Advertisement
ಅವು ತೊಂಭತ್ತರ ದಶಕದ ಕೊನೆಯ ದಿನಗಳು. ಇಂಟರ್‌ನೆಟ್ ಪ್ರಚ್ಛನ್ನ ಶಕ್ತಿ ಪಡೆದು ನಾಗಾಲೋಟ ಪ್ರಾರಂಭಿಸಿತ್ತು. ನಗರಗಳಲ್ಲಿ ಪಿಯುಸಿ, ಪದವಿ ವಿದ್ಯಾಭ್ಯಾಸ ಮಾಡಿ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುತ್ತಿದ್ದ ಯುವಕ -ಯುವತಿಯರೆಲ್ಲ ಬಿಪಿಓ (Business Process Outsourcing) ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಹಾತೊರೆಯುತ್ತಿದ್ದರು.
Related Articles
Advertisement
ಏನಿದು ಕೆ.ಪಿ.ಓ?ಕೆ.ಪಿ.ಓ ಎಂದರೆ ನಾಲೆಡ್ಜ್ ಪ್ರೊಸೆಸ್ ಔಟ್‌ಸೋರ್ಸಿಂಗ್ (Knowledge Process Outsourcing) ಎಂದರ್ಥ. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ, ನಿಮಗಿರುವ ಉನ್ನತ ಜ್ಞಾನ ಮತ್ತು ಕೌಶಲ್ಯವನ್ನು ಉದ್ಯಮ ಕಂಪನಿಗಳ ಏಳಿಗೆಗೆ ತ್ವರಿತವಾಗಿ ಬಳಸಿ, ಅವರ ವ್ಯಾಪಾರ-ಲಾಭಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿ, ಉನ್ನತೀಕರಿಸಿ ಲಾಭ ತಂದುಕೊಡುವ ಕೆಲಸವನ್ನು ಸ್ಥೂಲವಾಗಿ ಕೆ.ಪಿ.ಓಎನ್ನುತ್ತೇವೆ. ಈ ಕ್ಷೇತ್ರದಲ್ಲಿ ಕೆಲಸಮಾಡಲು ಅಪಾರ ವಿಷಯ ಜ್ಞಾನ, ಕ್ರಿಟಿಕಲ್ ಥಿಂಕಿಂಗ್, ಮಾಹಿತಿ ಸಂಗ್ರಹಣಾ ಕೌಶಲ್ಯ, ವೈಜ್ಞಾನಿಕ ಮತ್ತು ವೇಗದ ಚಿಂತನೆ, ಉತ್ಕೃಷ್ಟ ಬರಹ ಕೌಶಲ್ಯ, ಮಾಹಿತಿ ವಿಶ್ಲೇಷಣೆ ಮತ್ತು ಶುದ್ಧವಾದ ಪ್ರಸೆಂಟೇಶನ್ ನೀಡುವ ಸಾಮರ್ಥ್ಯವಿರಬೇಕು. ತಾವು ಕಲಿತಿರುವುದನ್ನು ಇತರರಿಗೆ ಕಲಿಸುವುದನ್ನೂ ತಿಳಿದಿರಬೇಕು. ಬಿಪಿಓ ಗಳಲ್ಲಿ ಕೇವಲ ವ್ಯವಹಾರಕ್ಕೆ ಸಂಬಂಧಿಸಿದ ಮಾತು ನಡೆಯುತ್ತಿತ್ತು. ಆದರೆ, ಕೆಪಿಓನಲ್ಲಿ ಹಾಗಲ್ಲ. ಈ ಕ್ಷೇತ್ರದಲ್ಲಿ ಕೆಲಸಗಳು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ಕಾನೂನಿನಂತಹ ಸಂಕೀರ್ಣ ವಿಷಯಗಳನ್ನೊಳಗೊಂಡಿರುತ್ತವೆ. ಉನ್ನತ ಮಟ್ಟದ ತಿಳುವಳಿಕೆ ಮತ್ತು ಕೌಶಲ್ಯದ ತಳಹದಿಯ ಮೇಲೆ ನಡೆಯುತ್ತವೆ. ಯಾವಯಾವ ಕೆಲಸ?
