Advertisement
ಪ್ರಚಲಿತ ಸನ್ನಿವೇಶದಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಮರ್ಥ್ಯವನ್ನು ಅರಿತುಕೊಂಡು ಅವಕಾಶಗಳ ಕಡೆಗೆ ಮುನ್ನುಗ್ಗಬೇಕು. ಉತ್ತಮ ಪತ್ರಕರ್ತರೆನಿಸಿಕೊಳ್ಳಬೇಕಾದರೆ ಕೆಲಸದಲ್ಲಿ ದೃಢವಿಶ್ವಾಸ, ಓದುವ ಅಭ್ಯಾಸ, ಭಾಷೆಯಲ್ಲಿ ಹಿಡಿತ, ಸಂವಹನ ಕಲೆ, ನಿಷ್ಪಕ್ಷಪಾತ ಧೋರಣೆ, ತಾಳ್ಮೆ ಮುಂತಾದವುಗಳು ಇರಲೇಕು. ಮಾಧ್ಯಮಗಳಲ್ಲಿ ಕರ್ತವ್ಯ ನಿರ್ವಹಿಸುವವರು ಮಾಹಿತಿಗಳನ್ನು ಸರಿಯಾಗಿ ವಿಶ್ಲೇಷಿಸುವುದು ಬಹಳ ಅಗತ್ಯವಾಗಿದೆ ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ| ದಿನಕರ ರಾವ್ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ಪ್ರಚಲಿತ ಸನ್ನಿವೇಶಗಳ ಕುರಿತು ಸಾಕಷ್ಟು ಜ್ಞಾನವನ್ನು ಹೊಂದಿರಬೇಕು. ಪತ್ರಕರ್ತರಾದವರು ಮಾಹಿತಿ ಸಂಗ್ರಹ, ಸಂಗ್ರಹಿಸಿದ ಮಾಹಿತಿಯ ವಿಶ್ಲೇಷಣೆ, ವರದಿ ತಯಾರಿ ಮುಂತಾದವುಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೊ ನೊರೊನ್ಹ ಮಾತನಾಡಿ, ಪತ್ರಿಕೋದ್ಯಮವು ಒಂದು ವಿಶೇಷ ಸ್ಥಾನಮಾನವುಳ್ಳ ಕ್ಷೇತ್ರವಾಗಿದೆ. ಕಾಲೇಜಿನಲ್ಲಿ ರಾಷ್ಟ್ರೀಯ, ವಿಶ್ವವಿದ್ಯಾನಿಲಯ ಮಟ್ಟದ ನಾನಾ ರೀತಿಯ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತದೆ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಕುರಿತು ವರದಿಯನ್ನು ತಯಾರಿಸಿ, ಇತರರಿಗೆ ತಲುಪಿಸುವಂತಹ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಹೇಳಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ತಾರಾ ಸ್ವಾಗತಿಸಿ, ಫಾತಿಮತ್ ನಿಶಾನ ವಂದಿಸಿದರು. ಫಾತಿಮತ್ ಶೈಮಾ ಅಫ್ರಿನ್ ಕಾರ್ಯಕ್ರಮ ನಿರ್ವಹಿಸಿದರು.