Advertisement

ರೇಪ್‌: ತೆಹೆಲ್ಕಾ ಪತ್ರಕರ್ತ ವಿರುದ್ಧ ಆರೋಪ ನಿಗದಿ

07:10 AM Sep 29, 2017 | |

ಪಣಜಿ: ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದ ಮಾಪುಸಾ ಜಿಲ್ಲಾ ಕೋರ್ಟ್‌ ತೆಹೆಲ್ಕಾ ಮ್ಯಾಗಜಿನ್‌ನ ಸ್ಥಾಪಕ, ಪತ್ರಕರ್ತ ತರುಣ್‌ ತೇಜ್‌ಪಾಲ್‌ ವಿರುದ್ಧ ಆರೋಪಪಟ್ಟಿ ನಿಗದಿ ಮಾಡಿದೆ.

Advertisement

ತೆಹೆಲ್ಕಾದ ಮಾಜಿ ಸಂಪಾದಕನ ವಿರುದ್ಧ ಲೈಂಗಿಕ ಕಿರುಕುಳ, ಉನ್ನತ ಹುದ್ದೆಯಲ್ಲಿದ್ದುಕೊಂಡು ಮಹಿಳೆಯ ಮೇಲೆ ನಿಯಂತ್ರಣ ಸಾಧಿಸಿದ್ದು ಸೇರಿ ಹಲವು ಗುರುತರ ಆರೋಪಗಳನ್ನು ಹೊರಿಸಲಾಗಿದೆ. ಆದರೆ ತರುಣ್‌ ತೇಜ್‌ಪಾಲ್‌ ತಾನು ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ ಎಂದು ಕೋರ್ಟ್‌ಗೆ ಅರಿಕೆ ಮಾಡಿಕೊಂಡಿದ್ದಾರೆ.

ಉನ್ನತ ಹುದ್ದೆಯಲ್ಲಿದ್ದುಕೊಂಡು ಅದನ್ನು ದುರುಪಯೋಗಪಡಿಸಿ ಅತ್ಯಾಚಾರವೆ ಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಗೋವಾದಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಜಿಲ್ಲಾ ಕೋರ್ಟ್‌ ನ್ಯಾಯಾಧೀಶ ವಿಜಯ ಪೋಲ್‌ ಮುಂದಿನ ವಿಚಾರಣೆಯನ್ನು ನ.21ಕ್ಕೆ ಮುಂದೂಡಿದ್ದಾರೆ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಫ್ರಾನ್ಸಿಸ್ಕೋ ತವೋರಾ ಹೇಳಿದ್ದಾರೆ. ಒಂದು ವೇಳೆ ತೇಜ್‌ಪಾಲ್‌ ವಿರುದ್ಧದ ಆರೋಪ ಸಾಬೀತಾದರೆ ಕನಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆರೋಪ ನಿಗದಿ ಮಾಡುವ ಪ್ರಕ್ರಿಯೆಗೆ ಅನುಮತಿ ನೀಡಿದ ನ್ಯಾಯಾಧೀಶರು, ಹಿಂದಿನ ವಿಚಾರಣೆ ವೇಳೆಯೇ ಆರೋಪಪಟ್ಟಿ ಆಪಾದಿತರ ಮೇಲೆ ಹೊರಿಸಲಾಗಿದೆ. 

ಗುರುವಾರ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಅದನ್ನು ವಿವರಿಸಲಾಗುತ್ತದೆ ಎಂದರು. ಇನ್ನು ಬಾಂಬೆ ಹೈಕೋರ್ಟ್‌ ಕೂಡ ಪ್ರಕರಣದ ವಿಚಾರಣೆಯನ್ನು ನ.1ಕ್ಕೆ ಮುಂದೂಡಿದೆ ಎಂದರು ನ್ಯಾಯಾಧೀಶ ರಾಜೀವ್‌ ಗೋಮ್ಸ್‌. 2013ರಲ್ಲಿ ಗೋವಾದ ಪಂಚತಾರಾ ಹೊಟೇಲ್‌ ಒಂದರ ಎಲಿವೇಟರ್‌ನಲ್ಲಿ ಸಹೋದ್ಯೋಗಿ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದರು ಎಂದು ಕೇಸು ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next