Advertisement

ನೀನು ಜೊತೆಗಿದ್ದರೆ ಜಗತ್ತನ್ನೇ ಗೆಲ್ಲುವೆ!  

03:45 AM Mar 07, 2017 | Team Udayavani |

ಕಾಲಕ್ರಮೇಣ ಕಲ್ಲುಗಳು ಸಹಾ ಕರಗುತ್ತವೆ, ಆದರೆ ನನ್ನ ಪ್ರೀತಿ ಮಾತ್ರ ಕರಗಲಿಲ್ಲವಲ್ಲ ಎಂಬ ಸಣ್ಣ ಆತಂಕ ನನಗೆ… ಕ್ಷುಲ್ಲಕ ಕಾರಣಕ್ಕಾಗಿ ನನ್ನೊಂದಿಗೆ ಮಾತನಾಡುವುದನ್ನು ಬಿಟ್ಟು ಇಂದಿಗೆ ಎರಡು ವರ್ಷ ಕಳೆದರೂ ನನ್ನ ಜ್ಞಾಪಕ ನಿನಗೆ ಬಾರದೇ ಹೋಯಿತಲ್ಲ ಎಂಬ ಸಣ್ಣ ನೋವು ನನಗೆ. ದಿನವಿಡೀ ನಿನ್ನನ್ನು ನೆನೆಯುತ್ತಾ ಬದುಕುತ್ತಿದ್ದೇನೆ. ನಿನ್ನ ಬಳಿ ಮಾತನಾಡಿ ಎರಡು ವರ್ಷ ಕಳೆದರೂ ನಿನ್ನನ್ನು ಮರೆಯಲು ಸಾಧ್ಯವಾಗುತ್ತಿಲ್ಲ.

Advertisement

ಏಕೋ ತಿಳಿಯದು ಮನಸ್ಸು ನೀನೇ ಬೇಕೆಂದು ಪರಿತಪಿಸುತ್ತಿದೆ. ನಾನು ಎಷ್ಟೇ ಬಾರಿ ಮಾತನಾಡಲು ಪ್ರಯತ್ನಿಸಿದರೂ ಕೊನೆಗೆ ನನಗೆ ಮಾತನಾಡಲು ಅವಕಾಶ ನೀಡಲೇ ಇಲ್ಲ ನೀನು. ತಪ್ಪು ಮಾಡುವುದು ಮಾನವನ ಸಹಜ ಗುಣ ಕಣೆ. ಸಾಧ್ಯವಾದರೆ ನನ್ನನ್ನು ಕ್ಷಮಿಸು. ಒಂದೇ ಮಾತಿನಲ್ಲಿ ಹೇಳುವುದಾದರೆ… ನೀನು ನನ್ನ ಆತ್ಮವಿಶ್ವಾಸ. ನೀನು ನನ್ನ ಕನಸು. ನೀನು ನನ್ನೊಂದಿಗಿದ್ದರೆ ಪ್ರಪಂಚವನ್ನೇ ಗೆಲ್ಲುತ್ತೇನೆಂಬ ಭರವಸೆ ನನ್ನದು. ದಯಮಾಡಿ ನನಗೊಂದು ಅವಕಾಶ ಕೊಡು. ಕಣ್ಣೀರಿಡುತ್ತಾ ಈ ಸಂದೇಶ ಕಳುಹಿಸುತ್ತಿದ್ದೇನೆ. ನನಗೆ ನಿರಾಸೆ ಮಾಡದಿರು…

– ಮೂರ್ತಿ ಎನ್‌., ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next