Advertisement

ಪತ್ರಕರ್ತರಿಗೆ ಸಾಮಾಜಿಕ ಭದ್ರತೆ ಬೇಕು

11:42 AM Jul 19, 2017 | |

ಪಿರಿಯಾಪಟ್ಟಣ: ಸಮಾಜದಲ್ಲಿ ಓರೆಕೋರೆಗಳನ್ನು ಬೆಳಕಿಗೆ ತರುವ ಪತ್ರಕರ್ತರಿಗೆ ಸಾಮಾಜಿಕ ಭದ್ರತೆಯೆ ಇಲ್ಲದಂತಾಗಿದೆ. ಈ ಬಗ್ಗೆ ಸರಕಾರಗಳು ಚಿಂತಿಸಬೇಕು ಎಂದು ಪರಿಸರ ಹೋರಾಟಗಾರ ಕೆ.ಎನ್‌.ಸೋಮಶೇಖರ್‌ ಹೇಳಿದರು. ತಾಲೂಕಿನ ಹಳೆಕೆರೆ ಹಾಡಿಯಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಬಾಣಂತಿಯರಿಗೆ ಬ್ಲಾಂಕೆಟ್‌ ವಿತರಣೆ ಮಾಡಿ ಮಾತನಾಡಿ, ಪತ್ರಕರ್ತರ ಕಷ್ಟಸುಖಗಳಿಗೆ ಸ್ಪಂದಿಸುವಂತೆ ಅಗತ್ಯವಾದ ಕ್ಷೇಮಾಭಿವೃದ್ಧಿ ಸಂಘಗಳ ಅವಶ್ಯಕತೆ ಇದೆ ಎಂದರು.

Advertisement

ಅನೇಕ ಗ್ರಾಮೀಣ ಭಾಗದ ಪತ್ರಕರ್ತರಿಗೆ ಸೌಲಭ್ಯಗಳನ್ನು ಒದಗಿಸಲುವಲ್ಲಿ ಸರಕಾರಗಳು ಚಿಂತನೆ ನಡೆಸಬೇಕು ಮತ್ತು ಗಿರಿಜನರ ಸಮಸ್ಯೆಯನ್ನು ಬೆಳಕು ಚೆಲ್ಲುತಿದ್ದ ಪತ್ರಕರ್ತರು ಪತ್ರಿಕಾ ದಿನಾಚಾರಣೆ ಕಾಟಾಚಾರಕ್ಕೆ ಮಾಡದೆ ಹಾಡಿಯಲ್ಲಿ ಸೌಲಭ್ಯ ವಿತರಣೆ ಮಾಡುವ ಮೂಲಕ ಆಚರಣೆ ಮಾಡುತ್ತಿರುವುದು ಉತ್ತಮ ಚಿಂತನೆಯಾಗಿದೆ. ತಾಲೂಕಿನಲ್ಲಿ ಪತ್ರಿಕಾಭವನ ನಿರ್ಮಾಣ ಮಾಡಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಹಿರಿಯ ಪತ್ರಕರ್ತ ಚಂದ್ರಮೋಹನ್‌ ಮಾತನಾಡಿ, ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಸಮಾಜಕ್ಕೆ ಒಳ್ಳೆಯ ಮಾಹಿತಿಗಳನ್ನು ನೀಡುವ ವ್ಯವಸ್ಥೆà ಇರಬೇಕು. ಪೈಪೋಟಿ ಹೆಚ್ಚಾಗಿದ್ದು ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವಲ್ಲಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪ ಎದುರಾಗುತ್ತಿದೆ ಮೊದಲು ಇದು ದೂರಾಗಬೇಕು.  ಗ್ರಾಮೀಣ ಪತ್ರಕರ್ತರಿಗೆ ತರಬೇತಿಯ ಅವಶ್ಯಕತೆ ಹೆಚ್ಚಿದೆ. ಹಾಡಿಗಳ ಸಮಸ್ಯೆಗಳ ಬಗ್ಗೆ ಪ್ರಶಸ್ತಿ ಪಡೆಯುವ ಪತ್ರಕರ್ತರನ್ನು ನಾವು ನೋಡುತ್ತಿದ್ದೇವೆ ಆದರೆ ಅವರಿಗೆ ಸೌಲಭ್ಯ ಒದಗಿಸಿದ ಮನಃಶಾಂತಿ ಪತ್ರಕರ್ತರಿಗೆ ದೊರೆಯಬೇಕಿಗೆ ಎಂದು ತಿಳಿಸಿದರು.

