Advertisement

ಮಾನನಷ್ಟ ಮೊಕದ್ದಮೆ ಪ್ರಕರಣ : ಪತ್ರಕರ್ತೆ ಪ್ರಿಯಾ ಖುಲಾಸೆ..!

06:52 PM Feb 17, 2021 | Team Udayavani |

ನವ ದೆಹಲಿ :  ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರು ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಪತ್ರಕರ್ತೆ ಪ್ರಿಯಾ ರಮಣಿಯನ್ನು ಖುಲಾಸೆಗೊಳಿಸಿದೆ.

Advertisement

ರಮಣಿ ವಿರುದ್ಧ ಯಾವುದೇ ಮಾನಹಾನಿ ದೂರು ಸಾಬೀತಾಗಿಲ್ಲ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಹೇಳಿದರು.

ಓದಿ : ಮಗುವನ್ನು ದತ್ತು ನೀಡಲು ನಿರಾಕರಿಸಿದ ಪತ್ನಿಗೆ ಕಿರುಕುಳ: ಪತಿ ಸೇರಿ 6 ಮಂದಿಯ ವಿರುದ್ಧ FIR

“ದಶಕಗಳ ನಂತರವೂ ತನ್ನ ಸಮಸ್ಯೆಯನ್ನು ತಿಳಿಸುವ ಹಕ್ಕು ಮಹಿಳೆಗೆ ಇದೆ”  “ಮಾನಹಾನಿಯ ದೂರಿನ ನೆಪದಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಮಹಿಳೆಯರಿಗೆ ಶಿಕ್ಷೆಯಾಗಲು ಸಾಧ್ಯವಿಲ್ಲ. ಮಹಿಳೆಗೆ ತನಗಾದ ಸಮಸ್ಯೆಯನ್ನು ತನ್ನ ಆಯ್ಕೆಯ ಯಾವುದೇ ವೇದಿಕೆಯಲ್ಲಿ ಮತ್ತು ದಶಕಗಳ ನಂತರವೂ ದಾಖಲಿಸುವ ಹಕ್ಕಿದೆ.” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಿಯಾ ರಮಣಿ ಅವರು 2017 ರಲ್ಲಿ ಬರೆದ ಲೇಖನವೊಂದರಲ್ಲಿ ಮತ್ತು 2018 ರಲ್ಲಿ ಟ್ವೀಟ್‌ ಮಾಡಿದ ಪೋಸ್ಟ್ ನಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊರಿಸುವುದರ ಮೂಲಕ ತಮ್ಮ “ಖ್ಯಾತಿಗೆ” ಹಾನಿ ಮಾಡಿದ್ದಾರೆ ಎಂದು ಎಂ.ಜೆ.ಅಕ್ಬರ್ ತಮ್ಮ ಮಾನಹಾನಿ ಮೊಕದ್ದಮೆಯಲ್ಲಿ ಹೇಳಿಕೊಂಡಿದ್ದರು.

Advertisement

ರಮಣಿ, ಅಕ್ಬರ್‌ಗೆ ಪ್ರತಿರೋಧ ನೀಡುವುದರ ಮೂಲಕ, “ಸತ್ಯ ನನ್ನ ರಕ್ಷಣೆ” ಎಂದು ಹೇಳಿದರು. ಕೆಲಸದ ಸ್ಥಳದಲ್ಲಿ ಆದ ಲೈಂಗಿಕ ಕಿರುಕುಳದ ವಿರುದ್ಧ ಮಾತನಾಡಿದ ಎಲ್ಲ ಮಹಿಳೆಯರ ಪರವಾಗಿ ನನ್ನ ಸಮರ್ಥನೆ ಇದೆ  ಎಂದು ಹೇಳಿದರು.

ಓದಿ : ವಾಟ್ಸ್ಯಾಪ್ ನಲ್ಲಿ ಅತಿ ಶೀಘ್ರದಲ್ಲಿ ಬರಲಿದೆ “ಲಾಗ್ ಔಟ್” ಆಪ್ಶನ್..!

ನಿಮ್ಮ ಸತ್ಯವನ್ನು ನ್ಯಾಯಾಲಯದ ಮುಂದೆ ಮೌಲ್ಯೀಕರಿಸುವುದು ಬಹಳ ಸಂತೋಷವಾಗುತ್ತದೆ ಎಂದು ತನ್ನ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಅಕ್ಬರ್ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಅವರ ತೀರ್ಪಿನ ಬಗ್ಗೆ ರಮಣಿ ಪ್ರತಿಕ್ರಿಯಿಸಿದರು.

ತೀರ್ಪಿನ ಬಗ್ಗೆ ನಾನು ನ್ಯಾಯಾಲಯಕ್ಕೆ ಧನ್ಯವಾದ ಹೇಳುತ್ತೇನೆ ಮತ್ತು ನನ್ನ ವಕೀಲ ರೆಬೆಕಾ ಜಾನ್ ಅವರಿಗೆ ಮತ್ತು ನನ್ನ ಮೇಲೆ ಅಪಾರ ನಂಬಿಕೆ ಇಟ್ಟ ನನ್ನ ಅದ್ಭುತ ತಂಡಕ್ಕೆ  ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು  ಪ್ರಿಯಾ ರಮಣಿ ಹೇಳಿದ್ದಾರೆ.

2018ರಲ್ಲಿ  #MeToo ಆಂದೋಲನದಲ್ಲಿ ರಮಣಿ, ಅಕ್ಬರ್ ವಿರುದ್ಧ ಲೈಂಗಿಕ ದುರುಪಯೋಗದ ಆರೋಪವನ್ನು ಹೊರಿಸಿದ್ದರು. ಅಕ್ಬರ್ ಅವರು, ದಶಕಗಳ ಹಿಂದೆ ಲೈಂಗಿಕ ದುರುಪಯೋಗವಾಗಿದೆ ಎಂದು ಆರೋಪ ಹೊರಿಸಿದ್ದ ರಮಣಿ ವಿರುದ್ಧ ಅಕ್ಟೋಬರ್ 15, 2018 ರಂದು ದೂರು ದಾಖಲಿಸಿದ್ದರು.

ಓದಿ : ಒಂದು ವೇಳೆ ರಾಹುಲ್ ದಲಿತ ಯುವತಿಯನ್ನು ವಿವಾಹವಾದ್ರೆ…ಸಚಿವ ಅಠಾವಳೆ ಆಫರ್!

 

 

Advertisement

Udayavani is now on Telegram. Click here to join our channel and stay updated with the latest news.

Next