Advertisement

ಬೆಂಗಳೂರು: ಪತ್ರಕರ್ತರು ಕೆಲವೊಂದು ಸ್ವಯಂ-ನಿಯಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವುಗಳ ಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಜಗದೀಶ್‌ ಹೇಳಿದರು.

Advertisement

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಮಾಧ್ಯಮ ಕಂಡರೆ ಯಾರಿಗೆ ಭಯವಿಲ್ಲ? ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸರ್ಕಾರ ಮತ್ತು ಜನರ ನಡುವೆ ಮಾಹಿತಿ ತಲುಪಿಸಲು ಸೇತುವೆಯಾಗಿ ಮಾಧ್ಯಮ ಕೆಲಸ ನಿರ್ವಹಿಸುತ್ತಿದೆ.

ಪತ್ರಕರ್ತರ ವೃತ್ತಿ ಕೆಲಸವನ್ನು ಯಾವುದೇ ರಾಜಕಾರಣಿಗಳು ಅಥವಾ ಅಧಿಕಾರಿಗಳು ಯಾವುದೇ ಮೇಲ್ವಿಚಾರಣೆ ಮಾಡುವುದಿಲ್ಲ. ಆದರೆ ಸ್ವಯಂ ಪ್ರೇರಣೆಯಿಂದ ಪತ್ರಕರ್ತರೇ ಕೆಲ ಇತಿ-ಮಿತಿ ಅರಿತು ಕಾರ್ಯ ನಿರ್ವಹಿಸಿದಾಗ ಮಾತ್ರ ಜನರಿಗೆ ಬೇಕಾದ ಮಾಹಿತಿ ತಲುಪಿಸಲು ಸಾಧ್ಯ ಎಂದರು. ಮಾಧ್ಯಮ ರಂಗದವರು ಇರೋ ವಿಷಯವನ್ನು ಇದ್ದ ಹಾಗೆ ವರದಿ ಮಾಡಿ, ಜನರನ್ನು ಎಚ್ಚರಿಸುವಂತಹ ಕೆಲಸ ಮಾಡಬೇಕು.

ಇದನ್ನೂ ಓದಿ:- ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 10,197 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಕೆ

ಸಾಮಾನ್ಯವಾಗಿ ನೈಜ ಪತ್ರಕರ್ತರನ್ನು ಸರ್ಕಾರದ ರಚನಾತ್ಮಕ ಟೀಕಾಕಾರರು ಎಂದು ಮತ್ತು ಅವರನ್ನು ಪತ್ರಿಪಕ್ಷದ ಸ್ನೇಹಿತರಾಗಿರಬೇಕು. ಆಗ ಮಾತ್ರ ಅಧಿಕಾರಿಗಳು ಅದೆಷ್ಟೋ ಸಮಸ್ಯೆಗಳ ಸುಧಾರಣೆಯಾಗಲು ಸಾಧ್ಯವಾಗುತ್ತದೆ ಎಂದರು. ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಾಧ್ಯಮದ ಅವಶ್ಯಕತೆಯಿದೆ.

Advertisement

ಹಾಗೆಯೇ ನನ್ನ ಸಿನಿಮಾ ಮತ್ತು ಜನರ ಮಧ್ಯೆ ಇದ್ದ ಸೇತುವೆ ಎಂದರೆ ಮಾದ್ಯಮ ಎಂದು ತಿಳಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ., ಅಕಾಡೆಮಿ ಸದಸ್ಯರಾದ ಶಿವಾನಂದ ತಗಡೂರು, ಕೆ.ಕೆ. ಮೂರ್ತಿ, ಶಿವಕುಮಾರ್‌ ಬೆಳ್ಳಿತಟ್ಟೆ, ಕಾರ್ಯದರ್ಶಿ ಸಿ.ರೂಪಾ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next