ಹಾಡಿಯ ಮುಖಂಡ ರಾಜೇಶ್‌ ಮಾತನಾಡಿ, ಸಮಾಜದ ಕಟ್ಟಕಡೆಯ ಸ್ಥಿತಿಯಲ್ಲಿ ಇರುವ ಗಿರಿಜನರು ಮುಖ್ಯವಾಹಿನಿಗೆ ಸೇರಬೇಕಾದರೂ ಸಮಾಜದ ಸಂಘಟನೆಗಳ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮ ಸಮಸ್ಯೆಗಳಿಗೆ ದನಿಯಾಗುತ್ತಿದ್ದ ಪತ್ರಕರ್ತರು ದಿನಾಚರಣೆಯನ್ನು ಇಲ್ಲಿ ಮಾಡುವ ಮೂಲಕ ಸೌಲಭ್ಯಗಳನ್ನು ಕೊಡಿಸಿ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದ್ದು ಮುಂದಿನ ದಿನಗಳಲ್ಲಿ ಗಿರಿಜನರೊಂದಿಗೆ ಎಲ್ಲಾ ಸಹಕಾರ ನೀಡುವಂತೆ ಮನವಿ ಮಾಡಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್‌.ಡಿ.ರಮೇಶ್‌ ಮಾತನಾಡಿ, ಗಿರಿಜನರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕಾನೂನಾತ್ಮಕ ಹೋರಾಟಗಳ ಮೂಲಕ ಸಮಸ್ಯೆಗಳ ಬಗೆಹರಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು. ಹಳೆಕೆರೆ ಮತ್ತು ವರ್ತಿ ಗಿರಿಜನ ಹಾಡಿಯ ಬಾಣಂತಿಯರು ಮತ್ತು ಗರ್ಭೀಣಿ ಸ್ತ್ರೀಯರಿಗೆ ಕೆ.ಎನ್‌.ಸೋಮಶೇಖರ್‌ ಉಚಿತ ಬ್ಲಾಕೆಂಟ್‌ ವಿತರಿಸಿದರು. ಚಂದ್ರಮೋಹನ್‌ ಮತ್ತು ಕೆ.ಎನ್‌.ಸೋಮಶೇಖರ್‌ರನ್ನು ಸನ್ಮಾನಿಸಲಾಯಿತು.

Advertisement

ಹಾಡಿಯ ಮುಖಂಡ ಬಸಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಪಿ.ಮಹದೇವ್‌, ನಿಕಟಪೂರ್ವ ಅಧ್ಯಕ್ಷ ಪಿ.ಎಸ್‌.ವೀರೇಶ್‌, ಕಾರ್ಯದರ್ಶಿಗಳಾದ ನವೀನ್‌ಕುಮಾರ್‌, ಆರ್‌.ಎಸ್‌.ಚನ್ನಪ್ಪ, ಪತ್ರಕರ್ತರಾದ ಎನ್‌.ಪಿ.ಹರೀಶ್‌, ಕೆ.ಎಸ್‌.ಪ್ರಕಾಶ್‌, ಶಿವದೇವಾ, ಎಚ್‌.ಕೆ.ಮಹೇಶ್‌, ಮುಕುಂದ, ಜಗದೀಶ್‌, ವಿಜೇತಕುಮಾರ್‌, ಶರತ್‌ಕುಮಾರ್‌, ಅಶೋಕ್‌ಆಲನಹಳ್ಳಿ, ಮಾಗಳಿಶ್ರೀನಿವಾಸ್‌, ಮುಕುಂದ, ಕಾಂತರಾಜು, ಅಂಗನವಾಡಿ ಕಾರ್ಯಕರ್ತೆಯರಾದ ಚಂದ್ರಿಕಾ, ಸುಜಾತಾ, ಮೈನಾವತಿ, ಹಾಡಿ ಮುಖಂಡರಾದ ಅಣ್ಣಯ್ಯ, ಶಿವಣ್ಣ, ಚಂದ್ರು, ಬೇಬಿ, ಮಣಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next