ಮಾಡಿದರೂ ಅದನ್ನು ಹಂಗಿಸಿ ಅಪಹಾಸ್ಯ ಮಾಡಬೇಕೆಂದು ಸೋವಿಯೆಟ್ ಒಕ್ಕೂಟ ಕಾಯುತ್ತಿತ್ತು. ಈ ಕಮ್ಯುನಿಸ್ಟ್ ಸರಕಾರದ ಎಲ್ಲ ಕೆಲಸಗಳನ್ನೂ ಭಂಗಿಸಿ ಆರತಿ ಎತ್ತಬೇಕೆಂದು ಅಮೆರಿಕ ಹೊಂಚುಹಾಕುತ್ತಿತ್ತು. ಅದೇ ಸಮಯದಲ್ಲಿ ವಿಶ್ವಸಂಸ್ಥೆಯಲ್ಲಿ ವಾರ್ಸಿಕ ಸಭೆ ಕರೆಯಲಾಯಿತು. ಅಮೆರಿಕ ಮತ್ತು ಸೋವಿಯೆಟ್ ರಾಷ್ಟ್ರ ಗಳ ಅಧ್ಯಕ್ಷರೂ ಹಾಜರಿದ್ದರು. ಸಭೆಯಲ್ಲಿ ಮಾತಾಡುವ ಮೊದಲ ಅವಕಾಶ ಸಿಕ್ಕಿದ್ದು ಆಗಿನ ಅಮೆರಿಕನ್ ಅಧ್ಯಕ್ಷ ಐಸೆನ್ ಹೋವೆರ್‌ಗೆ. ಆತ “ಅಮೆರಿಕ ಮುಕ್ತ ಸ್ವಾತಂತ್ರ್ಯವನ್ನು ಗೌರವಿಸುವ ರಾಷ್ಟ್ರ. ಒಂದು ವೇಳೆ ಯಾರಾದರೂ ಟೈಮ್ಸ್ ಸ್ಕ್ವೇರ್‌ನಲ್ಲಿ ನಿಂತು ಅಮೆರಿಕದ ಅಧ್ಯಕ್ಷ ಮುಠ್ಠಾಳ ಎಂದು ಕೂಗಿದರೂ ಅವನನ್ನು ಬಂಧಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆ ತೀರಾ ಕಡಿಮೆ. ಅಷ್ಟೇಕೆ, ಇಂತಹ ಉದ್ಧಟತನ ಪ್ರದರ್ಶಿಸಿದ ಮೇಲೆ ಅವನಿಗೆ ಒಂದಷ್ಟು ಬೆಂಬಲಿಗರು ಕೂಡ ಹುಟ್ಟಿಕೊಂಡಾರು’ ಎಂದ. ಅಮೆರಿಕದಲ್ಲಿ ಎಷ್ಟೊಂದು ವ್ಯಕ್ತಿಸ್ವಾತಂತ್ರ್ಯ ಇದೆ, ಪ್ರಜಾಪ್ರಭುತ್ವವನ್ನು ತನ್ನ ದೇಶ ಎಷ್ಟು ಗೌರವಿಸುತ್ತಿದೆ ಎನ್ನುವುದನ್ನು ಹೇಳಿ
ಪರೋಕ್ಷವಾಗಿ ಸೋವಿಯೆಟ್ ಒಕ್ಕೂಟದ ಅಧ್ಯಕ್ಷನಿಗೆ ಇರಿಸುಮುರಿಸು ಉಂಟು ಮಾಡಬೇಕು ಎನ್ನುವುದೇ ಐಸೆನ್ ಹೋವರನ ಉದ್ದೇಶವಾಗಿತ್ತು.
Advertisement
ಅವನ ಭಾಷಣದ ಬಳಿಕ ಮಾತಾಡಬೇಕಿದ್ದವನು ಸೋವಿಯೆಟ್ ಒಕ್ಕೂಟದ ಅಧ್ಯಕ್ಷ ಕ್ರುಶ್ಚೇವ್. ಆತ ಎದ್ದು ನಿಂತು ಹೇಳಿದ: “ನನಗೆ ವ್ಯಕ್ತಿ ಸ್ವಾತಂತ್ರ್ಯ – ಪ್ರಜಾಪ್ರಭುತ್ವ ಇವುಗಳ ಬಗ್ಗೆ ಎಲ್ಲ ಗೊತ್ತಿಲ್ಲ. ಆದರೆ ಒಂದಂತೂ ನಿಜ. ಯಾವುದಾದರೂ ವ್ಯಕ್ತಿ ನಮ್ಮ ದೇಶದ ರೆಡ್ ಸ್ಕ್ವೇರ್‌ನಲ್ಲಿ ನಿಂತು, ಅಮೆರಿಕನ್ ಅಧ್ಯಕ್ಷ ಮುಠ್ಠಾಳ ಎಂದು ಕೂಗಿದರೆ, ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುವ ಮಾತು ಹಾಗಿರಲಿ, ಅವನಿಗೆ ರಾಷ್ಟ್ರದ ಗೌರವ ಪದಕ ಕೂಡ ಸಿಗುವ ಸಾಧ್ಯತೆ ಉಂಟು!