Advertisement

ಪ್ರತಿಭಟನೆಯ ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನಿಗಳ ಅಮಾನುಷ ಹಲ್ಲೆ

09:54 AM Sep 09, 2021 | Team Udayavani |

ಕಾಬೂಲ್: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರ ಆಳ್ವಿಕೆ ಆರಂಭವಾಗಿದೆ. ಈ ಬಾರಿ ಉತ್ತಮ ಆಡಳಿತ ನೀಡುತ್ತೇವೆ ಎಂದು ಹೇಳಿಕೊಂಡಿದ್ದ ತಾಲಿಬಾನ್ ತನ್ನ ನಿಜಬಣ್ಣವನ್ನು ಪದೇ ಪದೇ ಬಯಲು ಮಾಡುತ್ತಿದೆ. ಇದೀಗ ಇಬ್ಬರು ಪತ್ರಕರ್ತರಿಗೆ ಹಲ್ಲೆ ನಡೆಸಿದ ಫೋಟೊ ಒಂದು ವೈರಲ್ ಆಗಿದೆ.

Advertisement

ಪಾಕಿಸ್ಥಾನ ಮತ್ತು ಐಎಸ್ಐ ವಿರುದ್ದ ಕಾಬೂಲ್ ನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಪಾಕ್ ಮತ್ತು ಅದರ ಗುಪ್ತಚರ ದಳ ಐಎಸ್ ಐ ಗೆ ಧಿಕ್ಕಾರ ಕೂಗುತ್ತಾ ಕಾಬೂಲ ನ ಬೀದಿಗಳಲ್ಲಿ ರ್ಯಾಲಿ ನಡೆಸಿದ್ದರು. ಈ ಪ್ರತಿಭಟನೆಯನ್ನು ವರದಿ ಮಾಡಿದ ಕಾರಣಕ್ಕೆ ಇಬ್ಬರು ಪತ್ರಕರ್ತರ ಮೇಲೆ ತಾಲಿಬಾನ್ ಹಲ್ಲೆ ಮಾಡಿದೆ.

ಇಬ್ಬರು ಪತ್ರಕರ್ತರನ್ನು ತಾಲಿಬಾನಿ ಗಳು ಥಳಿಸಿದ್ದಾರೆ. ಅವರ ಬೆನ್ನಿನ ಮೇಲೆ ಗಾಯದ ಗುರುತುಗಳನ್ನು ತೋರಿಸಿರುವ ಫೋಟೋ ವೈರಲ್ ಆಗಿದ್ದು ಜನರನ್ನು ಬೆಚ್ಚಿಬೀಳಿಸಿದೆ. ತಾಲಿಬಾನ್ ಆಳ್ವಿಕೆಯಲ್ಲಿ ಭವಿಷ್ಯದಲ್ಲಿ ಏನಾಗಬಹುದು ಎನ್ನುವುದಕ್ಕೆ ಈ ಚಿತ್ರ ಸಾಕ್ಷಿಯಾಗಿದೆ.

ಇದನ್ನೂ ಓದಿ:ಡಾಬಾದಲ್ಲಿ ಊಟ ಮಾಡಿ ಬರುವಾಗ ಭೀಕರ ಅಪಘಾತ: ಬೆಳಗಾವಿಯ ಇಬ್ಬರು ಯುವಕರು ದುರ್ಮರಣ

“ಕಪ್ಪು ಪಟ್ಟಿ’ಯಲ್ಲಿ 14 ಮಂದಿ ಸಚಿವರು!: ಅಫ್ಘಾನಿಸ್ಥಾನದಲ್ಲಿ ಅಸ್ತಿತ್ವಕ್ಕೆ ಬಂದಿರುವ ತಾಲಿಬಾನ್‌ನ ಮಧ್ಯಾಂತರ ಸರಕಾರದಲ್ಲಿರುವ ಕನಿಷ್ಠ 14 ಸದಸ್ಯರು ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ “ಭಯೋತ್ಪಾದಕರ ಪಟ್ಟಿ’ ಯಲ್ಲಿರುವವರು!

Advertisement

ವಿಶೇಷವೆಂದರೆ, ಈ ಕಪ್ಪುಪಟ್ಟಿಯಲ್ಲಿರುವ ಉಗ್ರರ ಪೈಕಿ ಪ್ರಧಾನಿ ಮುಲ್ಲಾ ಮೊಹಮ್ಮದ್‌ ಹಸನ್‌ ಅಖುಂದ್‌, ಇಬ್ಬರು ಉಪಪ್ರಧಾನಿಗಳು ಕೂಡ ಸೇರಿದ್ದಾರೆ. ಆಂತರಿಕ ಸಚಿವನಾಗಿ ಆಯ್ಕೆಯಾಗಿರುವ ಜಾಗತಿಕ ಉಗ್ರ ಸಿರಾಜುದ್ದೀನ್‌ ಹಕ್ಕಾನಿ ತಲೆಗೆ 10 ದಶಲಕ್ಷ ಡಾಲರ್‌ ಬಹುಮಾನವನ್ನೂ ಅಮೆರಿಕ ಘೋಷಿಸಿತ್ತು.

ವಲಸೆ ಸಚಿವ, ರಕ್ಷಣ ಸಚಿವ, ವಿದೇಶಾಂಗ ಸಚಿವ ಕೂಡ ಭಯೋತಾದ್ಪಕರ ಪಟ್ಟಿಯಲ್ಲಿ ಸ್ಥಾನ ಪಡೆದವರು. ಒಟ್ಟಾರೆ 33 ಮಂದಿಯಲ್ಲಿ14 ಮಂದಿ ಕಪ್ಪು ‌ಪಟ್ಟಿಯಲ್ಲಿರುವವರು ಎಂದು ಬಿಬಿಸಿ ಉರ್ದು ವರದಿ ಮಾಡಿದೆ.

ಇದೇ ವೇಳೆ, “ನಮ್ಮ ದೇಶದಲ್ಲಿನ್ನು ಪಿಎಚ್‌ಡಿ, ಸ್ನಾತಕೋತ್ತರ ಪದವಿಗಳಿಗೆ ಬೆಲೆಯಿಲ್ಲ. ಇಲ್ಲಿ ಶರಿಯಾಗೆ ಮಾತ್ರ ಬೆಲೆ’ ಎಂದು ಹೊಸ ಶಿಕ್ಷಣ ಸಚಿವ ಘೋಷಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next