Advertisement

ಪತ್ರಕರ್ತೆ ಸೀತಾಲಕ್ಷ್ಮಿ ಕರ್ಕಿಕೋಡಿ ನಿಧನ

07:10 AM May 13, 2020 | Lakshmi GovindaRaj |

ಮಂಗಳೂರು: ಪತ್ರಕರ್ತೆ ಸೀತಾಲಕ್ಷ್ಮಿ ಕರ್ಕಿಕೋಡಿ (44) ಅವರು ಅನಾರೋಗ್ಯದಿಂದ ಮೇ 12 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸೀತಾಲಕ್ಷ್ಮಿ ಅವರು ಅಡ್ಯನಡ್ಕ ಬಳಿಯ ಕೇಪು ಕಲ್ಲಂ ಗಳ ದವರು. ಅಡ್ಯ ನಡ್ಕದಲ್ಲಿ ಆರಂಭಿಕ ಶಿಕ್ಷಣ ಹಾಗೂ ಬಳಿಕ ಪುತ್ತೂರು ವಿವೇ ಕಾನಂದ ಕಾಲೇಜಿ ನಲ್ಲಿ ಪದವಿ ಶಿಕ್ಷಣ, ಕನ್ನಡದಲ್ಲಿ ಎಂ. ಎ. ಹಾಗೂ ಬಳಿಕ ಡಾಕ್ಟರೇಟ್‌ ಪದವಿ ಪಡೆದಿದ್ದರು. ಹಿರಿಯ ಸಾಹಿತಿ ವಿ.ಗ. ನಾಯಕ ಅವರ ಪುತ್ರಿ ಯಾಗಿದ್ದ  ಅವರು ಹಲವು ವರ್ಷಗಳಿಂದ ತಂದೆ, ತಾಯಿ ಜತೆ ಮಂಗಳೂರಿನ ಕೊಟ್ಟಾರ ಚೌಕಿಯ ಬಳಿ ವಾಸವಾಗಿ ದ್ದರು.

Advertisement

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉಪ ಸಂಪಾದಕಿಯಾಗಿ ಕೆಲಸ ಮಾಡು ತ್ತಿದ್ದರು. ಅವರ ಕುಟುಂಬ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರ್ಕಿಕೋಡಿ ಆಗಿದ್ದು, ತಂದೆ ಶಿಕ್ಷಕ ವೃತ್ತಿ ಸೇರಿದ ಬಳಿಕ ದಕ್ಷಿಣ ಕನ್ನಡದ ಅಡ್ಯನಡ್ಕಕ್ಕೆ ಬಂದು ನೆಲೆಸಿತ್ತು. ಪ್ರತಿಭಾನ್ವಿತೆಯಾಗಿದ್ದ ಸೀತಾ, ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯ  ಯನ ಮಾಡಿದ್ದರು. ಖ್ಯಾತ  ರಂಗಕರ್ಮಿ ಸದಾನಂದ ಸುವರ್ಣ ಅವರ ಸಾಧನೆ ಬಗೆಗಿನ ಸಂಶೋಧನಾ ಗ್ರಂಥ ಹಾಗೂ ಕಾಂತಾವರ ಕನ್ನಡ ಸಂಘದ “ನಾಡಿಗೆ ನಮಸ್ಕಾರ’ ಸಾಧಕರ ಬಗೆಗಿನ ವ್ಯಕ್ತಿ ಚಿತ್ರಕ್ಕೆ ಹಲವು ಪುಸ್ತಕಗಳನ್ನು ರಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next