Advertisement

ಎರಡು ಪಂದ್ಯ ಸೋತ ಆಸೀಸ್ ಗೆ ಮತ್ತೊಂದು ಆಘಾತ; ಗಾಯಗೊಂಡು ಕೂಟದಿಂದಲೇ ಹೊರಬಿದ್ದ ವೇಗಿ

03:16 PM Feb 20, 2023 | Team Udayavani |

ಮುಂಬೈ: ಬಾರ್ಡರ್ – ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯ ಸೋತ ಆಸ್ಟ್ರೇಲಿಯಾಗೆ ಇದೀಗ ಗಾಯಾಳುಗಳ ಸಂಕಷ್ಟ ಆರಂಭವಾಗಿದೆ. ಗಾಯಗೊಂಡಿರುವ ವೇಗಿ ಜೋಶ್ ಹೇಜಲ್ ವುಡ್ ಅವರು ಸರಣಿಯ ಮುಂದಿನ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

Advertisement

ನಾಗ್ಪುರ ಮತ್ತು ದೆಹಲಿ ಟೆಸ್ಟ್‌ ಗಳನ್ನು ಕಳೆದುಕೊಂಡಿರುವ ಹ್ಯಾಜಲ್‌ ವುಡ್ ಈಗ ಸಿಡ್ನಿಯಲ್ಲಿ ತಮ್ಮ ರಿಹ್ಯಾಬಿಟೇಶನ್ ಮಾಡಲಿಲಿದ್ದಾರೆ ಎಂದು ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಖಚಿತಪಡಿಸಿದ್ದಾರೆ.

ಮೆಕ್‌ಡೊನಾಲ್ಡ್ ಅವರು ಸರಣಿಯ ಉಳಿದ ಭಾಗಕ್ಕೆ ಹ್ಯಾಜಲ್‌ವುಡ್‌ನ ಅಲಭ್ಯತೆ ಬಗ್ಗೆ ದೃಢಪಡಿಸಿದರು. ಆದರೆ ಡೇವಿಡ್ ವಾರ್ನರ್ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ದಿಲ್ಲಿ ಟೆಸ್ಟ್‌ ನ ಮೊದಲ ಇನ್ನಿಂಗ್ಸ್ ನಲ್ಲಿ ಮೊಣಕೈಗೆ ಹೊಡೆತ ತಿಂದ ವಾರ್ನರ್ ನಂತರ ಪಂದ್ಯದಲ್ಲಿ ಆಡಿರಲಿಲ್ಲ.

ಇದನ್ನೂ ಓದಿ:ಶೀಘ್ರ ದರ್ಶನ್ ನಟನೆಯ ”ಕ್ರಾಂತಿ” ಸ್ಟ್ರೀಮ್ ಮಾಡಲಿರುವ ಪ್ರೈಮ್ ವಿಡಿಯೋ

ನಾಗ್ಪುರ ಮತ್ತು ಹೊಸದಿಲ್ಲಿಯಲ್ಲಿ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಎರಡೂ ಪಂದ್ಯಗಳು ಮೂರೇ ದಿನದಲ್ಲಿ ಅಂತ್ಯಕಂಡಿದೆ. ಮೂರನೇ ಟೆಸ್ಟ್ ಪಂದ್ಯವು ಮಾರ್ಚ್ 1ರಿಂದ ಇಂಧೋರ್ ನಲ್ಲಿ ಆರಂಭವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next