ಹಣಕಾಸು ವ್ಯವಹಾರ, ಸಂಶೋಧನೆ ಮತ್ತು ಅಭಿವೃದ್ಧಿ, ಹಣ ಹೂಡುವಿಕೆ, ಮಾಹಿತಿ ವಿಶ್ಲೇಷಣೆ, ಕಾನೂನ ಸೇವೆ, ಆರೋಗ್ಯ, ಮುಂದುವರೆದ ವೆಬ್ ಅಪ್ಲಿಕೇಶನ್ಸ್, ಮೆಡಿಕಲ್ ಟ್ರಾನ್ಸಿಕ್ರಿಪ್‌ಶನ್, ರೈಟಿಂಗ್ ಅಂಡ್ ಕಂಟೆಂಟ್ ಡೆವಲಪ್‌ಮೆಂಟ್, ಫಾರ್ಮಾಸ್ಯುಟಿಕಲ್ಸ್, ಬಯೋಟಿಕ್ನಾಲಜಿ, ಕನ್ಸಲ್ಟೆನ್ಸಿ ಅಂಡ್ ಟ್ರೈನಿಂಗ್, ಡಿಸೈನ್, ನೆಟವರ್ಕ್ ಮ್ಯಾನೇಜ್‌ಮೆಂಟ್, ಬ್ಯುಸಿನೆಸ್ ಎಸ್ಟಾಬ್ಲಿಷ್‌ಮೆಂಟ್, ಸಾಗರೋತ್ತರ ಒಪ್ಪಂದ, ಎಂಪ್ಲಾಯ್ ಸ್ಕಿಲ್ ಎಕ್ಸ್‌ಚೇಂಜ್ ಕ್ಷೇತ್ರಗಳು ಕೆಪಿಓ ವ್ಯಾಪ್ತಿಗೆ ಬರುತ್ತವೆ. ಆಯಾ ವಿಷಯಕ್ಕೆ ಸಂಬಂಧಿಸಿದ ಉನ್ನತ ಜ್ಞಾನ ಹೊಂದಿರುವ ಎಲ್ಲರಿಗೂ ಆ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಬಳ ತರುವ ಕೆಲಸಗಳಿವೆ. ಸಂಬಳ ಎಷ್ಟಿರುತ್ತದೆ ಎಂದರೆ, ಉದಾಹರಣೆಗೆ ಜ್ಞಾನ ಮತ್ತು ಕೌಶಲ್ಯ ಹೊಂದಿದ ಕೆಲಸಗಾರನಿಗೆ ಅಮೆರಿಕದಲ್ಲಿ ಗಂಟೆಗೆ 500 ಡಾಲರ್ ಸಂಬಳ ನೀಡಿದರೆ ನಮ್ಮಲ್ಲಿ 100 ಡಾಲರ್ ಸಿಗುತ್ತದೆ. ಇಂಜಿನಿಯರಿಂಗ್, ಮೆಡಿಕಲ್, ಪ್ಯಾರಾಮೆಡಿಕಲ್, ಆರ್ಕಿಟೆಕ್ಚರ್, ಗಣಿತ, ವಿಜ್ಞಾನ, ಜೀವಶಾಸ್ತ್ರ, ಭೌತಶಾಸ್ತ್ರ, ಕಾನೂನು, ಮ್ಯಾನೇಜ್‌ಮೆಂಟ್, ಪ್ಲಾನಿಂಗ್, ಬ್ಯಾಂಕಿಂಗ್, ವಾಣಿಜ್ಯ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿದವರಿಗೆ ಕೆಪಿಓಗಳಲ್ಲಿ ಆದ್ಯತೆ ನೀಡಲಾಗುತ್ತದೆ. ರಾಕೆಟ್ ವೇಗದಲ್ಲಿ ಬೆಳೆಯುತ್ತಿರುವ ದೈನಂದಿನ ಅಗತ್ಯಗಳನ್ನು ಸರಿಯಾದ ಸಮಯದಲ್ಲಿ ಪೂರೈಸಲು ಉದ್ಯಮ -ಸರ್ಕಾರಗಳು ಹರಸಾಹಸ ಮಾಡುತ್ತಿವೆ. ಅವರ ಕೆಲಸಗಳಿಗೆ ಕೈಜೋಡಿಸಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಕಡಿಮೆ ಸಮಯ ಮತ್ತು ಖರ್ಚಿನಲ್ಲಿ ಹೆಚ್ಚಿನ ಉತ್ಪಾದನೆ ಮಾಡುವಂತೆ ಉದ್ಯಮಗಳಿಗೆ ಯೋಜನೆ ಒದಗಿಸುವಲ್ಲಿ ಕೆಪಿಓಗಳು ಪ್ರಮುಖ ಪಾತ್ರ ವಹಿಸುತ್ತವೆ. ಲ್ಯಾಟಿನ್ ಅಮೆರಿಕಾ, ಆಸ್ಟ್ರೇಲಿಯಾ, ಸಿಂಗಾಪೂರ್, ಯುರೋಪ್, ಕೆನಾಡಾ, ಜಪಾನ್‌ಗಳ ಕೆಪಿಓಗಳಿಗೆ ಅಪಾರ ಸಂಖ್ಯೆಯ ಬುದ್ಧಿವಂತರ ಅವಶ್ಯಕತೆ ಇದೆ. ಅಂಕಿ-ಅಂಶದ ಪ್ರಕಾರ ವಿಶ್ವದಲ್ಲಿ ಕೆಪಿಓ ಉದ್ಯಮದ ವಾರ್ಷಿಕ ವಹಿವಾಟು 2025 ರ ವೇಳೆಗೆ 100 ಬಿಲಿಯನ್ ಡಾಲರ್‌ನಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. 2015 ರಲ್ಲಿ ಭಾರತದ ಕೆಪಿಓ ಮಾರುಕಟ್ಟೆ 30 ಬಿಲಿಯನ್ ಡಾಲರ್‌ನಷ್ಟಿದ್ದು, 2022ರ ವೇಳೆಗೆ 45 ಬಿಲಿಯನ್ ಡಾಲರ್‌ನಷ್ಟಗಲಿದೆ ಎನ್ನುವ ಅಂದಾಜಿದೆ. ಪ್ರತೀ ವರ್ಷ ವಿಜ್ಞಾನ, ತಂತ್ರಜ್ಞಾನ, ಕಾನೂನೂ, ವಾಸ್ತುಶಿಲ್ಪ ಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಗಣಿತ ವಿಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪದವಿ ಮತ್ತು ಕೌಶಲ್ಯ ಗಳಿಸುತ್ತಿರುವುದು ಕೆಪಿಓಗಳಿಗೆ ವರವಾಗಿ ಪರಿಣಮಿಸಿದೆ. ಎಲ್ಲೆಲ್ಲಿ ಕೆಲಸ?
ಬುದ್ಧಿವಂತರ ಜ್ಞಾನ ಮತ್ತು ಕೌಶಲ್ಯಗಳೆರಡನ್ನೂ ಬಳಸಿಕೊಳ್ಳುವ ಜೆನ್ ಪ್ಯಾಕ್ಟ್, ಇ ವ್ಯಾಲ್ಯೂ ಸರ್ವ್, ಉಗಮ್ ಸಲೂಷನ್ಸ್, ಗNಖ ಗ್ಲೋಬಲ್, 24/7 ಕಸ್ಟಮರ್, ಐಇಐಇಐ ಒನ್ ಸೋರ್ಸ್, ಸರ್ವಿಸ್ ಹೋಲ್ಡಿಂಗ್, ಕೋಪಲ್ ಪಾರ್ಟ್‌ನರ್, ಪಂಜಿ¿å3, ವಿಪೊ›, ಇನ್ಫೋಸಿಸ್, ಟಿಸಿಎಸ್, ಹೆಚ್‌ಸಿಎಲ್, ಐಬಿಎಮ್ ದû…, ಫಸ್ಟ್ ಸೋರ್ಸ್, ಆದಿತ್ಯ ಬಿರ್ಲಾ ಮಿನಾಕ್ಸ್ ವರ್ಲ್ಡ್ವೈಡ್‌ಗಳು ಸಮರ್ಥ ಅಭ್ಯರ್ಥಿಗಳಿಗೆ ಕೆಲಸನೀಡಿ ಉತ್ತಮ ಸಂಬಳವನ್ನೂ ನೀಡುತ್ತಿವೆ. ಭಾರತದಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಕೆಪಿಓ ಕೆಲಸಗಾರರಿದ್ದು ತಿಂಗಳ ಸಂಬಳ 50 ಸಾವಿರದಿಂದ 2 ಲಕ್ಷರೂವರೆಗೂ ಇದೆ. 2025 ರ ವೇಳೆಗೆ 5 ಟ್ರಿಲಿಯನ್ ಆರ್ಥಿಕತೆಯ ಗುರಿ ಹೊಂದಿರುವ ನಮಗೆ ಇನ್ನೂ ಹೆಚ್ಚಿನ ಸಂಖ್ಯೆಯ ಕೆಪಿಓ ತಜ್ಞರ ಅವಶ್ಯಕತೆ ಇದೆ. – ಗುರುರಾಜ್ ಎಸ್.ದಾವಣಗೆರೆ