂದು ಕೂಡಲೇ ಸಮಯ ನೋಡಿದೆ 5.30ಗೆ ತಲುಪೋ ಬಸ್ ಒಂದು ಗಂಟೆ ಮೊದಲೇ ತಲುಪಿತ್ತು. ಎಚ್ಚರಗೊಂಡ ಒಂದು ನಿಮಿಷದಲ್ಲಿ ಬಸ್ಸಿನಿಂದ ಇಳಿದಿದ್ದೆ, ಏನಾಯ್ತು ಯೋಚಿಸುವುದೋ ಅಲ್ಲ ನನ್ನ ಈ ರೀತಿಯ ನಿದ್ದೆ ಮಂಪರಿಗೆ ನಗುವುದೋ ತಿಳಿಯಲಿಲ್ಲ.
ಹೀಗೆ ನನ್ನ ಬೆಂಗಳೂರು ಪಯಣ ಕೊನೆಗೊಂಡಿತಾದರು, ಈ ಪಯಣದ ನೆನಪು ಮತ್ತೆ ಮತ್ತೆ ಕಾಡುತ್ತಿದೆ. ಈ ನೆನಪುಗಳೇ ಹಾಗೇ ಮರೆತು ಬಿಡುವ ಎಂದರೂ ಮರೆಯಲಾಗುವುದಿಲ್ಲ.
ಸೂರಜ್ ಪಡು
ಮಂಗಳೂರು