Advertisement

ಫಿಲಿಪೈನ್ಸ್ ಮತ್ತು ರಷ್ಯಾ ಪತ್ರಕರ್ತರಿಬ್ಬರಿಗೆ ನೊಬೆಲ್ ಶಾಂತಿ ಪ್ರಶಸ್ತಿ

04:10 PM Oct 08, 2021 | Team Udayavani |

ಓಸ್ಲೋ: 2021 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಫಿಲಿಪೈನ್ಸ್ ನ ಪತ್ರಕರ್ತೆ ಮಾರಿಯಾ ರೆಸ್ಸಾ ಮತ್ತು ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೋವ್ ಅವರಿಗೆ ನೀಡುವುದಾಗಿ ನೊಬೆಲ್ ಸಮಿತಿ ಶುಕ್ರವಾರ ಘೋಷಿಸಿದೆ . ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಕ್ಕಾಗಿ ಪಾರಿತೋಷಕವನ್ನು ಇಬ್ಬರಿಗೆ ನೀಡಲಾಗುತ್ತಿದೆ ಎಂದು ನೊಬೆಲ್ ಸಮಿತಿ ತಿಳಿಸಿದೆ.

Advertisement

ನಾರ್ವೇಜಿಯನ್ ನೊಬೆಲ್ ಸಮಿತಿ ಅಧ್ಯಕ್ಷರಾಗಿರುವ ಬೆರಿಟ್ ರೇಯ್ಸ್ ಆಯಾಂಡರ್ಸನ್ ಅವರು ಪ್ರಶಸ್ತಿ ಪ್ರಕಟಿಸಿದ್ದಾರೆ.

ಸ್ವತಂತ್ರ ಮತ್ತು ಸತ್ಯಾಧಾರಿತ ಪತ್ರಿಕೋದ್ಯಮ ಅಧಿಕಾರದ ದುರುಪಯೋಗ, ಸುಳ್ಳುಗಳು ಮತ್ತು ಯುದ್ಧ ಪ್ರಚಾರದ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಬೆರಿಟ್ ರೇಯ್ಸ್ ಹೇಳಿದರು.

ನಕಲಿ ಸುದ್ದಿಗಳು ಹರಡಲು, ವಿರೋಧಿಗಳಿಗೆ ಕಿರುಕುಳ ನೀಡಲು ಮತ್ತು ಸಾರ್ವಜನಿಕ ಭಾಷಣವನ್ನು ಕುಶಲತೆಯಿಂದ ನಿರ್ವಹಿಸಲು ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸಲಾಗುತ್ತಿದೆ ಎನ್ನುವ ಕುರಿತು ನೊಬೆಲ್ ವಿಜೇತರಿಬ್ಬರು ದಾಖಲೀಕರಣ ಮಾಡಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next